Saturday, January 28, 2023

ಕರ್ನಾಟಕ

ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ

Newsics.Com ಬೆಂಗಳೂರು: ತೆಲುಗಿನ ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ನಾರಾಯಣ ಹೃದಯಾಲಯ ತಜ್ಞರು ತಿಳಿಸಿದ್ದಾರೆ. ಹೆಲ್ತ್ ಬುಲೆಟಿನ್ ಪ್ರಕಾರ , ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿದೆ. ಹೃದಯದ ರಕ್ತನಾಳುಗಳು ಬ್ಲಾಕ್...

ಅಣ್ಣ-ತಮ್ಮನ ನಡುವೆ ಜಗಳ, ತಮ್ಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Newsics.Com ಉಡುಪಿ: ಅಣ್ಣ ತಮ್ಮನ ನಡುವೆ ಜಮೀನಿಗಾಗಿ ಜಗಳವಾಗಿದ್ದು, ಮನನೊಂದ ತಮ್ಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಚ್ಚೇರಿಪೇಟೆಯಲ್ಲಿ ನಡೆದಿದೆ. ಮನೆಯಲ್ಲೇ ಅಣ್ಣ ತಮ್ಮ ಜಗಳ ಆಡಿದ್ದಾರೆ. ತಮ್ಮ ಕೃಷ್ಣ ಅಣ್ಣನ ಮನೆಗೆ ಬೆಂಕಿ...

ಮುಂದುವರಿದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ನಿರ್ಲಕ್ಷ್ಯಕ್ಕೆ ಆಕ್ರೋಶ

newsics.com ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಐದನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟರೂ ಸರ್ಕಾರ ಮಾತ್ರ ದಿವ್ಯ ಮೌನ ತಳೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಚಿವ ಹಾಲಪ್ಪ ಆಚಾರ್ ಅವರು ಪ್ರತಿಭಟನಾ ನಿರತರ ಜತೆ ಮಾತುಕತೆ ನಡೆಸುವ ಇಂಗಿತ ಕೂಡ ವ್ಯಕ್ತಪಡಿಸಿಲ್ಲ. ಇದು...

ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ವಿಮಾನ ದುರಂತ ತಪ್ಪಿಸಲು ಕ್ರಮ

newsics.com ಬೆಂಗಳೂರು: ಪ್ರತಿಷ್ಟಿತ ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ  ಬೆಂಗಳೂರಿನ ಯಲಹಂಕ ವಾಯುನೆಲೆಯ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಮಾಂಸ ಆಹಾರದ ಹೋಟೆಲ್ ಗಳನ್ನು ಕೂಡ ಮುಚ್ಚುವಂತೆ ಸೂಚನೆ ನೀಡಲಾಗಿದೆ. ಜನವರಿ 30ರಿಂದ ಫೆಬ್ರವರಿ 20ರ ತನಕ ಈ ಆದೇಶ ಜಾರಿಯಲ್ಲಿ ಇರಲಿದೆ. ಏರ್ ಶೋದಲ್ಲಿ ಹಲವು ವಿಮಾನಗಳು...

ಮಂಗಳೂರು ಸ್ಫೋಟ ಪ್ರಕರಣ:ಶಂಕಿತ ಆರೋಪಿ ಶಾರೀಕ್ ಶೀಘ್ರ ಎನ್ ಐ ಎ ವಶಕ್ಕೆ

newsics.com ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಶಾರೀಕ್  ಬಹುತೇಕ ಗುಣಣುಖನಾಗಿದ್ದು, ಸದ್ಯದಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆಯಿಂದ  ಬಿಡುಗಡೆಯಾಗಲಿದ್ದಾನೆ.   ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹಲವು ಮಾಹಿತಿಗಳನ್ನು ಕಲೆ ಹಾಕಿರುವ ರಾಷ್ಟ್ರೀಯ  ತನಿಖಾ ದಳ ಇದೀಗ ಆರೋಪಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವಶಕ್ಕೆ ತೆಗೆದುಕೊಳ್ಳಲು ಸಿದ್ದತೆ ನಡೆಸಿದೆ. ನವೆಂಬರ್ 19ರಂದು ಮಂಗಳೂರು ಹೊರವಲಯದ ಪಂಪ್ ವೆಲ್ ಬಳಿ ಕುಕ್ಕರ್ ಸ್ಫೋಟಗೊಂಡಿತ್ತು....

