Thursday, January 21, 2021

ದೇಶ

ಪಿಪಿಇ ಕಿಟ್ ಧರಿಸಿ ಚಿನ್ನದ ಅಂಗಡಿಯಲ್ಲಿ ಕಳ್ಳತನ

Newsics.com ನವದೆಹಲಿ: ಮಾರಕ ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಧರಿಸುವ ಪಿಪಿಇ ಕಿಟ್ ಹಾಕಿದ ಕಳ್ಳನೊಬ್ಬ ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಮಾಡಿದ್ದಾನೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ನವದೆಹಲಿಯಲ್ಲಿರುವ ಕಲ್ ಕಾಜಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಪಿಪಿಇ ಕಿಟ್ ಧರಿಸಿ ಚಿನ್ನಾಭರಣ ಅಂಗಡಿಯೊಳಗೆ ಸುತ್ತಾಡಿದ್ದಾನೆ. ಗುರುತು ಸಿಗದಿರಲು ಈ ರೀತಿ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಇದೀಗ...

ಸಿಗರೇಟ್ ವಿಚಾರಕ್ಕೆ ಮಗನಿಗೇ ಬೆಂಕಿ ಹಚ್ಚಿದ್ದ ತಂದೆ; ಬಾಲಕ ಬದುಕಲೇ ಇಲ್ಲ…

newsics.com ಹೈದರಾಬಾದ್: ಅಂಗಡಿಯಿಂದ ಸಿಗರೇಟ್ ತರುವುದು ವಿಳಂಬವಾಯಿತೆಂದು ಸಿಟ್ಟಿಗೆದ್ದ ತಂದೆಯೇ ಮಗನ ಮೇಲೆ ಟರ್ಪೆಂಟ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದನು. ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕಿ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.ಜನವರಿ 17 ರಂದು ತೆಲಂಗಾಣದ ಹೈದರಾಬಾದ್'ನಲ್ಲಿ ಬೆಂಕಿ ಹಚ್ಚಿದ್ದ. ಬೆಂಕಿಯ ಉರಿ ತಾಳಲಾರದೆ ಮನೆ ಬಳಿ ಹಳ್ಳಕ್ಕೆ...

ಅಮ್ಮನ ಹೆಲ್ಮೆಟ್ ಕಾಳಜಿ, ಅಪ್ಪನ ನಿರ್ಲಕ್ಷ್ಯ ಆರೋಪ

Newsics.com ರಾಂಚಿ: ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಅತ್ಯುತ್ತಮ ಚಿತ್ರವನ್ನು ಸಾಮಾಜಿಕ ಜಾಲ ತಾಣದ ಮೂಲಕ ಶೇರ್ ಮಾಡಿದ್ದಾರೆ. ಪ್ರಸಕ್ತ ಜಾರ್ಖಂಡ್ ನ ದುಮ್ಕಾ ಜಿಲ್ಲಾಧಿಕಾರಿಯಾಗಿರುವ ರಾಜೇಶ್ವರಿ ಬಿ ಅವರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಅಮ್ಮ ತನ್ನ ಇಬ್ಬರು ಮಕ್ಕಳು ಹೆಲ್ಮೆಟ್ ಧರಿಸಿರುವುದನ್ನು ಖಾತರಿಪಡಿಸಿದ್ದಾರೆ. ಸುರಕ್ಷಿತವಾಗಿ ವಾಹನ...

ಅಮಿತಾಭ್ ಬಚ್ಚನ್ ಮನವಿಗೆ ಸ್ಪಂದನೆ: ಪೊಲೀಸ್ ದಂಪತಿ ವರ್ಗಾವಣೆ

Newsics.com ಭೋಪಾಲ್:  ಕೌನ್ ಬನೇಗಾ ಕರೋಡ್ ಪತಿಯಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಮಾಡಿದ ಮನವಿಗೆ ಮಧ್ಯಪ್ರದೇಶ ಸರ್ಕಾರ ಸ್ಪಂದಿಸಿದೆ. ಎರಡು ಪ್ರತ್ಯೇಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತಿ ಮತ್ತು ಪತ್ನಿಗೆ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಿದೆ. ವಿವೇಕ್ ಕುಮಾರ್ ಮಧ್ಯಪ್ರದೇಶದ ಮಂಡಸೂರ್ ನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿಗೆ ದೂರದ...

ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು

Newsics.com ನವದೆಹಲಿ: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಕಳೆದ 140 ದಿನಗಳಿಂದ ರಾಗಿಣಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡು ಬಾರಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್, ಇಂದು ಪ್ರಕರಣದ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಹಲವು ಆರೋಪಿಗಳಿಗೆ ನ್ಯಾಯಾಲಯ ಜಾಮೀನು...

ಭಾರತಕ್ಕೆ ಮರಳಿದ ಕ್ರಿಕೆಟ್ ಆಟಗಾರರು,ಸಂತಸ ಹಂಚಿಕೊಂಡ ಪಂತ್

Newsics.com ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿ ತಿವಿಕ್ರಮ ಮೆರೆದ ಭಾರತದ ಕ್ರಿಕೆಟ್ ಆಟಗಾರರಲ್ಲಿ ಹೆಚ್ಚಿನವರು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಮತ್ತು ಕೋಚ್ ರವಿಶಾಸ್ತ್ರಿ  ಮುಂಬೈಗೆ ಆಗಮಿಸಿದ್ದಾರೆ.  ರಿಷಬ್ ಪಂತ್ ನವದೆಹಲಿಗೆ ಹಿಂತಿರುಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪಂತ್, ಅಂತಿಮ ಪಂದ್ಯದ ಗೆಲುವಿನಿಂದ ತುಂಬ ಸಂತಸವಾಗಿದೆ ಎಂದು ಹೇಳಿದರು. ಅಂತಿಮ ಪಂದ್ಯ...

ಒಂದೇ ದಿನ 15,223 ಜನರಿಗೆ ಕೊರೋನಾ ಸೋಂಕು 151 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  15, 223 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.10,883 ಕ್ಕೆ ತಲುಪಿದೆ.    ಕಳೆದ 24 ಗಂಟೆಯಲ್ಲಿ ಕೊರೋನಾ 151 ಮಂದಿಯ ಪ್ರಾಣ ಕಸಿದುಕೊಂಡಿದೆ. ಮಾರಕ  ಕೊರೋನಾ ಇದುವರೆಗೆ 1,52, 869 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ    1,02,...

ಮುಂಬೈನ ಹಲವೆಡೆ ಎನ್ ಸಿ ಬಿ ದಾಳಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸೆರೆ

Newsics.com ಮುಂಬೈ: ಮಾದಕ ದ್ರವ್ಯ ನಿಯಂತ್ರಣ  ದಳ ಬ್ಯೂರೋದ ಅಧಿಕಾರಿಗಳು ಮುಂಬೈ ಮಹಾನಗರದ ಹಲವೆಡೆ ದಾಳಿ  ನಡೆಸಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಭೂಗತ ಪಾತಕಿ ದಾವೂದ್  ಇಬ್ರಾಹಿಂ ಸಹಚರ ಟಿಂಕೋ ಪಥಾನ್ ನನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ದಾಳಿ ಈಗಲೂ ಮುಂದುವರಿದಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮುಂಬೈ ಮಹಾನಗರದಲ್ಲಿ ಮಾದಕ...

ಕರ್ನಾಟಕ ಅತ್ಯಂತ ನವೀನ ರಾಜ್ಯ-ಎನ್’ಐಟಿಐ

newsics.com ನವದೆಹಲಿ: ಫೆಡರಲ್ ಪಾಲಿಸಿ ಥಿಂಕ್ ಟ್ಯಾಂಕ್ ಎನ್ಐಟಿಐ ಆಯೋಗ್ಸ್ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2020 ರ ಪ್ರಕಾರ ಕರ್ನಾಟಕವು ಸತತ ಎರಡನೇ ವರ್ಷ ಅತ್ಯಂತ ನವೀನ ರಾಜ್ಯ ಎನಿಸಿಕೊಂಡಿದೆ. ಮಾನವ ಬಂಡವಾಳ, ಹೂಡಿಕೆ, ಹೊಸ ವ್ಯವಹಾರಗಳ ನೋಂದಾವಣೆಯನ್ನು ಪರಿಗಣಿಸಿ ಎನ್'ಐಟಿಐ ರಾಜ್ಯಗಳನ್ನು ಶ್ರೇಣೀಕರಣ ನೀಡಿದೆ. ತಮಿಳುನಾಡು ಎರಡನೇ ಸ್ಥಾನ ಪಡೆದುಕೊಂಡರೆ ತೆಲಂಗಾಣ ನಾಲ್ಕನೇ ಸ್ಥಾನ ಪಡೆದಿದೆ...

ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ಇನ್ನಿಲ್ಲ

newsics.com ಕಣ್ಣೂರು(ಕೇರಳ): ಮಲಯಾಳಂ ಚಿತ್ರರಂಗದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ (98) ಬುಧವಾರ ನಿಧನರಾದರು. ವೃದ್ಧಾಪ್ಯ ಮತ್ತು ಸಹಜ ಅನಾರೋಗ್ಯದಿಂದ ಕಳೆದೊಂದು ದಶಕದಿಂದ ಅವರು ಚಿತ್ರರಂಗದಿಂದ ದೂರವಿದ್ದರು.ನ್ಯುಮೋನಿಯಾ ಹಿನ್ನೆಲೆಯಲ್ಲಿ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟಿತ್ತು. ಉನ್ನಿಕೃಷ್ಣನ್ ಕೆಲವು ದಿನಗಳ ಚಿಕಿತ್ಸೆಯ ನಂತರ ಎರಡು ದಿನಗಳ...

ಮತ್ತೆ ಸಭೆ ವಿಫಲ :ಸರ್ಕಾರದ ಆಫರ್ ಒಪ್ಪದ ರೈತರು

newsics.com ನವದೆಹಲಿ: ಸರ್ಕಾರ ಮತ್ತು ಪ್ರತಿಭಟನಾಕಾರ ರೈತ ಮುಖಂಡರ ನಡುವಿನ ಹತ್ತನೇ ಸುತ್ತಿನ ಮಾತುಕತೆ ಇಂದು ಮುಕ್ತಾಯಗೊಂಡಿದೆ. ಸಭೆಯಲ್ಲಿ, ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲು ಕೇಂದ್ರವು ಪ್ರಸ್ತಾಪಿಸಿದೆ. ಆದರೆ ರೈತರು ತಿರಸ್ಕರಿಸಿದ್ದು ನಾಳೆ ಸಭೆ ನಡೆಸಿ ಅದರ ಬಗ್ಗೆ ಮಾತನಾಡುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಉಗ್ರಾಹಾನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾಹನ್...

ಚಾರ್ಜ್ ಶೀಟ್ ಸಲ್ಲಿಕೆಯಾಗಿ 23 ದಿನದಲ್ಲಿ ಅತ್ಯಾಚಾರ ಆರೋಪಿಗೆ ಮರಣದಂಡನೆ ನೀಡಿದ ಕೋರ್ಟ್

newsics.com ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗೆ ಗಾಜಿಯಾಬಾದ್ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಕೆಯಾಗಿ 23 ದಿನಗಳಲ್ಲಿ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆಯನ್ನು ನೀಡಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ವರ್ಷಾನುಗಟ್ಟಲೆ ವಿಚಾರಣೆ ಹಂತದಲ್ಲಿಯೇ ಇರುತ್ತದೆ. ಆದರೆ ಈಗ ಕೋರ್ಟ್ ತ್ವರಿತವಾಗಿ ತೀರ್ಪು ನೀಡಿದೆ. ಅ. 21 ರಂದು ಗಾಜಿಯಾಬಾದ್ ನ ಕವಿನಗರ...

ಕಂಗನಾ ಟ್ವಿಟರ್ ಖಾತೆ ತಾತ್ಕಾಲಿಕ ಅಮಾನತು

newsics.com ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಟ್ವಿಟರ್ ಖಾತೆಯನ್ನು ಬುಧವಾರ (ಜ.20) ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಸೈಫ್ ಆಲಿ ಖಾನ್ ನಟನೆಯ ತಾಂಡವ್ ಸಿರೀಸ್ ಕುರಿತು 'ಹಿಂದೂ ದೇವರನ್ನು ಅವಮಾನಿಸಿದ್ದಕ್ಕೆ ಅವರ ತಲೆ ತೆಗೆಯಬೇಕು' ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದ ಕಂಗನಾ ನಂತರ ಅದನ್ನು ಡಿಲೀಟ್ ಮಾಡಿದ್ದರು. ಆದರೂ ಅವರ ಹೇಳಿಕೆ ವಿವಾದಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ...

ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅಸ್ವಸ್ಥ: ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

newsics.com ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅಸ್ವಸ್ಥಗೊಂಡಿದ್ದು, ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ಜನವರಿ 27, 2021ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಶಿಕಲಾ ನಟರಾಜನ್ ಅವರಿಗೆ ಸದ್ಯ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಗತ್ಯ ಬಿದ್ದರೆ ಬೆಂಗಳೂರಿನ...

ಯುವತಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ, ಜೀವಂತ ದಹನಕ್ಕೆ ಯತ್ನ

Newsics.com ಭೋಪಾಲ್:  ಮಧ್ಯಪ್ರದೇಶದ ಇಂಧೋರ್ ನಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಅಪಹರಿಸಿ ದುರಳರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 19ರ ಹರೆಯದ ಯುವತಿ ಮನೆಗೆ ಬರುತ್ತಿದ್ದಾಗ ಮೊದಲಿಗೆ ಅಕ್ಷಯ ಎಂಬ ಯುವಕನನ್ನು ಭೇಟಿ ಮಾಡಿದ್ದಳು. ಅಕ್ಷಯ ಜತೆ ಆತನ ಸ್ನೇಹಿತ ಕೂಡ ಇದ್ದ ಎಂದು ವರದಿಯಾಗಿದೆ. ಬಳಿಕ ಪಾನೀಯ ಸೇವಿಸಿದ ಬಳಿಕ ಅಸ್ವಸ್ಥಗೊಂಡ ಯುವತಿಯನ್ನು...

ಗಂಟೆಯೊಳಗೆ ಊಟ ಮುಗಿಸಿ ಹೊಸ ಬುಲೆಟ್ ಬೈಕ್ ಗೆಲ್ಲಿ!

newsics.com ಪುಣೆ: ಪುಣೆಯ ರೆಸ್ಟೋರೆಂಟ್' ತನ್ನ ಗ್ರಾಹಕರಿಗೆ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿದೆ. ಪುಣೆಯ ಹೊರವಲಯದಲ್ಲಿರುವ ವಾಡ್ಗಾಂವ್ ಮಾವಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶಿವರಾಜ್ ಹೋಟೆಲ್, ಕೊರೋನಾ ಮಧ್ಯೆ ಗ್ರಾಹಕರನ್ನು ಆಕರ್ಷಿಸಲು 'ವಿನ್ ಎ ಬುಲೆಟ್ ಬೈಕ್' ಸ್ಪರ್ಧೆಯನ್ನು ನಡೆಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ನಾನ್-ವೆಜ್ ಥಾಲಿಯನ್ನು 60 ನಿಮಿಷಗಳಲ್ಲಿ ತಿಂದು ಮುಗಿಸಬೇಕು. ಆಗ ಬಹುಮಾನವಾಗಿ 1.65 ಲಕ್ಷ ರೂಪಾಯಿ ಮೌಲ್ಯದ...

ಟಿಆರ್’ಪಿ ಪ್ರಕರಣ: BARC ಮಾಜಿ ಸಿಇಒ ದಾಸ್ ಗುಪ್ತಾ ಜಾಮೀನು ಅರ್ಜಿ ವಜಾ

newsics.com ಮುಂಬೈ: ಟಿಆರ್‌ಪಿ ಪ್ರಕರಣದಲ್ಲಿ BARC ಮಾಜಿ ಸಿಇಒ ದಾಸ್ ಗುಪ್ತಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ದಾಸ್‌ಗುಪ್ತಾ ಅವರನ್ನು ಡಿಸೆಂಬರ್ 24 ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ರಿಪಬ್ಲಿಕ್ ಟಿವಿ ರೇಟಿಂಗ್ ಹೆಚ್ಚಿಸಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಸೆಷನ್ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ ಬಾಂಬೆ...

