Tuesday, July 5, 2022

ಪ್ರಮುಖ

ಕರಾವಳಿಯಲ್ಲಿ ತೀವ್ರತೆ ಪಡೆದ ಮುಂಗಾರು

newsics.com ಮಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ. ತಿಂಗಳ ಆರಂಭದಿಂದಲೇ ಕರಾವಳಿಗೆ ಮುಂಗಾರು ಪ್ರವೇಶಿಸಿದ್ದರೂ ಮಳೆ ತೀವ್ರತೆ ಪಡೆದುಕೊಂಡಿರಲಿಲ್ಲ.ಇದೀಗ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 25ರವರೆಗೆ ಭಾರಿ ಮಳೆಯಾಗಲಿದೆ ಮುಂದಿನ ನಾಲ್ಕು ದಿನಗಳ ಕಾಲ 20.4 ಸೆಂ.ಮೀ.ವರೆಗೂ ಮಳೆಯಾಗುವ ಸಾಧ್ಯತೆಗಳಿದ್ದು, ಗಂಟೆಗೆ 45 ಕಿ.ಮೀ...

International yoga day 2022; ಯೋಗದಿಂದ ವಿಶ್ವ ಶಾಂತಿ ಸಾಧ್ಯ; ಪ್ರಧಾನಿ ಮೋದಿ

newsics.com ಮೈಸೂರು; ಯೋಗದಿಂದ ರೋಗಗಳಿಂದ ದೂರವಿರಬಹುದು. ಯೋಗದಿಂದ ವಿಶ್ವ ಶಾಂತಿ ಸಾಧ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಮೈಸೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದ ಜನತೆಗೆ 8ನೇ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಸಾಂಸ್ಕೃತಿಕ ನಗರಿ ಮೈಸೂರಿಗೆ ನನ್ನ ಪ್ರಣಾಮಗಳು ಯೋಗ ಇಂದು ಪ್ರಪಂಚದ...

ಯೋಗಪಟುಗಳ ಮಧ್ಯೆ ಮೈಸೂರಲ್ಲಿ‌ ಪ್ರಧಾನಿ ಮೋದಿ ಯೋಗಾಭ್ಯಾಸ

newsics.com ಮೈಸೂರು; ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಮೈಸೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಯೋಗಾಭ್ಯಾಸದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಯೋಗಪಟುಗಳ ಮಧ್ಯೆ ನಿಂತು ಪ್ರಧಾನಿ ಯೋಗ ಮಾಡುತ್ತಿದ್ದಾರೆ. 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇಂದು ನಡೆಯುತ್ತಿದೆ. ಬಿಳಿ ಬಣ್ಣದ ಉಡುಗೆ ತೊಟ್ಟು, ಶಾಲನ್ನು ಹೊದ್ದು ಯೋಗ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿದ್ದಾರೆ. https://newsics.com/news/latest/modi-practiced-yoga-with-15-thousand-members-in-mysore/114060/

ರಾಜ್ಯದ 4 ಕಡೆ ಸೇರಿ ದೇಶದ 75 ಸ್ಥಳಗಳಲ್ಲಿ ಕೇಂದ್ರ ಸಚಿವರಿಂದ ಯೋಗಾಭ್ಯಾಸ

newsics.com ಬೆಂಗಳೂರು/ನವದೆಹಲಿ: ಯೋಗ ದಿನದ ಪ್ರಯುಕ್ತ ಕರ್ನಾಟಕದ 4 ಕಡೆ ಸೇರಿ ದೇಶದ 75 ಕಡೆಗಳಲ್ಲಿ ಕೇಂದ್ರ ಸಚಿವರು ಯೋಗಾಭ್ಯಾಸ ನಡೆಸಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ 75 ಕಡೆ ಯೋಗ ದಿನ ಆಯೋಜಿಸಲಾಗಿದೆ. ಮುಖ್ಯವಾಗಿ ಕರ್ನಾಟಕದ ಹಂಪಿಯಲ್ಲಿ ಪ್ರಹ್ಲಾದ್‌ ಜೋಶಿ, ಪಟ್ಟದಕಲ್ಲಿನಲ್ಲಿ ರಾಜೀವ್‌ ಚಂದ್ರಶೇಖರ್‌, ಹಳೆಬೀಡಿನಲ್ಲಿ ಶೋಭಾ ಕರಂದ್ಲಾಜೆ, ಗೋಳಗುಮ್ಮಟದಲ್ಲಿ ಭಗವಂತ ಖೂಬಾ ಭಾಗವಹಿಸಲಿದ್ದಾರೆ. https://newsics.com/news/latest/modi-practiced-yoga-with-15-thousand-members-in-mysore/114060/