ಪ್ರಾಣಿ ಪಕ್ಷಿಗಳ ಕಳ್ಳ ಸಾಗಣೆ ಜಾಲ ಬಯಲು: ಮೂವರ ಬಂಧನ, 139 ಪ್ರಾಣಿ ಪಕ್ಷಿಗಳ ವಶ

newsics.com ಬೆಂಗಳೂರು: ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಮತ್ತು ರಾಜ್ಯ ಅರಣ್ಯ ಇಲಾಖೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಾಣಿ ಪಕ್ಷಿಗಳ ಕಳ್ಳ ಸಾಗಾಟ ಜಾಲವನ್ನು ಬಯಲಿಗೆಳೆಯಲಾಗಿದೆ.  ಬ್ಯಾಂಕಾಕ್ ನಿಂದ ಬಂದಿದ್ದ ಮೂವರು ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಿದಾಗ ಈ ಜಾಲ ಬೆಳಕಿಗೆ ಬಂದಿದೆ. ನಗರದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಕೂಡ ಶೋಧ ನಡೆಸಿ  34  ಗುಂಪುಗಳಿಗೆ ಸೇರಿದ...

ರಾಜ್ಯದಲ್ಲಿ ಮೇ ಎರಡನೆ ವಾರದಲ್ಲಿ ವಿಧಾನಸಭೆ ಚುನಾವಣೆ ಸಾಧ್ಯತೆ

newsics.com ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ ಎರಡನೆ ವಾರದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಏಪ್ರಿಲ್ 15ರ ತನಕ ಪಿಯುಸಿ ಪರೀಕ್ಷೆ ನಡೆಯಲಿರುವುದರಿಂದ ಚುನಾವಣಾ ಆಯೋಗ ಮೇ ಎರಡನೆ ವಾರದಲ್ಲಿ ಚುನಾವಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. 2018ರಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಪ್ರಸಕ್ತ ವಿಧಾನಸಭೆಯ ಅವಧಿ ಮೇ 24ರಂದು ಕೊನೆಗೊಳ್ಳಲಿದೆ. ಅದರ ಮೊದಲು ಹೊಸ...

ನಟ ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್

newsics.com  ವಿಜಯವಾಡ: ತೀವ್ರ ಅಸ್ವಸ್ಥರಾಗಿರುವ ನಟ ನಂದಮೂರಿ ತಾರಕ ರತ್ನ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರನ್ನು ದಾಖಲಿಸಲಾಗಿದೆ. ಆಂಧ್ರ ಪ್ರದೇಶದ ಕುಪ್ಪಂ ನಲ್ಲಿ ನಡೆದ ತೆಲುಗು ದೇಶಂ ಸಭೆಯಲ್ಲಿ ಭಾಗವಹಿಸಿದ್ದ  ವೇಳೆ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪಿಇಎಸ್ ವೈದ್ಯಕೀಯ ಕಾಲೇಜಿ್ಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ...

