Wednesday, April 21, 2021

ಪ್ರಮುಖ

ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್’ಡೌನ್ ಘೋಷಣೆ

newsics.com ಮುಂಬೈ: ಕೊರೋನಾ ಸೋಂಕು ದಿನೇದಿನೆ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ನಾಳೆಯಿಂದ (ಏ.22) ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಈ ಮಾರ್ಗಸೂಚಿ ಅನ್ವಯವಾಗಲಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕೇವಲ ಶೇ.15ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಕೇವಲ 25 ಜನರು ಭಾಗಿಯಾಗಲು ಅವಕಾಶ ನೀಡಲಾಗಿದೆ. ಏಪ್ರಿಲ್ 22ರಿಂದ ಮೇ 4ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ....

ಕೊರೋನಾ ತಡೆಗೆ 7 ಐಪಿಎಸ್ ಅಧಿಕಾರಿಗಳ ನೇಮಕ

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ತಡೆಯಲು ರಾಜ್ಯ ಸರ್ಕಾರ 7 ಐಪಿಎಸ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ (ಏ.21) ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಗೃಹ ಇಲಾಖೆಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 1) ಭಾಸ್ಕರ್ ರಾವ್ , ಐಪಿಎಸ್, ಎಡಿಜಿಪಿ, ರೈಲ್ವೇಸ್- ಉತ್ತರ ವಲಯ- ವಿಜಯಪುರ, ಬಾಗಲಕೋಟೆ...

ಬೆಂಗಳೂರಲ್ಲಿ ಶವ ಸಾಗಣೆ ಸುಲಿಗೆ: 13 ಕಿ.ಮೀ.ಗೆ 60 ಸಾವಿರ ರೂ.!

newsics.com ಬೆಂಗಳೂರು: ಕೊರೋನಾ ಅಬ್ಬರದಿಂದ ಹೆಣಗಳ ಸಾಲು ಸಾಲು. ಶವಗಳನ್ನು ಹೊತ್ತ ಆಂಬುಲೆನ್ಸ್ ಗಳ ಮೈಲುದ್ದ ಕ್ಯೂ. ಇನ್ನೊಂದೆಡೆ ಶವಾಗಾರ, ಚಿತಾಗಾರಗಳಲ್ಲಿ ಸುಲಿಗೆ. ಶವ ಸಾಗಣೆಗೂ ಸುಲಿಗೆ, ಅಂತ್ಯಸಂಸ್ಕಾರಕ್ಕೂ ಸುಲಿಗೆ. ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ, ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವ ಸೋಂಕಿತರು. ಇದಾವುದನ್ನೂ ಲೆಕ್ಕಿಸದ ಆಂಬುಲೆನ್ಸ್ ಸಿಬ್ಬಂದಿ, ಶವಾಗಾರದ ಸಿಬ್ಬಂದಿ ಸುಲಿಗೆಗೆ ನಿಂತಿದ್ದಾರೆ. ಇದು ಬೆಂಗಳೂರಿನ ದುಸ್ಥಿತಿ. ಬೆಂಗಳೂರಿನ ಹೆಬ್ಬಾಳದಿಂದ ಪೀಣ್ಯಕ್ಕೆ...

ಮತ್ತೆ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

newsics.com ಬೆಂಗಳೂರು: ನಿರೀಕ್ಷೆಯಂತೆ ಏಪ್ರಿಲ್ 25ರಂದು ನಡೆಯಬೇಕಿದ್ದ ಕರ್ನಾಟಕ‌ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮತ್ತೆ ಮುಂದೂಡಿಕೆಯಾಗಿದೆ. ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಮೈಸೂರು ವಿವಿಯ ಪ್ರಕಟಣೆ ತಿಳಿಸಿದೆ. ಏಪ್ರಿಲ್ 11ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಸಾರಿಗೆ ನೌಕರರ ಮುಷ್ಕರ ಹಾಗೂ ಕೊರೋನಾ ಅಬ್ಬರದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಏಪ್ರಿಲ್ 25ಕ್ಕೆ ಪರೀಕ್ಷೆ ನಡೆಸುವುದಾಗಿ ಮೈಸೂರು ವಿಶ್ವವಿದ್ಯಾಲಯ...