ವಿಮಾನದಲ್ಲೇ ಹೃದಯಾಘಾತ; ತುರ್ತು ಭೂಸ್ಪರ್ಶ, ಬಾಲಕಿ ಸಾವು

newsics.com ನಾಗ್ಪುರ(ಮಹಾರಾಷ್ಟ್ರ): ವೈದ್ಯಕೀಯ ಚಿಕಿತ್ಸೆಗೆಂದು ಲಖ್ನೋದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಎಂಟು ವರ್ಷದ ಬಾಲಕಿಗೆ ಹೃದಯಾಘಾತವಾಗಿದೆ.ತಕ್ಷಣವೇ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ವಿಮಾನ ನಿಲ್ದಾಣದಿಂದ ಕರೆದೊಯ್ಯುತ್ತಿದ್ದಾಗಲೇ ಬಾಲಕಿ ಮೃತಪಟ್ಟಿದ್ದಾಳೆ.ಉತ್ತರ ಪ್ರದೇಶದ ಸಾಹೆರಿಕಾ ಗ್ರಾಮ ನಿವಾಸಿಯಾಗಿರುವ ಬಾಲಕಿಯನ್ನು ಆಕೆಯ ಪೋಷಕರೊಂದಿಗೆ ಖಾಸಗಿ ವಿಮಾನದಲ್ಲಿ ಲಖ್ನೋದಿಂದ ಮುಂಬೈಗೆ ಚಿಕಿತ್ಸೆಗೆ ಕರೆತರಲಾಗುತ್ತಿತ್ತು. ಮಾರ್ಗ...

ಚೆನ್ನೈನ ‘ಜೀಸಸ್ ಕಾಲ್ಸ್’ ಸಂಸ್ಥೆಯ 28 ಕಡೆ ಐಟಿ ದಾಳಿ

newsics.com ಚೆನ್ನೈ (ತಮಿಳುನಾಡು): ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ತಮಿಳುನಾಡಿನಾದ್ಯಂತ ಜೀಸಸ್ ಕಾಲ್ಸ್ ಸಂಸ್ಥೆಗೆ ಸಂಬಂಧಿಸಿದ 28 ಸ್ಥಳಗಳ ಮೇಲೆ ದಾಳಿ ನಡೆಸಿದೆ.ಕೊಯಮತ್ತೂರಿನ ಕರುನ್ಯಾ ಇನ್'ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್ ಮತ್ತು ಚೆನ್ನೈನಲ್ಲಿರುವ ಕ್ರಿಶ್ಚಿಯನ್ ಮಿಷನರಿ 'ಜೀಸಸ್ ಕಾಲ್ಸ್' ಮೇಲೆ ದಾಳಿ ನಡೆಸಿದೆ. ದಿವಂಗತ ಡಿಜಿಎಸ್...

ರೈತರ ಟ್ರಾಕ್ಟರ್ ಚಳವಳಿಗೆ ತಡೆ ನೀಡಲು ಸುಪ್ರೀಂ ನಕಾರ

newsics.com ನವದೆಹಲಿ: ದೇಶದಲ್ಲಿ ಕೃಷಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಪ್ರತಿಭಟನೆ, rally ಬಗ್ಗೆ ನಾವು ಯಾವುದೇ ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.ಈ ಮೂಲಕ ರೈತರ ಹೋರಾಟದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಜನವರಿ 26ರಂದು ರೈತರ ಟ್ರಾಕ್ಟರ್ rallyಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್'ನಲ್ಲಿ ಕೇಂದ್ರ...

ಗಡಿಯೊಳಗೆ ನುಸುಳಲು ಯತ್ನ; ಮೂವರು ಪಾಕ್ ಉಗ್ರರ ಹತ್ಯೆ

newsics.com ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ 3 ಉಗ್ರರನ್ನು ಭಾರತೀಯ ಸೇನಾಪಡೆ ಬುಧವಾರ ಹತ್ಯೆ ಮಾಡಿದೆ.ಅಖ್ನೂರ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ...

ದೇಶದಲ್ಲಿ ಒಂದೇ ದಿನ 13823 ಮಂದಿಗೆ ಕೊರೋನಾ ಸೋಂಕು, 162 ಜನ ಸಾವು

newsics.com ನವದೆಹಲಿ: ಕಳೆದ 24 ಗಂಟೆಯಲ್ಲಿ 13,823 ಜನರಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,05,95,660 ಕ್ಕೆ ಏರಿಕೆಯಾಗಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 162 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ...