ಗಣರಾಜ್ಯೋತ್ಸವದಿನದಂದು ಪ್ರಧಾನಿ ಮೋದಿಯ ರಕ್ಷಣೆ ಹೊಣೆ ಹೊತ್ತ ಮಂಗಳೂರಿನ ಐಪಿಎಸ್ ಅಧಿಕಾರಿ

newsics..com  ಮಂಗಳೂರು: ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ನಿಂತು ಎಲ್ಲವನ್ನು ಹದ್ದು ಕಣ್ಣಿನಿಂದ ವೀಕ್ಷಿಸುತ್ತಿದ್ದ ಪೊಲೀಸ್ ಅಧಿಕಾರಿ ಮೂಲತ: ಮಂಗಳೂರಿನವರು. ಮಾಜಿ ಮೇಯರ್ ಶಂಕರ್ ಭಟ್ ಅವರ ಪುತ್ರ ಕಾರ್ತಿಕ್ ಕಶ್ಯಪ್.  ಐಪಿಎಸ್ ಅಧಿಕಾರಿಯಾಗಿರುವ ಕಾರ್ತಿಕ್ ಕಶ್ಯಪ್ ಮೂಲತ: ಕಾಸರಗೋಡಿನವರು. ಪ್ರತಿಷ್ಟಿತ ಖಂಡಿಗೆ ಮನೆತನಕ್ಕೆ ಸೇರಿದವರಾಗಿದ್ದಾರೆ. 23ನೇ ವಯಸ್ಸಿನಲ್ಲಿ...

ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬರ್ ಚಾಲಕ

newsics.com ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ. ಕೆಲವೊಮ್ಮೆ ಇಲ್ಲದ ಕಾರಣ ನೀಡಿ ಅಂತಿಮ ಕ್ಷಣದಲ್ಲಿ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದು ಸಾಮಾನ್ಯ. ಪರಿಸ್ಥಿತಿ ಈಗಿರುವಾಗ ಉಬರ್ ಕಾರು ಚಾಲಕನೊಬ್ಬ ನಿಜವಾದ ಕಾರಣ ಹೇಳಿ ರೈಡ್ ಕ್ಯಾನ್ಸಲ್ ಮಾಡುವಂತೆ ಮನವಿ ಮಾಡಿದ್ದಾನೆ. ಆಶಿ...

ಎರಡು ಕಾರು, ಮೂರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ಓರ್ವ ಸಾವು

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಎರಡು ಕಾರು ಮತ್ತು ಮೂರು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ನಾಗವಾರ- ಯಲಹಂಕ ಮುಖ್ಯ ರಸ್ತೆಯಲ್ಲಿ ಹೆಗಡೆ ನಗರದ ಬಳಿ ಈ ಅಫಘಾತ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಅಯೂಬ್ ಖಾನ್ ಎಂಬ ಯುವಕ ಮೃತಪಟ್ಟಿದ್ದಾರೆ. ಇತರ ಮೂವರಿಗೆ ಗಾಯಗಳಾಗಿವೆ. ಬಸ್ ಚಾಲಕನನ್ನು ವಶಕ್ಕೆ...

ಥೈಲ್ಯಾಂಡ್‌ನಲ್ಲಿ ಜಾಲಿ ಮೂಡ್‌ನಲ್ಲಿ ಬಿಗ್‌ ಬಾಸ್‌ ಅಮೂಲ್ಯ

newsics.com ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್‌ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ. ಈ ನಟಿ ತಮ್ಮ ಗೆಳತಿಯರ ಜೊತೆಗೆ ಥೈಲ್ಯಾಂಡ್ ಪ್ರವಾಸದಲ್ಲಿದ್ದು, ಸಖತ್ ಹಾಟ್ ಆಗಿರೋ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯರ ಸಖತ್ ಆಗಿರೋ ಫೋಟೋಗಳು ವೈರಲ್...

KSRTC ಉಪಾಧ್ಯಕ್ಷರಾಗಿ ಮೋಹನ ಮೆಣಸಿನಕಾಯಿ ಅಧಿಕಾರ ಸ್ವೀಕಾರ

newsics.com ಬೆಂಗಳೂರು: ಕೆಎಸ್ ಆರ್ ಟಿ ನೂತನ ಉಪಾಧ್ಯಕ್ಷರನ್ನಾಗಿ ಮೋಹನ ಮೆಣಸಿನಕಾಯಿ ನೇಮಕ ಮಾಡಿ ಆದೇಶಿಸಿತ್ತು. ರಾಜ್ಯ ರಸ್ತೆ ಸಾರಿಗೆ ನಿಗಮದ ಕಚೇರಿಯಲ್ಲಿ ಕೆ ಎಸ್ ಆರ್ ಟಿ ಸಿ ಉಪಾಧ್ಯಕ್ಷರಾಗಿ ಮೋಹನ ಮೆಣಸಿನಕಾಯಿ ಅವರು ಇಂದು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ ಅನ್ಬುಕುಮಾರ್ ಭಾಆಸೇ ಅವರು, ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂತ ಮೋಹನ...