ಬೆಂಗಳೂರಿನಲ್ಲಿ 13 640 ಕೊರೋನಾ ಸೋಂಕು, ರಾಜ್ಯದಲ್ಲಿ 23 558 ಪ್ರಕರಣ, 116 ಜನರ ಸಾವು

newsics.com ಬೆಂಗಳೂರು:  ರಾಜ್ಯದಲ್ಲಿ ಕೊರೋನಾ ಮಹಾ ಸ್ಫೋಟ ಧಾರವಾಹಿ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 23 558 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕೊರೋನಾ ಸೋಂಕಿತರ ಸಂಖ್ಯೆ 12, 22, 202ಕ್ಕೆ ತಲುಪಿದೆ. ಕೊರೋನಾದಿಂದಾಗಿ ರಾಜ್ಯದಲ್ಲಿ ಒಂದೇ ದಿನದಲ್ಲಿ 116 ಜನರು ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 1, 76. 188 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ...

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಅಂತ್ಯ

newsics.com ಬೆಂಗಳೂರು: ಹದಿನೈದು ದಿನಗಳ ಬಳಿಕ ಬುಧವಾರ(ಏ.21) ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಸತತ 15 ದಿನಗಳ ನಂತರ 1.2 ಲಕ್ಷ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೋರ್ಟ್ ಆದೇಶದ...

ನಾಸಿಕ್’ನಲ್ಲಿ ಆಕ್ಸಿಜನ್ ಸೋರಿಕೆ: ಮೃತರ ಸಂಖ್ಯೆ 22 ಕ್ಕೆ ಏರಿಕೆ

newsics.com ನಾಸಿಕ್: ಮಹಾರಾಷ್ಟ್ರದ ನಾಸಿಕ್ ನ ಆಸ್ಪತ್ರೆಯಲ್ಲಿ ಆಮ್ಲಜನಕ ದೊರೆಯದೆ ಮೃತಪಟ್ಟ ಕೊರೋನಾ ಸೋಂಕಿತರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ. ನಾಸಿಕ್ ನ ಡಾ. ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಆಕ್ಸಿಜನ್ ಇದ್ದ ಟ್ಯಾಂಕ್ ಸೋರಿಕೆಯಾಗಿದೆ. ಇದರಿಂದಾಗಿ ಆಕ್ಸಿಜನ್ ಬೆಂಬಲದಿಂದ ತುರ್ತು ನಿಗಾ ಘಟಕದಲ್ಲಿ ಇದ್ದ ಸೋಂಕಿತರಿಗೆ ಆಮ್ಲಜನಕ ಪೂರೈಸಲು ಸಾಧ್ಯವಾಗಿಲ್ಲ. ಇದರಿಂದಾಗಿ 22 ಸೋಂಕಿತರು...

ಆಮ್ಲಜನಕ ಟ್ಯಾಂಕ್ ಸೋರಿಕೆ: 22 ರೋಗಿಗಳು ಸಾವು, ಹಲವರ ಸ್ಥಿತಿ ಗಂಭೀರ

newsics.com ನಾಸಿಕ್: ಇಲ್ಲಿನ ಜಾಕಿರ್ ಹುಸೇನ್ ಆಸ್ಪತ್ರೆಯಲ್ಕಿ ಆಮ್ಲಜನಕ ಟ್ಯಾಂಕ್ ಸೋರಿಕೆಯಾಗಿ 22 ರೋಗಿಗಳು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಈ‌ ಮಾಹಿತಿ‌ ನೀಡಿದ್ದಾರೆ. ನಾಸಿಕ್ ನಲ್ಲಿ ವೆಂಟಿಲೇಟರ್ ಗಳಲ್ಲಿದ್ದ ಕೋವಿಡ್ ರೋಗಿಗಳು ಬುಧವಾರ (ಏ.21) ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ. ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕ್ ಸೋರಿಕೆಯಾದ ಕಾರಣ ಆ ಪ್ರದೇಶದಾದ್ಯಂತ...