15 ಸಾವಿರ ಮಂದಿ ಜೊತೆ ಮೋದಿ ಯೋಗಾಭ್ಯಾಸ

newsics.com ಮೈಸೂರು: ಯೋಗದಿನಾಚರಣೆ ಕಾರ್ಯಕ್ರಮಕ್ಕಾಗಿ ಬೆಳಗ್ಗೆ 6.30ಕ್ಕೆ ಪ್ರಧಾನಿ ಮೋದಿಯವರು ಅರಮನೆ ಅಂಗಳಕ್ಕೆ ಆಗಮಿಸಿದ್ದಾರೆ. ಸುಮಾರು 7ರಿಂದ 7.45ರವರೆಗೆ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ನಂತರ ದೊಡ್ಡಕೆರೆ ಮೈದಾನದಲ್ಲಿ ನಡೆಯುವ ಯೋಗ ವಸ್ತು ಪ್ರದರ್ಶನಕ್ಕೆ ಅವರು ಭೇಟಿನೀಡಲಿದ್ದಾರೆ. ಅರಮನೆ ಆವರಣ ತಲುಪಿದ ಮೋದಿಯವರನ್ನು ರಾಜಮಾತೆ ಪ್ರಮೋದಾ ದೇವಿ ಹಾಗೂ ಮಹಾರಾಜ ಯದುವೀರ್ ಒಡೆಯರ್ ಸ್ವಾಗತಿಸಿದರು. ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ...

ರಾಜ್ಯದಲ್ಲಿ 530 ಜನರಿಗೆ ಕೊರೋನಾ ಸೋಂಕು, 637 ಮಂದಿ ಗುಣಮುಖ

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 530 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 494 ಸೇರಿದಂತೆ ರಾಜ್ಯಾಧ್ಯಂತ 530 ಜನರಿಗೆ ಕೊರೋನಾ ತಗುಲಿದೆ ಎಂದು ರಾಜ್ಯ ಆರೋಗ್ಯ‌ ಇಲಾಖೆಯ ಹೆಲ್ತ್ ಬುಲೆಇಟನ್ ತಿಳಿಸಿದೆ. ಸೋಂಕಿತರ ಸಂಖ್ಯೆ ಒಟ್ಟೂ 3961361ಕ್ಕೆ ಏರಿಕೆಯಾಗಿದೆ. ಸೋಮವಾರ 637 ಮಂದಿ ಸೇರಿದಂತೆ ಈವರೆಗೆ 3916320 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 4,928...

ಅಯೋಧ್ಯೆ ರಾಮಮಂದಿರ ನಿರ್ಮಾಣ: ದೇಣಿಗೆಯ 22 ಕೋಟಿ ಮೊತ್ತದ ಚೆಕ್‌ಗಳು ಬೌನ್ಸ್

newsics.com ಲಖನೌ: ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ದೇವಾಲಯದ ಟ್ರಸ್ಟ್‌ಗೆ ಬರೋಬ್ಬರಿ 5,457 ಕೋಟಿ ರೂ. ಬಂದಿತ್ತು. ಆದರೆ ಅಖಿಲ ಭಾರತ ಮಟ್ಟದಲ್ಲಿ ದೇಣಿಗೆ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿರುವ ತಂಡದ ತಾತ್ಕಾಲಿಕ ವರದಿಯ ಪ್ರಕಾರ 22 ಕೋಟಿ ಮೌಲ್ಯದ ಚೆಕ್‌ಗಳು...

ಸಿಧು ಮೂಸೆವಾಲಾ ಕೇಸ್: ಇಬ್ಬರು ಶಾರ್ಪ್ ಶೂಟರ್ ಬಂಧನ

newsics.com ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಪ್ರಮುಖ ಶೂಟರ್‌ಗಳನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಶೂಟರ್‌ಗಳನ್ನು ಪ್ರಿಯವ್ರತ್ ಫೌಜಿ (26) ಮತ್ತು ಕಾಶಿಶ್ (24) ಎಂದು ಗುರುತಿಸಲಾಗಿದೆ. ಪೊಲೀಸರು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಶಾರ್ಪ್ ಶೂಟರ್‌ಗಳನ್ನು ಗುಜರಾತ್‌ನ ಮುಂದ್ರಾದಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ಎಂಟು ಗ್ರೆನೇಡ್‌ಗಳು, ಒಂಬತ್ತು ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಮೂರು ಪಿಸ್ತೂಲ್‌ಗಳು...