ಪದವಿ ಪಡೆದ ಖುಷಿಯಲ್ಲಿ ಸಾನ್ಯಾ ಅಯ್ಯರ್

newsics.com ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಈಗ ಪದವಿ ಪಡೆದ ಖುಷಿಯಲ್ಲಿದ್ದಾರೆ. ತಾವು ಗ್ರ್ಯಾಜುಯೇಟ್ ಆಗಿರುವ ಕುರಿತ ಫೋಟೋಗಳನ್ನು ನಟಿ ಸಾನ್ಯಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಸಾನ್ಯಾ ಅಯ್ಯರ್ ಅವರು ಮಾಸ್ ಮೀಡಿಯಾ ಆ್ಯಂಡ್ ಮಾಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಫಸ್ಟ್ ಕ್ಲಾಸ್ ವಿತ್ ಡಿಸ್ಟಿಂಕ್ಷನ್ ಉತ್ತೀರ್ಣರಾಗಿದ್ದಾರೆ. ನಾನು ಗ್ರ್ಯಾಜುಯೇಟೆಡ್ ಗುರು ಎಂದು ಸಂತಸದಿಂದ...

ಸ್ಯಾಂಟ್ರೋ ರವಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

newsics.com ಬೆಂಗಳೂರು: ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ಜತೆ ಸಂಬಂಧ ಹೊಂದಿ ಡೀಲ್ ಕುದುರಿಸುತ್ತಿದ್ದ ಆರೋಪಕ್ಕೆ ಗುರಿಯಾಗಿರುವ  ಸ್ಯಾಂಟ್ರೋ ರವಿ ಅಸ್ವಸ್ಥನಾಗಿದ್ದಾನೆ.  ನಿದ್ದೆ ಮಾತ್ರೆ ಹೆಚ್ಚು ಸೇವಿಸಿದ  ಪರಿಣಮ ಆರೋಗ್ಯದಲ್ಲಿ ಏರು ಪೇರು ಸಂಭವಿಸಿದೆ. ಸ್ಯಾಂಟ್ರೋ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.  ಇದೀಗ ಪೊಲೀಸ್ ಕಣ್ಗಾವಲ್ಲಿನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೆ ಪತ್ನಿ ಮೇಲೆ ದೌರ್ಜನ್ಯ ಸೇರಿದಂತೆ...

ಹಾಸನದಲ್ಲಿ ಟಿಕೇಟ್ ಪೈಪೋಟಿ: ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹೆಚ್ ಡಿ ರೇವಣ್ಣ

newsics.com ಶೃಂಗೇರಿ: ಹಾಸನ ಕ್ಷೇತ್ರದಿಂದ ವಿಧಾನಸಭೆಯ ಟಿಕೇಟ್ ಆಕಾಂಕ್ಷಿಯಾಗಿರುವ ರೇವಣ್ಣ ಅವರ ಪತ್ನಿ ಭವಾನಿ  ರೇವಣ್ಣ ಅವರಿಗೆ  ಟಿಕೇಟ್ ಇಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ರೇವಣ್ಣ ದಂಪತಿ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದಾರೆ. ಶೃಂಗೇರಿಯಲ್ಲಿ ಶಾರದ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಸನದಲ್ಲಿ ಜೆಡಿಎಸ್ ಟಿಕೇಟ್  ನೀಡಬೇಕು ಎಂದು ಭವಾನಿ...

ವಂಚನೆ ಆರೋಪ: ಚಿತ್ರ ನಿರ್ಮಾಪಕ ಪ್ರಕಾಶ್ ಬಂಧನ

newsics.com ಬೆಂಗಳೂರು: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಪ್ರಕಾಶ್ ಎಂಬವರನ್ನು ಬಂಧಿಸಲಾಗಿದೆ. ಕೆಎಂಎಫ್ ನಲ್ಲಿ ಹುದ್ದೆ  ಕೊಡಿಸುವ ಭರವಸೆ ನೀಡಿ ಪ್ರಕಾಶ್ ವ್ಯಕ್ತಿಯೊಬ್ಬರಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಶಹಬ್ಬಾಸ್ ಬಡ್ಡಿ ಮಗನೇ ಎಂಬ ಚಿತ್ರದ ನಿರ್ಮಾಪಕನಾಗಿ ಪ್ರಕಾಶ್ ಗುರುತಿಸಿಕೊಂಡಿದ್ದರು.  ಚಿಕ್ಕಬಳ್ಳಾಪುರದ ಚರಣ್ ಎಂಬವರು ಈ ಸಂಬಂಧ 20 ಲಕ್ಷ ರೂಪಾಯಿ...