ಒಂದೇ ದಿನ 2,95,041 ಮಂದಿಗೆ ಕೊರೋನಾ ಸೋಂಕು 2,023 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾದ ಮಹಾ ಸ್ಫೋಟ  ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ2,95,041   ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,56,16,130 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾದಿಂದ  2023 ಮಂದಿ ಮೃತಪಟ್ಟಿದ್ದಾರೆ. ಮಾರಕ ಕೊರೋನಾ ಇದುವರೆಗೆ 1,82,553  ಮಂದಿಯ   ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರಾಗಿದ್ದ  1,32,76,039  ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ...

ದೇಶದಲ್ಲಿ ಮತ್ತಷ್ಟು ಹೆಚ್ಚಿದ ಕೊರೋನಾ ಅಬ್ವರ, ಮಹಾರಾಷ್ಟ್ರ ಸ್ಥಿತಿ ಗಂಭೀರ

newsics.com ನವದೆಹಲಿ: ದೇಶದಾದ್ಯಂತ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದ್ದು, ಸೋಂಕಿತರ ಹಾಗೂ ಮೃತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿ ಬದಲಾಗಿವೆ. ದೆಹಲಿಯಲ್ಲಿ ದಾಖಲೆಯ 28,395 ಕೋವಿಡ್ ಕೇಸ್ ಕಾಣಿಸಿಕೊಂಡಿದ್ದು, 277 ಜನರು ಸಾವನ್ನಪ್ಪಿದ್ದಾರೆ. ಸದ್ಯ 85,575 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಕೈಮೀರಿ ಹೋಗಿದ್ದು, ಕಳೆದ...

ರಾಜ್ಯದ ವಿವಿ ಪರೀಕ್ಷೆಗಳು ಮುಂದೂಡಿಕೆ, ವಿಟಿಯು ಎಕ್ಸಾಂ ಅಬಾಧಿತ

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಡೆಗೆ ಕಠಿಣ ನಿಯಮ ಜಾರಿ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ವಿವಿಗಳ‌ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷೆಗಳನ್ನು ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಏಪ್ರಿಲ್ 19ರಿಂದ ಪ್ರಾರಂಭವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ವಿಟಿಯು) ಇಂಜಿನಿಯರಿಂಗ್ ಪರೀಕ್ಷೆ ಶನಿವಾರ ಹಾಗೂ ಭಾನುವಾರ ಪರೀಕ್ಷೆ...

ಕೊರೋನಾ ತಡೆಗೆ ಬಿಗಿಯಾಗಿ ಎರಡೆರಡು ಮಾಸ್ಕ್ ಧರಿಸಬೇಕಂತೆ!

newsics.com ನ್ಯೂಯಾರ್ಕ್: ಕೊರೋನಾ ಎರಡನೇ ಅಲೆ ಎದುರಿಸಲು ಒಂದು ಮಾಸ್ಕ್ ಅಲ್ಲ, ಎರಡು ಮಾಸ್ಕ್ ಗಳನ್ನು ಬಿಗಿಯಾಗಿ ಧರಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದರಲ್ಲಿ ಈ ಅಂಶ ಬಯಲಾಗಿದೆ. ಎರಡು ಮಾಸ್ಕ್ ಗಳನ್ನು ಬಿಗಿಯಾಗಿ ಧರಿಸುವುದರಿಂದ ಕೊರೋನಾ ವೈರಸ್ ಕಣಗಳು ವ್ಯಕ್ತಿಯ ಬಾಯಿ ಹಾಗೂ ಮೂಗು ತಲುಪುವುದಿಲ್ಲ ಎಂಬುದು ಅಧ್ಯಯನದಲ್ಲಿ ದೃಢಪಟ್ಟಿದೆ. ಜಾಮಾ ಇಂಟರ್ನಲ್...