ಡಿಜಿಟಲ್ ಸಾಲ ಕಿರುಕುಳ: ಶೀಘ್ರವೇ ಆರ್ ಬಿ ಐ ಅಂಕುಶ

Newsics.com ಮುಂಬೈ: ಮೊಬೈಲ್ ಆ್ಯಪ್ ಆಧಾರಿತ ಡಿಜಿಟಲ್ ಸಾಲ ವ್ಯವಹಾರದ ಮೇಲೆ ಅಂಕುಶ ಹಾಕುವ ಸಾಧ್ಯತೆಯನ್ನು ಆರ್ ಬಿ ಐ ಗಂಭೀರವಾಗಿ ಪರಿಗಣಿಸುತ್ತಿದೆ. ಸಾಲ ವಸೂಲಾತಿ ಹೆಸರಿನಲ್ಲಿ ಗ್ರಾಹಕರಿಗೆ ಚಿತ್ರಹಿಂಸೆ ನೀಡಿರುವುದು ಮತ್ತು ಆತ್ಮಹತ್ಯೆ ಪ್ರಕರಣ ವರದಿಯಾಗಿರುವ  ಹಿನ್ನೆಲೆಯಲ್ಲಿ ಆರ್ ಬಿ ಐ ಈ ಕ್ರಮಕ್ಕೆ ಮುಂದಾಗಿದೆ. ಬಹುತೇಕ ಡಿಜಿಟಲ್ ಸಾಲ ಆ್ಯಪ್ ಸಂಸ್ಥೆಗಳು ಚೀನಾ ಮೂಲ...

ಡ್ರಾಗನ್ ಹಣ್ಣಿನ ಹೆಸರು ಬದಲಾಯಿಸಿದ ಗುಜರಾತ್ ಸರ್ಕಾರ

Newsics.com ಗಾಂಧಿನಗರ: ಮಾರುಕಟ್ಟೆಯಲ್ಲಿ ಚಿರಪರಿಚಿತವಾಗಿರುವ ಡ್ರಾಗನ್ ಹಣ್ಣಿನ ಹೆಸರು ಬದಲಾಗಿದೆ. ಗುಜರಾತಿನಲ್ಲಿ ಅದು ಕಮಲಂ ಹೆಸರಿನಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ. ಡ್ರಾಗನ್ ಹಣ್ಣು ಕಮಲವನ್ನು ಹೋಲುತ್ತಿರುವುದರಿಂದ ಅದಕ್ಕೆ ಕಮಲಂ ಎಂದು ಹೆಸರಿಡಲಾಗಿದೆ. ಇದು ಗುಜರಾತ್ ಸರ್ಕಾರದ ವಾದ. ಮೂಲ ಹೆಸರು ಚೀನಾದ ಜತೆ ಸಂಬಂಧ ಹೊಂದಿರುವುದರಿಂದ ಹೊಸ ಹೆಸರಿಡಲಾಗಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಹೆಸರು ಏನೇ...

ಇಂದಿನಿಂದ ಭಾರತ-ಫ್ರಾನ್ಸ್ ವೈಮಾನಿಕ ಸಮರಾಭ್ಯಾಸ ಆರಂಭ

Newsics.com       ನವದೆಹಲಿ: ಭಾರತ ಮತ್ತು ಫ್ರಾನ್ಸ್ ಮಧ್ಯೆ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ವೈಮಾನಿಕ ಸಮರಾಭ್ಯಾಸಕ್ಕೆ ಇಂದು ಚಾಲನೆ ದೊರೆಯಲಿದೆ. ರಾಜಸ್ತಾನದ ಜೋಧಪುರ ವಾಯು ನೆಲೆಯಲ್ಲಿ ಇದಕ್ಕೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಭಾರತದ ವಾಯುಪಡೆಯ ರಫೇಲ್ ಯುದ್ದವಿಮಾನ ಈ ಸಮರಾಭ್ಯಾಸದ ಪ್ರಮುಖ ಆಕರ್ಷಣೆ. ಫ್ರಾನ್ಸ್ ಕೂಡ ರಫೇಲ್ ವಿಮಾನವನ್ನು ಈ ಸಮರಾಭ್ಯಸದಲ್ಲಿ ಬಳಸುತ್ತಿದೆ. ಸುಖೋಯಿ ಮತ್ತು...