ಮೈಸೂರಲ್ಲೂ‌ ಕನ್ನಡ ಮಾತಾಡಿದ ಮೋದಿ, ಜನಸೇವೆಗೆ ಅವಕಾಶ ಕೇಳಿದ ಪ್ರಧಾನಿ

newsics.com ಮೈಸೂರು: ಸಿಲಿಕಾನ್ ಸಿಟಿಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ್ದ ಮೋದಿ ಸಾಂಸ್ಕೃತಿಕ ನಗರಿಯಲ್ಲೂ ಕನ್ನಡದಲ್ಲೇ ಮಾತಿಗಿಳಿದರು. ಪ್ರೋಟೋಕಾಲ್ ಮರೆತು ನಮಸ್ಕರಿಸಲು‌ ಬಂದ ಬಿಜೆಪಿ ನಾಯಕರ ವರ್ತನೆಯಿಂದ‌ ಮೈಸೂರಿಗೆ ಹೊರಡುವ ಮುನ್ನ ಬೆಂಗಳೂರಲ್ಲಿ ಬೇಸರಗೊಂಡಿದ್ದ‌ ಮೋದಿ, ಮೈಸೂರಿನ ಸಂವಾದ ಕಾರ್ಯಕ್ರಮದಲ್ಲಿ ಖುಷಿ ಖುಷಿಯಾಗಿಯೇ ಪಾಲ್ಗೊಂಡರು. ತಮ್ಮ ಭಾಷಣಕ್ಕೂ ಮುನ್ನ ವೇದಿಕೆಯಲ್ಲಿ ಪ್ರಧಾನಿ ಮೋದಿ ಪ್ರೀತಿಯಿಂದ ಶಾಸಕ ರಾಮದಾಸ್ ಅವರ ಬೆನ್ನಿಗೆ...

ಕೊರೋನ ರೋಗಿಗಳು ಪಾರ್ಕಿನ್ಸನ್ ಗೆ ತುತ್ತಾಗುವ ಅಪಾಯ ಹೆಚ್ಚು

newsics.com ಕೊರೋನ ವೈರಾಣುವಿನಿಂದ ಬಳಲಿದವರಿಗೆ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ಮೆದುಳು ಕ್ಷೀಣಿಸುವ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಕೋವಿಡ್-19 ರೋಗಿಗಳಿಗೆ ಸಾಮಾನ್ಯವಾಗಿ ಬ್ರೈನ್ ಫಾಗ್, ತಲೆನೋವು ಮತ್ತು ನಿದ್ರಾಹೀನತೆ, ತೊಡಕುಗಳ ಲಕ್ಷಣ ಕಂಡುಬಂದಿದ್ದು, ವೈರಲ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಸಾಮಾನ್ಯವಾಗಿದೆ ಎನ್ನುತ್ತಿದ್ದಾರೆ ಸಂಶೋಧಕರು. ಮೂವ್ಮೆಂಟ್ ಡಿಸಾರ್ಡರ್ಸ್ ಎಂಬ ಜರ್ನಲ್ ನಲ್ಲಿ ಈ...