ರಾಜ್ಯದಲ್ಲಿ ಮುಂದಿನ 14 ದಿನ ವೀಕೆಂಡ್, ನೈಟ್ ಕರ್ಫ್ಯೂ

newsics.com ಬೆಂಗಳೂರು: ಕೊರೋನಾ ತಡೆಗೆ ರಾಜ್ಯದಲ್ಲಿ ಮುಂದಿನ 14 ದಿನ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ನಿರ್ಧರಿಸಿದೆ. ಮೇ 4ರವರೆಗೆ ಈ ಕಠಿಣ ನಿಯಮಗಳು ಜಾರಿಯಲ್ಲಿರಲಿವೆ ಎಂದು ಮುಖ್ಯ ಕಾರ್ಯದರ್ಶಿ ಎಸ್. ರವಿಕುಮಾರ್ ಹೇಳಿದರು. ರಾಜ್ಯಾದ್ಯಂತ ನಾಳೆ ರಾತ್ರಿಯಿಂದ ಕಠಿಣ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ಇರಲಿದೆ...

ಲಾಕ್ ಡೌನ್ ಕೊನೆಯ ಅಸ್ತ್ರವಾಗಲಿ: ಮೋದಿ

newsics.com ನವದೆಹಲಿ: ಇಂದಿನ ಸ್ಥಿತಿಯಲ್ಲಿ ದೇಶವನ್ನು ಲಾಕ್ ಡೌನ್ ನಿಂದ ರಕ್ಷಿಸಬೇಕು. ಲಾಕ್ ಡೌನ್ ಬೇಡ ಎಂದು ನಾನು ರಾಜ್ಯಗಳಿಗೆ ಮನವಿ‌ ಮಾಡುತ್ತೇನೆ. ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಹೋಗದಿರಿ. ಲಾಕ್ ಡೌನ್ ಕೊನೆಯ ಅಸ್ತ್ರವಾಗಲಿ. ಮೈಕ್ರೋ‌ ಕಂಟೈನ್ಮೆಂಟ್ ಕಡೆ ನಮ್ಮ ಗಮನವಿರಲಿ ಎಂದು ಪ್ರಧಾನಿ‌ ಮೋದಿ ಸಲಹೆ‌ ನೀಡಿದ್ದಾರೆ. ಕೊರೋನಾ ಅಬ್ಬರದ ಬಗ್ಗೆ ಪರಸ್ಪರ ಜಾಗೃತಿ...

ಅಗತ್ಯವೆನಿಸಿದರೆ ಲಾಕ್ ಡೌನ್ ಮಾಡಿ ಎಂದ ರಾಜ್ಯಪಾಲ‌ ವಜುಭಾಯಿ ವಾಲಾ

newsics.com ಬೆಂಗಳೂರು: ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಲಾಕ್ ಡೌನ್ ಅಗತ್ಯವೆನಿಸಿದರೆ ಲಾಕ್ ಡೌನ್ ಜಾರಿ‌ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಸಲಹೆ ನೀಡಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ರಾಜ್ಯಪಾಲರು, ಕೊರೋನಾ ನಿಯಂತ್ರಣಕ್ಕೆ ಜನರು ಸಹಕಾರ ಮಾಡಬೇಕು. ಸರ್ಕಾರ ಕಾರ್ಮಿಕರ ಬಗ್ಗೆಯೂ ಯೋಚಿಸಬೇಕು, ಯಾವ ರೀತಿ ಕಠಿಣ‌ ಕ್ರಮ ಬೇಕಾದರೂ ಕೈಗೊಳ್ಳಿ, ನಮಗೆ...

ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು

newsics.com ನವದೆಹಲಿ: ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೋನಾ ಗಂಭೀರ ಹಂತ ತಲುಪಿರುವ ಹಿನ್ನೆಲೆಯಲ್ಲಿ ಪ್ರಧಾನಿ ಭಾಷಣ ಅತ್ಯಂತ ಮಹತ್ವಪಡೆದಿದೆ. ದೇಶವ್ಯಾಪಿ ಲಾಕ್ ಡೌನ್ ಸಾಧ್ಯತೆಯ್ನನು ಮೋದಿ ಈಗಾಗಲೇ ತಳ್ಳಿಹಾಕಿದ್ದಾರೆ. ಆದರೂ ಮೋದಿಯವರು ಯಾವ ಘೋಷಣೆ ಮಾಡಬಹುದು ಎಂಬ ಬಗ್ಗೆ ಕುತೂಹಲ‌ ಹಾಗೂ ಆತಂಕ‌ ಮೂಡಿದೆ. ಗೃಹಸಚಿವ...

ಬೆಂಗಳೂರಲ್ಲಿ ಲಾಕ್’ಡೌನ್, ರಾಜ್ಯದಲ್ಲಿ‌ ಕಠಿಣ ನಿಯಮ ಜಾರಿ ಸಾಧ್ಯತೆ: ಶೀಘ್ರ ಮಾರ್ಗಸೂಚಿ ಪ್ರಕಟ

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಡೆಯಲು ಮುಂದಾಗಿರುವ ಸರ್ಕಾರದಿಂದ ಶೀಘ್ರದಲ್ಲೇ ಕಠಿಣ ನಿಯಮ ಜಾರಿಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ಬಿಡುಗಡೆಯಾಗಲಿದೆ. ಲಾಕ್ ಡೌನ್ ಜಾರಿಯಾಗಬಹುದು, ಟಫ್ ರೂಲ್ಸ್ ಜಾರಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಅದರಲ್ಲೂ ಬೆಂಗಳೂರಿನ ಮದ್ಯದಂಗಡಿಗಳ ಎದುರು ಉದ್ದನೆಯ ಸಾಲು‌ ಕಂಡುಬಂದಿದೆ. ಇಡೀ ರಾಜ್ಯಕ್ಕೆ ಅಥವಾ ಬೆಂಗಳೂರಿಗೆ ಲಾಕ್ಡೌನ್ ಅಥವಾ ಕಂಪ್ಲೀಟ್ ಕರ್ಫ್ಯೂ...

ರಾಜ್ಯದಲ್ಲಿ 1ರಿಂದ 9ನೇ ಕ್ಲಾಸ್ ತನಕ ಪರೀಕ್ಷೆ ರದ್ದು

newsics.com ಬೆಂಗಳೂರು:  ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1ರಿಂದ 9ನೇ ತರಗತಿ ತನಕದ ಪರೀಕ್ಷೆ ರದ್ದು ಪಡಿಸಲಾಗಿದೆ. ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಮೌಲ್ಯಾಂಕನ ಆಧಾರದಲ್ಲಿ  ತೇರ್ಗಡೆ ಗೊಳಿಸಲು ಶಿಕ್ಷಣ ಇಲಾಖೆ ಆದೇಶ ನೀಡಿದೆ

ಒಂದೇ ದಿನ 2,59,170 ಮಂದಿಗೆ ಕೊರೋನಾ ಸೋಂಕು, 1,761 ಜನ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾದ ಮಹಾ ಸ್ಫೋಟ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 2,59,170 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,53,21,089ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 1,761 ಮಂದಿ ಮೃತಪಟ್ಟಿದ್ದಾರೆ. ಮಾರಕ ಕೊರೋನಾ ಇದುವರೆಗೆ 1,80,530 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರಾಗಿದ್ದ 1,31,08,582 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ....