ರಾಜ್ಯಕ್ಕೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

newsics.com ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿರುವ ಅಮಿತ್ ಶಾ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಮತ್ತು ಭಾನುವಾರ  ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿರುವ ಹಲವು ಕಾರ್ಯಕ್ರಮಗಳಲ್ಲಿ  ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯತಂತ್ರ ಅಂತಿಮಪಡಿಸುವ ಸಲುವಾಗಿ ಅಮಿತ್ ಶಾ ಹಲವು ಸೂಚನೆ...

ಸಚಿವ ಅಶೋಕ್ ಉಸ್ತುವಾರಿ ವಿರೋಧಿಸಿ ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ‘ಗೋ‌ ಬ್ಯಾಕ್ ಅಭಿಯಾನ’

newsics.com ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಮಂಡ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಆರ್ ಅಶೋಕ್ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ಅಶೋಕ್ ವಿರುದ್ಧ ಇದೀಗ ಬಿಜೆಪಿಗರೇ ಸಿಡಿದೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅಭಿಯಾನ (Go Back Campaign) ಶುರುಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಹಿಸುವುದಿಲ್ಲ. ನಾವು ಬಿಜೆಪಿ ಕಾರ್ಯಕರ್ತರು....

ಬಾಲಕನ ಬಲಿ ಪಡೆದ ಚಿರತೆ ಸೆರೆ: ಕೊಲ್ಲಲು ಗ್ರಾಮಸ್ಥರ ಪಟ್ಟು

newsics.com ಮೈಸೂರು: ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿಯ ಹೊರಳಹಳ್ಳಿ ಗ್ರಾಮ ಮತ್ತು ನೆರಗ್ಯಾತನಹಳ್ಳಿ ನಡುವಿನ ತೋಟದ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಗುರುವಾರ ಬಿದ್ದಿದೆ. ಚಿರತೆ ಸೆರೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ಬಂದಿದ್ದರು. ಇದರಿಂದ ತೋಟದ ಬಳಿ ಜನಜಂಗುಳಿ ಕಂಡುಬಂತು. ಚಿರತೆಯನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆ ಅಧಿಕಾರಿಗಳು...

ಪದ್ಮವಿಭೂಷಣ ಬಯಸದೇ ಬಂದ ಭಾಗ್ಯ: ಎಸ್ಸೆಂ ಕೃಷ್ಣ

newsics.com ಬೆಂಗಳೂರು: ರಾಜಕೀಯ ನಿವೃತ್ತಿ ಜೀವನ ಆರಂಭ ಮಾಡುತ್ತಿರುವ ಈ ಸಮಯದಲ್ಲಿ ನನಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ಬಯಸದೇ ಬಂದ ಭಾಗ್ಯ ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಬೆಙಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದ್ಮವಿಭೂಷಣ ಪುರಸ್ಕಾರ ಬಂದಿದ್ದಕ್ಕೆ ಬಹಳ ಸಂತೋಷ ಆಗುತ್ತಿದೆ. ನಾನು ಮತ್ತು ಈ ಪ್ರಶಸ್ತಿಯನ್ನು ಕಳೆದ...