ಪ್ರೈವಸಿ ರಕ್ಷಣೆಗೆ ಮುಂದಾದ ವಾಟ್ಸ್ ಆ್ಯಪ್ : ಹೊಸ ಅಪ್ಡೆಟ್ ಬಿಡುಗಡೆ

newsics.com ಆನ್‌ಲೈನ್‌ನಲ್ಲಿ ಬಳಕೆದಾರರ ಪ್ರೈವಸಿಯನ್ನು ಮತ್ತಷ್ಟು ರಕ್ಷಿಸಲು ಪ್ರೈವಸಿ ಕಂಟ್ರೋಲ್ ಸೆಟ್ಟಿಂಗ್‌ಗಳಿಗೆ ಹೊಸ ಆಯ್ಕೆಗಳನ್ನು ಹೊರತರುವುದಾಗಿ ಮೆಟಾ-ಮಾಲೀಕತ್ವದ ವಾಟ್ಸಾಪ್ ಘೋಷಿಸಿದೆ. ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ, ಕಂಪನಿಯು ಈಗ  ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಪಟ್ಟಿಯಿಂದ ಪ್ರೊಫೈಲ್ ಫೋಟೋ, ಅಬೌಟ್ ಮತ್ತು ಲಾಸ್ಟ್ ಸೀನ್ ಸ್ಥಿತಿಯನ್ನು ತಮಗೆ ಬೇಕಾದವರು ಮಾತ್ರ ನೋಡುವಂತೆ ಮಾಡುವ ಹೊಸ ಆಪ್ಡೆಟ್ ಬಿಡುಗಡೆಗೊಳಿಸಲಿದೆ. ಗ್ರಾಹಕರ ಸಂದೇಶಗಳ ಸುರಕ್ಷತೆಯು ನಮಗೆ...

ರೋಪ್ ವೇ ಮಧ್ಯೆ ಸಿಲುಕಿದ ಕೇಬಲ್‌ ಕಾರು: ಅಪಾಯದಲ್ಲಿ 9 ಪ್ರವಾಸಿಗರು

newsics.com ಹಿಮಾಚಲ ಪ್ರದೇಶ: ತಾಂತ್ರಿಕ ದೋಷದಿಂದ ರೋಪ್‌ ವೇ ಮಧ್ಯೆ ಕೇಬಲ್‌ ಕಾರು ಸಿಲುಕಿದ್ದು, 9 ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹನ್ನೊಂದು‌ ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. ಸೋಲನ್ ಜಿಲ್ಲೆಯ ಪರ್ವಾನೊ ಎಂಬ ಪ್ರವಾಸಿ ತಾಣದಲ್ಲಿ ಸೋಮವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಕೇಬಲ್‌ ಕಾರಿನಲ್ಲಿ 11 ಪ್ರವಾಸಿಗರು ಪ್ರಯಾಣಿಸುತ್ತಿದ್ದರು....

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

newsics.com ಬೆಂಗಳೂರು; ಯೋಗ ದಿನದ ಪ್ರಯುಕ್ತ ಎರಡು ದಿನಗಳ‌ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಐಎಎಫ್ ವಿಶೇಷ ವಿಮಾನದಲ್ಲಿ ಯಲಹಂಕ ವಾಯು ನೆಲೆಗೆ ಆಗಮಿಸಿದ ಪ್ರಧಾನಿಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತ ಕೋರಿದರು. ಪ್ರಧಾನಿ ಮೋದಿ ಅವರನ್ನು ಶಾಲು ಹೊದಿಸಿ, ಪುಸ್ತಕ ನೀಡಿ ಸಿಎಂ ಆತ್ಮೀಯವಾಗಿ...

ದೇಶದಲ್ಲಿ ತುಸು ತಗ್ಗಿದ ಕೊರೋನಾ, 12,781 ಜನರಿಗೆ ಸೋಂಕು, 18 ಮಂದಿ ಸಾವು

newsics.com ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಕೊರೋನಾ ಪ್ರಕರಣ ಕೊಂಚ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. 12,781 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ, ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, 24 ಗಂಟೆಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್‌ಗೆ ಸಾವನ್ನಪ್ಪಿದವರ ಸಂಖ್ಯೆ 5,24,873ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 76700 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ...

ಅಗ್ನಿಪತ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಣೆ ಆರೋಪ : 35 ವಾಟ್ಸ್ ಆ್ಯಪ್ ಗ್ರೂಪ್ ನಿಷೇಧ

newsics.com ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ಆರೋಪದಡಿ 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಘೋಷಣೆಯಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಈ ಬೆಳವಣಿಗೆ ಕಂಡುಬಂದಿದೆ. ಈ ಗ್ರೂಪ್​ ಬಗ್ಗೆ ಮಾಹಿತಿ ಅಥವಾ ಅವುಗಳ...

ರಾಜ್ಯದಲ್ಲಿ 623 ಮಂದಿಗೆ ಕೊರೋನಾ, 5 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳ ಏರಿಳಿತ ಮುಂದುವರೆದಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಐದು ಸಾವಿರ ಗಡಿ ದಾಟಿದೆ. ಭಾನುವಾರ 623 ಮಂದಿಗೆ ಕೊರೋನಾ ಸೋಂಕು ತಗುಲಿದೆ. 412 ಮಂದಿ ಗುಣಮುಖರಾಗಿದ್ದಾರೆ. ಬೆಳಗಾವಿಯಲ್ಲಿ 78 ವರ್ಷದ ವ್ಯಕ್ತಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಈಗ 5035 ಸೋಂಕಿತರು ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 23...