ಬೆಂಗಳೂರಿನಲ್ಲಿ 9618, ರಾಜ್ಯದಲ್ಲಿ 15785 ಮಂದಿಗೆ ಕೊರೋನಾ ಸೋಂಕು, 146 ಜನ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ 15,785 ಮಂದಿಗೆ ಸೋಂಕು ತಗುಲಿದೆ. ಕೊರೋನಾ ಮಹಾಮಾರಿ ರಾಜ್ಯದಲ್ಲಿ ಒಂದೇ ದಿನ 146 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾಕ್ಕೆ ಇಷ್ಟು ಬೃಹತ್ ಸಂಖ್ಯೆಯಲ್ಲಿ ಜನರು ಬಲಿಯಾಗುತ್ತಿರುವುದು ದಾಖಲೆಯಾಗಿದೆ. ಬೆಂಗಳೂರಿನಲ್ಲಿ ಹೊಸದಾಗಿ 9618 ಮಂದಿಗೆ ಕೊರೋನಾ...

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ

newsics.com ನವದೆಹಲಿ: ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಕೊರೋನಾ ಲಸಿಕೆಯ ಮೂರನೇ ಹಂತದಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಪ್ರಕಟಿಸಿದೆ. ದೇಶದಲ್ಲಿ ಕೊರೋನಾ ಮಹಾಮಾರಿ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ. ಇಲ್ಲಿಯವರೆಗೂ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್​...

ಸಾರಿಗೆ ನೌಕರರ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಬಂಧನ

newsics.com ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ರೂವಾರಿ, ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾರಿಗೆ ಸಿಬ್ಬಂದಿ ಮುಷ್ಕರ, ಚಾಲಕರ‌ ಮೇಲೆ ಹಲ್ಲೆ, ಬಸ್ ಗಳ ಮೇಲೆ ಕಲ್ಲು ತೂರಾಟ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು(ಏ.19) ಪಶ್ಚಿಮ‌ ವಿಭಾಗ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಅವರ ಗಾಂಧಿನಗರ ಕಚೇರಿಯಲ್ಲಿ ಬಂಧಿಸಿದ್ದಾರೆ. ಅವರ ಜತೆಗೆ ಇನ್ನೂ 15 ಜನರನ್ನು...

ಒಂದೇ ದಿನ 2,73,810 ಮಂದಿಗೆ ಕೊರೋನಾ ಸೋಂಕು, 1,619 ಜನ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾದ ಮಹಾ ಸ್ಫೋಟ  ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 2,73,810 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,50,61,919  ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 1,619  ಮಂದಿ ಮೃತಪಟ್ಟಿದ್ದಾರೆ. ಮಾರಕ ಕೊರೋನಾ ಇದುವರೆಗೆ 1,78,769  ಮಂದಿಯ   ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರಾಗಿದ್ದ  1,29,53,821  ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ...

ನಿಘಂಟು ತಜ್ಞ, ಹಿರಿಯ ಸಾಹಿತಿ ಪ್ರೊ.ವೆಂಕಟಸುಬ್ಬಯ್ಯ ಇನ್ನಿಲ್ಲ

newsics.com ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ನಿಘಂಟು ತಜ್ಞ ರೆಂದೇ ಖ್ಯಾತಿ ಪಡೆದಿದ್ದ ಹಿರಿಯ ಸಾಹಿತಿ ಪ್ರೊ. ವೆಂಕಟಸುಬ್ಬಯ್ಯು ನಿಧನಹೊಂದಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು. ನಾಡೋಜ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1937ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ ಎ ಪದವಿ ಪಡೆದಿದ್ದರು. ನಿಘಂಟು...