ಉಡುಪಿಯ ಖ್ಯಾತ ವೈದ್ಯ ಶ್ರೀಧರ ಹೊಳ್ಳ ಇನ್ನಿಲ್ಲ

newsics.com ಮಂಗಳೂರು: ಉಡುಪಿಯ ಖ್ಯಾತ ವೈದ್ಯ ಡಾ. ಶ್ರೀಧರ ಅವರು ನಿಧನಹೊಂದಿದ್ದಾರೆ. ಮನೆಯಲ್ಲಿ ಬಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದ್ದ ಅವರನ್ನು 40 ದಿನಗಳ ಹಿಂದೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ. ಉಡುಪಿಯ  ಕಲ್ಪನಾ ಚಿತ್ರಮಂದಿರದ ಬಳಿ ಇರುವ ಮಿತ್ರ ಆಸ್ಪತ್ರೆಯ  ವ್ಯವಸ್ಥಾಪಕ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಡಿಸೆಂಬರ್ 17ರಂದು ಅವರು ಮನೆಯಲ್ಲಿ ಕುಸಿದು...

ಎಸ್ ಎಂ ಕೃಷ್ಣ ಅವರನ್ನು ಅಭಿನಂದಿಸಿದ ನಟಿ ರಮ್ಯಾ

newsics.com ಬೆಂಗಳೂರು: ಪ್ರತಿಷ್ಟಿತ ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ನಟಿ ರಮ್ಯಾ ಅಭಿನಂದಿಸಿದ್ದಾರೆ. ಇದು ಹೆಮ್ಮೆಯ ಕ್ಷಣ. ಅತ್ಯುತ್ತಮ ಸುದ್ದಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ನನ್ನ ತಂದೆ ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು ಎಂದು ನಟಿ ರಮ್ಯಾ ಹೇಳಿದ್ದಾರೆ. ರಾಜಕೀಯದಲ್ಲಿ ಎಸ್ ಎಂ ಕೃಷ್ಣ...

ಕಾವೇರಿ ಸಹಿತ ರಾಜ್ಯದ 17 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ: ಸ್ಫೋಟಕ ಮಾಹಿತಿ ಬಹಿರಂಗ

newsics.com ಬೆಂಗಳೂರು: ಪರಿಸರ ಮಾಲಿನ್ಯ ಸಹಜವಾಗಿ ಹರಿಯುತ್ತಿರುವ ನದಿಗಳ ನೀರಿನ ಮೇಲೆ ಪ್ರಭಾವ ಬೀರಿದೆ. ಪರಿಣಾಮ ನೀರು ನೇರವಾಗಿ ಕುಡಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಸೇರಿದಂತೆ ರಾಜ್ಯದ ಪ್ರಮುಖ 17 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದಲ್ಲಿ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅರ್ಕಾವತಿ,...

ಅಪಾರ್ಟ್ ಮೆಂಟ್ ನಲ್ಲಿ ಯುವತಿ ಸ್ನಾನ ಮಾಡುತ್ತಿದ್ದ ದೃಶ್ಯ ಸೆರೆ: ಆರೋಪಿ ಬಂಧನ

newsics.com ಬೆಂಗಳೂರು: ನಗರದ ಅಪಾರ್ಟ್ ಮೆಂಟ್ ನ ಬಾತ್ ರೂಂ ನಲ್ಲಿ ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ವೇಳೆ ಆ ದೃಶ್ಯ ಸೆರೆ ಹಿಡಿಯಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಚೇತನ್ ಪ್ರಕಾಶ್ ಎಂದು ಗುರುತಿಸಲಾಗಿದೆ. ಪುಟ್ಟೇನ ಹಳ್ಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿರುವ ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಅದೇ ಬಿಲ್ಡಿಂಗ್ ನಲ್ಲಿ ವಾಸವಾಗಿರುವ ಆರೋಪಿ...

ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ `ಸಿಂಹಪ್ರಿಯ’ ಜೋಡಿ

newsics.com ಬೆಂಗಳೂರು: ನಟಿ ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ಮಿಂಚಿರುವ ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮೈಸೂರಿನಲ್ಲಿ  ನಾಳೆ (ಜನವರಿ 26)ರಂದು ಈ ಜೋಡಿ ಹಸೆಮಣೆ ಏರಲು ರೆಡಿಯಾಗಿದೆ.ಇದೀಗ ಅರಿಶಿಣ ಶಾಸ್ತ್ರ ನೇರವೇರಿದೆ. ಹರಿಪ್ರಿಯಾ ಬಿಳಿ ಬಣ್ಣದ ಚೂಡಿದಾರ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಸಿಷ್ಠ...

ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಸೇವಾ ಪದಕ

newsics.com ಬೆಂಗಳೂರು: ದೇಶದ 74 ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ...

ಏರ್‌ಟೆಲ್ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಏರಿಕೆ!

newsics.com ನವದೆಹಲಿ: ಏರ್‌ಟೆಲ್ ಇಂದು ತನ್ನ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯದ  ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಈ ಮೊದಲು ಇದ್ದ 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ವ್ಯಾಲಿಡಿಟಿಯಲ್ಲಿ 200 MBಯ ಅತ್ಯಂತ ಸೀಮಿತ ಡೇಟಾವನ್ನು ಒದಗಿಸುತ್ತಿತ್ತು. ಆದರೆ, ಈ ಯೋಜನೆಯು ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಏರ್‌ಟೆಲ್ ತನ್ನ ಮಿನಿಮಮ್...

ಕಡಿಮೆ ಬಟ್ಟೆ ಹಾಕಿದ್ದಕ್ಕೆ ಮುಸ್ಲಿಮರು ಮನೆ ಕೊಡ್ತಿಲ್ಲ, ನಾನು ಮುಸ್ಲಿಂ ಎಂದು ಹಿಂದುಗಳು ಮನೆ ಕೊಡಲ್ಲ: ಉರ್ಫಿ ಅಳಲು

newsics.com ಮುಂಬೈ: ಕಡಿಮೆ ಬಟ್ಟೆ ಹಾಕಿದ್ದಕ್ಕೆ ಮುಸ್ಲಿಮರು ಮನೆ ಕೊಡ್ತಿಲ್ಲ, ನಾನು ಮುಸ್ಲಿಂ ಎಂದು ಹಿಂದುಗಳು ಮನೆ ಕೊಡ್ತಿಲ್ಲವೆಂದು ಉರ್ಫಿ ಜಾವೆದ್‌ ಅಳಲು ತೋಡಿಕೊಂಡಿದ್ದಾರೆ. ‘ನಾನು ಈ ರೀತಿ ಡ್ರೆಸ್ ಮಾಡಿಕೊಳ್ಳುತ್ತೇನೆ ಅಂತ ಮುಸ್ಲಿಮರು ನನಗೆ ಬಾಡಿಗೆ ಮನೆ ಕೊಡುತ್ತಿಲ್ಲ. ನಾನು ಮುಸ್ಲಿಂ ಆಗಿರುವುದರಿಂದ ಹಿಂದೂಗಳು ಕೂಡ ನನಗೆ ಮನೆ ಕೊಡುತ್ತಿಲ್ಲ. ನನಗೆ ಬೆದರಿಕೆ ಕರೆಗಳು ಬರುತ್ತಿವೆ...

ಕಾಂಗ್ರೆಸ್​​ ಅವಧಿಯಲ್ಲಿ ದಾಖಲಾಗಿರುವ 59 ಕೇಸ್​​ ಲೋಕಾಯುಕ್ತಕ್ಕೆ ಹಸ್ತಾಂತರ: ಬೊಮ್ಮಾಯಿ

newsics.com ಬೆಂಗಳೂರು: ಕಾಂಗ್ರೆಸ್​​ ಅವಧಿಯಲ್ಲಿ ದಾಖಲಾಗಿರುವ 59 ಕೇಸ್​​ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಹಿರೆಕೇರೂರು ಪಟ್ಟಣದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದ ಲೋಕಾಯುಕ್ತ ಮುಚ್ಚಿದರು. ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸೋಲು ಗ್ಯಾರಂಟಿ. ಸ್ವಜನ ಪಕ್ಷ ಪಾತ, ಭ್ರಷ್ಟಾಚಾರದಿಂದ ಕೂಡಿ ಎಲ್ಲಾ ಭಾಗ್ಯ...
- Advertisement -

Latest News

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್ ಬೋಲ್ಡ್ ಲುಕ್!