ಬೆಂಗಳೂರಿನಲ್ಲಿ ಮಳೆ: ಟಿ 20 ಪಂದ್ಯ ರದ್ದು, ಸರಣಿ ಹಂಚಿಕೆ

newsics.com ಬೆಂಗಳೂರು: ಭಾರತ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ 5ನೇ ಪಂದ್ಯಕ್ಕೆ ಮಳೆಯಿಂದಾಗಿ ಅಡಿ ಉಂಟಾಗಿದ್ದು ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ಅದಾಗಲೇ ಎರಡು ಪಂದ್ಯಗಳನ್ನು ಇದ್ದ ಕಾರಣ ಸರಣಿಯ ಗೆಲುವನ್ನು ತಂಡಗಳ ನಡುವೆ ಹಂಚಲಾಗಿದೆ. ಮೊದಲು ಬ್ಯಾಟಿಂಗ್ ಶುರು ಮಾಡಿದ್ದ ಭಾರತ ತಂಡ 3.3 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 28...

ದೇಶದಲ್ಲಿ ತುಸು ತಗ್ಗಿದ ಕೊರೋನಾ, 12,899 ಜನರಿಗೆ ಸೋಂಕು, 13 ಮಂದಿ ಸಾವು

newsics.com ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ‌ ಕೊರೋನಾ ಸೋಂಕು‌ ಪ್ರಮಾಣ ತುಸು ಕಡಿಮೆಯಾಗಿದೆ. 12,899 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕುಸಿತವಾಗಿದ್ದು, 15 ಜನರು‌ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್‌ಗೆ ಸಾವನ್ನಪ್ಪಿದವರ ಸಂಖ್ಯೆ 524855ಕ್ಕೆ ಏರಿಕೆಯಾಗಿದೆ‌ ದೇಶದಲ್ಲಿ ಈಗ 72474 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 8518 ಜನರು...

ಬೆಲೆ ಏರಿಕೆ ನಡುವೆ ತುಸು ಸಮಾಧಾನದ ಸುದ್ದಿ, ಅಡುಗೆ ಎಣ್ಣೆ ದರ ಇಳಿಕೆ

newsics.com ಬೆಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ತುಸು ಖುಷಿಕೊಡುವ ಸುದ್ದಿ ಇಲ್ಲಿದೆ. ಏರಿದ್ದ ಅಡುಗೆ ಎಣ್ಣೆ ಬೆಲೆ ನಿಧಾನವಾಗಿ‌ ಇಳಿಯುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆಯು ಲೀಟರಿಗೆ 10 ರೂ.ವರೆಗೆ ಇಳಿಕೆಯಾಗಿದೆ. ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆಯೂ ಸಗಟು ಮಾರುಕಟ್ಟೆಯಲ್ಲಿ ಲೀಟರಿಗೆ 6ರಿಂದ 8ರೀ.ವರೆಗೆ ಕಡಿಮೆಯಾಗಿದೆ. ಇದು ಹದಿನೈದು ದಿನಗಳಲ್ಲಿ...

ಓರ್ವನ ಕೊಲೆ: ಬೆಳಗಾವಿಯ ಗೌಂಡವಾಡ ಉದ್ವಿಗ್ನ, ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

newsics.com ಬೆಳಗಾವಿ: ಕಾರು ಪಾರ್ಕಿಂಗ್ ವಿಚಾರಕ್ಕೆ ಗೌಂಡವಾಡ ಗ್ರಾಮದಲ್ಲಿ ಒಬ್ಬನ‌ನ್ನು ಕೊಲ್ಲಲಾಗಿದೆ. ಈ ಘಟನೆ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದೆ. ಶನಿವಾರ ತಡರಾತ್ರಿ ಗೌಂಡವಾಡ ಗ್ರಾಮದ‌ ಸತೀಶ ಪಾಟೀಲ (37) ಕೊಲೆಯಾಗಿದ್ದು, ಬಳಿಕ ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ ಭಾನುವಾರ ಬೆಳಗಿನ ಜಾವ ಪೊಲೀಸರು 20 ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಮದ ಬೈರೋನಾಥ ದೇವಸ್ಥಾನಕ್ಕೆ ಸೇರಿದ ಜಮೀನು...