ಮತ್ತೆ ಕೊರೋನಾ ಅಟ್ಟಹಾಸ: ಬೆಂಗಳೂರಲ್ಲಿ 12,793, ರಾಜ್ಯದಲ್ಲಿ 19,067 ಮಂದಿಗೆ ಸೋಂಕು, 81 ಜನ ಸಾವು

newsics.com ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ ಕೊರೋನಾ ಅಟ್ಟಹಾಸ ಮೆರೆದಿದ್ದು, 19,067 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ‌ ಮೂಲಕ ಒಟ್ಟೂ ಸೋಂಕಿತರ ಸಂಖ್ಯೆ 11,61,065ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು(ಏ.18) ಕಿಲ್ಲರ್ ಕೊರೋನಾಗೆ 81 ಜನರು ಬಲಿಯಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೋನಾ ಹೆಲ್ತ್ ಬುಲೆಟಿನ್ ಈ‌ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ...

ಸದ್ಯಕ್ಕೆ ಲಾಕ್’ಡೌನ್ ಇಲ್ಲ, ಕಠಿಣ ನಿಯಮ‌ ಜಾರಿ: ಸಚಿವರ ಮಧ್ಯೆಯೇ ಗೊಂದಲ

newsics.com ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಪರಿಸ್ಥಿತಿ‌ ಕೈಮೀರುತ್ತಿದ್ದರೂ ಕೊರೋನಾ ತಡೆಗೆ ಸರ್ಕಾರಕ್ಕೆ ಸ್ಪಷ್ಟತೆ ಇದ್ದಂತಿಲ್ಲ. ಬೆಂಗಳೂರಿನಲ್ಲಿ ದಿನವಿಡೀ 144 ಸೆಕ್ಷನ್ ಜಾರಿ, ರಾತ್ರಿ ವೇಳೆ ಕರ್ಫ್ಯೂ ವಿಧಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ ಎನ್ನಲಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಯಥಾವತ್ ಜಾರಿ ಮಾಡಲಾಗುವುದು. ಕೊರೋನಾ ತಡೆಗೆ ಲಾಕ್ ಡೌನ್ ಅಗತ್ಯ ಎಂದು ಆರೋಗ್ಯ...

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ ಎ ಹೆಗಡೆ ಇನ್ನಿಲ್ಲ

newsics.com ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ, ಹಿರಿಯ ವಿದ್ವಾಂಸ ಪ್ರೊಫೆಸರ್ ಎಂ.ಎ. ಹೆಗಡೆ(73) ಇಂದು(ಏ.18) ಬೆಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಬಲಿಯಾದರು. ಏ.13ರಂದು ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು ಶನಿವಾರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲೇ ಕೊನೆಯುಸಿರೆಳೆದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು, ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು...

ಒಂದೇ ದಿನ 2,61,500 ಮಂದಿಗೆ ಕೊರೋನಾ ಸೋಂಕು 1,501 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾದ ಮಹಾ ಸ್ಫೋಟ  ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 2,61,500  ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,47,88,109  ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾದಿಂದ  1,501  ಮಂದಿ ಮೃತಪಟ್ಟಿದ್ದಾರೆ. ಮಾರಕ ಕೊರೋನಾ ಇದುವರೆಗೆ 1,77,150  ಮಂದಿಯ   ಪ್ರಾಣ ಅಪಹರಿಸಿದೆ. ಕೊರೋನಾ ಸೋಂಕಿತರಾಗಿದ್ದ  1,28,09,643  ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ...

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣ, ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ವಿತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ತ್ರಿಬಲ್ ಟಿ ಸೂತ್ರ ಪಾಲಿಸಿದರೆ ಮಾತ್ರ ವೇಗವಾಗಿ...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಡೆಸುವ ಮೆಡಿಕಲ್ ಕಾಲೇಜಿಗೆ ನುಗ್ಗಿದ ದುಷ್ಕರ್ಮಿಗಳು ಕೊರೋನಾ ಲಸಿಕೆಯಾಗಿ ಬಳಸುತ್ತಿರುವ ರೆಮಿಡಿಸಿವರ್ 850 ಇಂಜೆಕ್ಷನ್ ಗಳನ್ನು ಕದ್ದಿದ್ದಾರೆ. ಕೊರೋನಾ...
- Advertisement -