Newsics.Com ಮುಂಬೈ : ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೀರೆ ಉಟ್ಟು ಫೋಟೋಶೂಟ್...
- Advertisement -

ಜೀವಜಾಲದ ಸಂರಕ್ಷಣೆ ಸಂಕ್ರಾಂತಿ ಹೊತ್ತಿನ ನಮ್ಮ ಸಂಕಲ್ಪವಾಗಲಿ

ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲರೂ ಪರಿಸರ ಕುರಿತು, ನಮ್ಮ ಸಹಜೀವಿಗಳೂ, ನಮ್ಮ ಪ್ರಾಣ ರಕ್ಷಕರೂ ಆದ ವನ್ಯಜೀವಿಗಳನ್ನು ಕುರಿತು ಯೋಚಿಸುವಂತಾಗಲಿ. ಪಕ್ಷಿ ಸಂರಕ್ಷಣೆ 37 ♦ ಕಲ್ಗುಂಡಿ ನವೀನ್ ಅಂಕಣಕಾರರು ಮತ್ತು ವನ್ಯಜೀವಿ ತಜ್ಞರು ksn.bird@gmail.com newsics.com@gmail.com ಹೊಸ...

ಮುಗಿಯದ ಸಂಕ್ರಾಂತಿ ಸಂಭ್ರಮ…

ಮೈಮೇಲೆಲ್ಲ ಸಣ್ಣ ಚೂಪಾದ ಮುಳ್ಳುಗಳನ್ನು ಮೂಡಿಸಿಕೊಂಡ ಎಳ್ಳುಗಳು‌ ತಯಾರಾಗಿ ಬರುತ್ತಿದ್ದವು. ಅವುಗಳನ್ನು ನೋಡಿ ನಮಗೆಷ್ಟು ಖುಷಿಯಾಗುತ್ತಿತ್ತು ಅಂದ್ರೆ ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಎಷ್ಟೆಂದರೂ ಅವು ನಮ್ಮ ಸೃಷ್ಟಿಯಲ್ಲವೇ! ಹಾಗಾಗಿ ಸಂಕ್ರಾಂತಿಯ ದಿನ...

ಜೀವಜಾಲದ ಸಂರಕ್ಷಣೆ: ಮುಖ್ಯ ವಿಚಾರಗಳು

ವಿಸ್ತಾರವಾದ ಅರಣ್ಯಪ್ರದೇಶದಲ್ಲಿ ಬರುವ ಯೋಜನೆಗಳು ಅರಣ್ಯವನ್ನು ಛಿದ್ರೀಕರಣಗೊಳಿಸುತ್ತದೆ. ಅಂದರೆ ವಿಸ್ತಾರವಾಗಿದ್ದ ಅರಣ್ಯ ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತವೆ. ಇದರಿಂದಾಗಿ ವನ್ಯಪ್ರಾಣಿಗಳ ಚಲನವಲನ ಮಾತ್ರವಲ್ಲ, ವಂಶಾಭಿವೃದ್ಧಿಗೂ ಗಣನೀಯ ಪ್ರಮಾಣದ ತೊಂದರೆಯುಂಟಾಗುತ್ತದೆ. ಪಕ್ಷಿ ಸಂರಕ್ಷಣೆ 65...

ಹೊಸ ವರ್ಷಕ್ಕಿರಲಿ ಸಂರಕ್ಷಣೆಯ ಸಂಕಲ್ಪ

ಜನರು ಅರ್ಥ ಮಾಡಿಕೊಂಡು ಪರಿಸರಪೂರಕ ಭೌದ್ಧಿಕ ವಲಯವನ್ನು ಸೃಷ್ಟಿಸುವ ಅಗತ್ಯವೂ ಇದೆ. ಹೀಗಾಗಿ ನಾವು ಪರಿಸರವನ್ನು ಹೆಚ್ಚೆಚ್ಚು ಅರ್ಥೈಸಿಕೊಳ್ಳಬೇಕು. ಹವಾಮಾನ ಬದಲಾವಣೆಯ ಇಂದಿನ ದಿನಮಾನದಲ್ಲಿ ನಾವು ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ...
error: Content is protected !!