ಬೆಂಗಳೂರಿನ 716 ಸೇರಿ ರಾಜ್ಯದಲ್ಲಿ 750 ಮಂದಿಗೆ ಕೊರೋನಾ ಸೋಂಕು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 750 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಬೆಂಗಳೂರು ನಗರದಲ್ಲೇ 716 ಕೇಸ್‍ಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ ಶನಿವಾರ ಒಟ್ಟು 716 ಕೇಸ್ ಪತ್ತೆಯಾಗಿದ್ದು, ಈ ಮೂಲಕ ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 4,653ಕ್ಕೆ ಏರಿಕೆ ಕಂಡಿದೆ. ಮೈಸೂರಿನಲ್ಲಿ ದಾಖಲಾದ 8 ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ...

‘ಅಗ್ನಿಪಥ’ ಪ್ರತಿಭಟನೆ: ಕಟ್ಟೆಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

newsics.com ನವದೆಹಲಿ: ಸೇನಾಪಡೆಯ ನೂತನ ನೇಮಕಾತಿ ಯೋಜನೆ ‘ಅಗ್ನಿಪಥ’ದ ವಿರುದ್ಧ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಅರ್ಚನಾ ವರ್ಮಾ ಈ ಸೂಚನೆ ನೀಡಿದ್ದಾರೆ. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ, ಡಿಜಿಪಿಗಳಿಗೆ ಹಾಗೂ ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಪೊಲೀಸ್...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

newsics.com ಬೆಂಗಳೂರು; 2022 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ. ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯು ಏಪ್ರಿಲ್ 22ರಿಂದ ಮೇ 18ರವರೆಗೆ ನಡೆದಿತ್ತು. ಒಟ್ಟು 1076 ಪರೀಕ್ಷಾ...

ಆಕೆ ಕೊಟ್ಟಿದ್ದು ಚಿನ್ನ, ಒಣಗಿದ ಬ್ರೆಡ್ ಎಂದು ಗೊಣಗಿ ಬಿಸಾಡಿದ ಭಿಕ್ಷುಕಿ! ಮತ್ತೆ ಮಹಿಳೆ ಕೈಸೇರಿದ 100 ಗ್ರಾಂ ಬಂಗಾರ

newsics.com ಮುಂಬೈ: ಅದೃಷ್ಟ ಎಂದರೆ ಇದೇ ಇರಬೇಕು. ಮಹಿಳೆ ಕೊಟ್ಟ ಚಿನ್ನವನ್ನು ಒಣಗಿದ ಬ್ರೆಡ್ ಎಂದು ಭಾವಿಸಿದ ಭಿಕ್ಷುಕಿ ಗಮನಿಸದೆ ಅಲ್ಲೇ ಬಿಸಾಡಿ ಹೋದರೆ, ಎಚ್ಚೆತ್ತ‌ ಮಹಿಳೆ ಅದೇ ಚಿನ್ನವನ್ನು ಮರಳಿ ಪಡೆಯುವ ಮೂಲಕ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಅದು ಸ್ವಲ್ಪ ಚಿನ್ನವಲ್ಲ, ನೂರು ಗ್ರಾಂ ಬಂಗಾರ! ಮುಂಬೈನಲ್ಲಿ ಜೂ.16ರಂದು ಈ ಅಪರೂಪದ ಘಟನೆ ನಡೆದಿದೆ. ಭಿಕ್ಷುಕಿಗೆ...

21 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

newsics.com ಬೆಂಗಳೂರು; ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳ  ತಂಡ 21 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ದಾಳಿ  ನಡೆಸಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಎಸಿಬಿ ದಾಳಿ ಮಾಡಿದೆ. ಬೆಂಗಳೂರಿನ ಜೆಪಿ ನಗರ, ಬಸವನಗುಡಿ, ಚಂದ್ರಾ ಲೇಔಟ್ ಹಾಗೂ ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದೆ. ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ...