Latest News

ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್’ಡೌನ್ ಘೋಷಣೆ

newsics.com ಮುಂಬೈ: ಕೊರೋನಾ ಸೋಂಕು ದಿನೇದಿನೆ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ನಾಳೆಯಿಂದ (ಏ.22) ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಈ ಮಾರ್ಗಸೂಚಿ ಅನ್ವಯವಾಗಲಿದೆ. ಸರ್ಕಾರಿ ಹಾಗೂ ಖಾಸಗಿ...
- Advertisement -

ಕನ್ನಡದ ವಕ್ತಾರ ಪ್ರೊ.ಜೀವಿ

♦ ಬಿ.ಕೆ. ಸುಮತಿ ಹಿರಿಯ ಉದ್ಘೋಷಕರು ಬೆಂಗಳೂರು ಆಕಾಶವಾಣಿ newsics.com@gmail.com ಅಕ್ಷರ ನಮನ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕನ್ನಡ ಜೀವಿಗಳ ಜೀವನದ ತುಂಬಾ ಜೀವಿಸಿಕೊಂಡಿರುತ್ತಾರೆ ಜೀವಿ. ಜಿ. ವೆಂಕಟಸುಬ್ಬಯ್ಯ ಕನ್ನಡದ ಅಧಿಕೃತ ವಕ್ತಾರ. ಕನ್ನಡ ಅಷ್ಟೇ ಅಲ್ಲ,...

ಕೊರೋನಾ ಅಬ್ಬರ: ಮೆಡಿಕಲ್ ಎಮರ್ಜನ್ಸಿ ಸಾಧ್ಯತೆ

ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ. ಕೊರೋನಾ ವೈರಸ್ ಅಕ್ಷರಶಃ ಮರಣಮೃದಂಗ ಬಾರಿಸಲು ಆರಂಭಿಸಿದೆ. ಇಷ್ಟು ದಿನವಿದ್ದ ಅಸಡ್ಡೆ ಇನ್ನೂ ಮುಂದುವರಿದರೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವ ದಿನಗಳು ದೂರವಿಲ್ಲ.  ಕೋವಿಡ್ ಆರ್ಭಟಕ್ಕೆ ನಲುಗುತ್ತಿದೆ ಜನಜೀವನ ♦...

ಬಂಡೆಗೊರವ..

ಬಂಡೆಗಳಿರುವ ನದಿಗಳಲ್ಲಿ ಬಂಡೆಗೊರವ ಹೆಚ್ಚಾಗಿ ಕಂಡುಬರುತ್ತದೆಯಾದರೂ ಕೆಲವು ಕರಾವಳಿ ಪ್ರದೇಶದಲ್ಲಿಯೂ ಇರುತ್ತದೆ. ಒಂದು, ಎರಡು ಅಥವಾ ಕೆಲವೇ ಹಕ್ಕಿಗಳ ಗುಂಪಿನಲ್ಲಿ ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತದೆ. ಪಕ್ಷಿನೋಟ -...

ಒಳದನಿಗೆ ಕೊರಳಾಗಿ…

ಕಲೆಯ ಸಾಂಗತ್ಯದಲ್ಲಿ ಬದುಕು ಅಮೂಲ್ಯವೆನಿಸುತ್ತದೆ. ಆಹ್ಲಾದತೆ ತುಂಬಿ, ಬದುಕಿಗೆ ರಸ ತುಂಬುವ ಕಲೆ ನಮ್ಮನ್ನು ಸದಾ ಪೊರೆಯುತ್ತಿರಲಿ. ಅಂದ ಹಾಗೆ, ಏಪ್ರಿಲ್ 15 ವಿಶ್ವ ಕಲಾ ದಿನ. ನಮ್ಮ-ನಿಮ್ಮ ನಡುವಿನ ಕಲೆ ಹಾಗೂ...
error: Content is protected !!