ಪಶ್ಚಿಮಬಂಗಾಳದಲ್ಲಿ ರಸ್ತೆ ಅಪಘಾತ:13ಮಂದಿ ಸಾವು

newsics.com ಪಶ್ಚಿಮ ಬಂಗಾಳ: ಮಂಜು ಕವಿದ ರಸ್ತೆಯಲ್ಲಿ ಪ್ರಯಾಾಣಿಸಿದ ಪರಿಣಾಮ ಜಲ್ಲಿಕಲ್ಲು ತುಂಬಿದ ಟ್ರಕ್ ನಿಯಂತ್ರಣ ಕಳೆದುಕೊಂಡು 3ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಕಾರ್ ಮೇಲೆ ಜಲ್ಲಿಕಲ್ಲುಗಳು ಉರುಳಿ ಬಿದ್ದಿವೆ. ಈ  ಸರಣಿ ಅಪಘಾತದ  ಪರಿಣಾಮ13 ಮಂದಿ‌ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ನಗರದಲ್ಲಿ ನಿನ್ನೆ (ಜ.19) ರಾತ್ರಿ ಈ...

ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!

newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು. ಜ.18 ರಂದು ಮಧ್ಯಾಹ್ನ ನರಿಯೊಂದು ಈ ರೀತಿ ನುಗ್ಗಿತ್ತು. ಆದರೆ ಯಾರ ಮೇಲೆಯೂ ದಾಳಿ ಮಾಡಲಿಲ್ಲ. ಮೆಡಿಕಲ್ ಸ್ಟೋರ್ ಸಿಬ್ಬಂದಿ...

ಕೇರಳದಲ್ಲಿ ಒಂದೇ ದಿನದಲ್ಲಿ 6186 ಮಂದಿಗೆ ಕೊರೋನಾ ಸೋಂಕು

Newsics.com ತಿರುವನಂತಪುರಂ: ದೇಶದಲ್ಲಿ ಒಟ್ಟಾರೆಯಾಗಿ ಕೊರೋನಾ ಪ್ರಕರಣ ಇಳಿಮುಖವಾಗುತ್ತಿದ್ದರೂ ಕೇರಳದಲ್ಲಿ ಮಾತ್ರ ವ್ಯಾಪಕವಾಗಿ ಹರಡುತ್ತಿದೆ. ಇದು ಕೊರೋನಾದ ಎರಡನೆ ಅಲೆ ಎಂದು ಶಂಕಿಸಲಾಗಿದೆ. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕರ್ನಾಟಕ್ಕೆ ಆಗಮಿಸುತ್ತಿದ್ದು, ಇದು ಆತಂಕಕ್ಕೆ ಕೂಡ ಕಾರಣವಾಗಿದೆ. 66,259 ಕೊರೋನಾ ಪರೀಕ್ಷೆ ನಡೆಸಲಾಗಿದ್ದು. ಅದರಲ್ಲಿ ಶೇಕಡ 9.34 ಮಂದಿಯಲ್ಲಿ ರೋಗ ಲಕ್ಷಣ ದೃಢಪಟ್ಟಿದೆ.  ಕೊರೋನಾ ಸೋಂಕಿಗೆ ತುತ್ತಾಗಿದ್ದ...

ಜಮ್ಮು ಕಾಶ್ಮೀರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 3. 6 ದಾಖಲು

newsics.com ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.6 ದಾಖಲಾಗಿದೆ. ರಾತ್ರಿ 9.13ರ ಹೊತ್ತಿಗೆ ಭೂಮಿ ಕಂಪಿಸಿದೆ ಎಂದು ಭೂಗರ್ಭ ಶಾಸ್ತ್ರ ಇಲಾಖೆ ಬಹಿರಂಗಪಡಿಸಿದೆ. ಇದು ಕಡಿಮೆಮಟ್ಟದ ಭೂಕಂಪ ವಾಗಿದೆ. ಭೂಕಂಪದಿಂದ ಯಾವುದೇ  ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ನೇಪಾಳ ಸೇರಿದಂತೆ ಹಿಮಾಲಯದ ತಪ್ಪಲಿನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ  ಭೂಕಂಪ...

ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ ಪಂತ್ ಹಳೆಯ ಫೋಟೋ

Newsics.com ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ ರಿಷಬ್ ಪಂತ್ ಅವರ ಹಳೆಯ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದೆ. ಚಿಕ್ಕವನಾಗಿದ್ದಾಗ ರಿಷಬ್ ಪಂತ್, ಆಶೀಶ್ ನೆಹ್ರಾ ಅವರ ಅಟೋಗ್ರಾಫ್ ಪಡೆಯುತ್ತಿರುವ ಚಿತ್ರ ಇದಾಗಿದೆ. ಕೀಪಿಂಗ್ ಮಾಡುವ ವೇಳೆ ಹಲವು ಕ್ಯಾಚ್ ಗಳನ್ನು ಕೈ ಬಿಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ...
- Advertisement -

Latest News

ಜಯಲಲಿತಾ ಆಪ್ತೆ ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್

Newsics.com ಬೆಂಗಳೂರು: ಜ್ವರ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರನ್ನು ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್...
- Advertisement -

ಉದ್ಯಮಕ್ಕಿಲ್ಲ ವಯಸ್ಸಿನ ಹಂಗು

ತಮ್ಮ ಇಳಿವಯಸ್ಸಿನಲ್ಲಿ ಕಿರು ಉದ್ಯಮವೊಂದನ್ನು ಆರಂಭಿಸಿ ಯಶಸ್ವಿಯಾದ ಮಂಗಳೂರಿನ ಸರಸ್ವತಿ ಭಟ್ ಅವರ ಯಶೋಗಾಥೆಯಿದು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ವಿವಿಧ ಬಗೆಯ ಸಂಡಿಗೆಗಳು, ತಂಬುಳಿ ಪುಡಿಗಳನ್ನು, ಉಪ್ಪಿನಕಾಯಿಗಳನ್ನು ತಯಾರಿಸುವುದು...

ಇದು ಪಿಪಿಟ್ ಪಿಪಿಟ್ ಪಿಪಳೀಕ…!

ಗುಬ್ಬಿಯ ಲಕ್ಷಣಗಳನ್ನೇ ಹೋಲುವ ಪಿಪಳೀಕ, ತನ್ನ ವಿಶಿಷ್ಟ ಬಗೆಯ ಕೂಗಿನಿಂದಾಗಿ ಇಂಗ್ಲಿಷ್'ನಲ್ಲಿ ಪಿಪಿಟ್ ಎಂದೇ ಕರೆಸಿಕೊಂಡಿದೆ. ದಕ್ಷಿಣ ಏಷ್ಯಾದಲ್ಲಿ ಹದಿನಾಲ್ಕು ಬಗೆಯ ಪಿಪಳೀಕಗಳಿದ್ದು, ತೆರೆದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತೆಳು ಕಂದು...

ಸಂಕ್ರಾಂತಿ ಬದುಕಲ್ಲೂ ಬದಲಾವಣೆ ತರಲಿ

ಎಳ್ಳು-ಬೆಲ್ಲದ ಹಬ್ಬ ಮಕರ ಸಂಕ್ರಾಂತಿ. ರೈತರಿಗೆ ಸುಗ್ಗಿ ಹಬ್ಬವೂ ಹೌದು. ಈ ದಿನದಂದು ಬೆಲ್ಲ, ಎಳ್ಳು, ಕಡಲೆಬೀಜ, ಕೊಬ್ಬರಿಗಳೇ ಮನುಷ್ಯ-ಮನುಷ್ಯರನ್ನು ಬೆಸೆಯುವ ಪದಾರ್ಥಗಳು. ಎಳ್ಳನ್ನು ಹಂಚುವ ಮೂಲಕ ದುರ್ಗುಣಗಳನ್ನು ನಾಶ...

ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿ ಜಾಗೃತವಾಗಲಿ

ಇಂದು (ಜನವರಿ 12) ರಾಷ್ಟ್ರೀಯ ಯುವದಿನ. ಯುವಶಕ್ತಿಗೆ ಯಾವ ಅಡೆತಡೆಯೂ ಇಲ್ಲ. ಅವರಿಗೆ ಬೇಕಿರುವುದು ಮಾರ್ಗದರ್ಶನ ಮಾತ್ರ. ರಾಷ್ಟ್ರ ನಿರ್ಮಾಣಕ್ಕಾಗಿ ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಚಾನಲೈಸ್ ಮಾಡುವುದೊಂದೇ ಈಗಿರುವ ಸವಾಲು....
error: Content is protected !!