25 ಮಂದಿಗೆ ಮೇಕೆ‌ಯ ಕಿವಿ ಜೋಡಣೆ: ವೈದ್ಯ ಲೋಕಲ್ಲೊಂದು ಅಚ್ಚರಿ ಬೆಳವಣಿಗೆ

newsics.com ಕೋಲ್ಕತ್ತಾ(ಪಶ್ಚಿಮ ಬಂಗಾಳ): ವೈದ್ಯಕೀಯ‌ ಲೋಕದಲ್ಲೊಂದು ಅಚ್ಚರಿ ನಡೆದಿದೆ. ಮೇಕೆಯ ಕಿವಿಗಳನ್ನು ಮನುಷ್ಯರಿಗೆ ಅಳವಡಿಸಲಾಗಿದೆ. ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದು, ಹುಟ್ಟಿನಿಂದಲೇ ಸೀಳು ತುಟಿಗಳಂತಹ ದೈಹಿಕ ವಿರೂಪ ಹೊಂದಿದ್ದ 25 ಜನರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು...

ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಇಂಧನ ಅಭಾವ: ಪೆಟ್ರೋಲ್‌ಗಾಗಿ ಪರದಾಟ

newsics.com ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖಾಲಿ ಆಗಿದ್ದು, ವಾಹನ ಸವಾರರ ಸಾಲು ಕಂಡುಬಙತು. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಪೆಟ್ರೋಲ್ ಬಂಕ್‌ಗಳಲ್ಲಿ ಬೇಡಿಕೆಯು ಇದ್ದಕ್ಕಿದ್ದಂತೆ ಹೆಚ್ಚಾಗಿದ್ದರಿಂದ ಇಂಧನ ಕೊರತೆ ಉಂಟಾಗಿದೆ. ಖಾಸಗಿ ಕಂಪನಿಗಳ ಪೆಟ್ರೋಲ್ ಬಂಕ್‌ಗಳು ನಷ್ಟ ಭರಿಸಲಾಗದೆ, ತೈಲ ಮಾರಾಟ ಕಡಿಮೆ ಮಾಡಿದ ನಂತರದಲ್ಲಿ ಈ ರೀತಿ...

ಮಾಸ್ಟರ್‌ಕಾರ್ಡ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ ಆರ್‌ಬಿಐ

newsics.com ಮುಂಬಯಿ: ಸ್ಥಳೀಯ ಡೇಟಾ ಶೇಖರಣಾ ಮಾನದಂಡಗಳನ್ನು ಅನುಸರಿಸಲು ವಿಫಲವಾದ ಕಾರಣ ಕಳೆದ ವರ್ಷ ವಿಧಿಸಿದ್ದ ಮಾಸ್ಟರ್‌ಕಾರ್ಡ್ ಮೇಲಿನ ನಿರ್ಬಂಧಗಳನ್ನು ಆರ್‌ಬಿಐ ಗುರುವಾರ ತೆಗೆದುಹಾಕಿದೆ. ಮಾಸ್ಟರ್‌ಕಾರ್ಡ್ ಏಷ್ಯಾ / ಪೆಸಿಫಿಕ್ ಪ್ರೈ. ಲಿಮಿಟೆಡ್ ಪಾವತಿ ಸಿಸ್ಟಮ್ ಡೇಟಾ ಸಂಗ್ರಹಣೆಯಲ್ಲಿ ತೃಪ್ತಿದಾಯಕ ಅನುಸರಣೆಯನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ, ಹೊಸ ದೇಶೀಯ ಗ್ರಾಹಕರ ಪರಿಚಿತಗೊಳಿಸುವ ಮೇಲೆ ಹೇರಿದ ನಿರ್ಬಂಧಗಳನ್ನು ತಕ್ಷಣದಿಂದಲೇ ತೆಗೆದುಹಾಕಲಾಗಿದೆ”...

ಕಾರು ಅಪಘಾತ: ಮಗು ಸೇರಿ 7 ಜನರ ದುರ್ಮರಣ

newsics.com ಭೋಪಾಲ್: ನೀರಿಲ್ಲದ ಬಾವಿಗೆ ಕಾರು ಬಿದ್ದು ಮೂರು ವರ್ಷದ ಮಗು ಸೇರಿ ಏಳು ಜನರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಲೆಂಡಗೆಂಡಿ ಗ್ರಾಮದ ನಿವಾಸಿಗಳು.ಬುಧವಾರ ಸಂಜೆ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದು,ಈ ಸಂದರ್ಭದಲ್ಲಿ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ...

ಸೇನೆಯ ‘ಅಗ್ನಿಪಥ’ಕ್ಕೆ ಅಡ್ಡಿ: ಬಿಹಾರ, ರಾಜಸ್ಥಾನದಲ್ಲಿ ಹಿಂಸಾಚಾರ

newsics.com ನವದೆಹಲಿ: 'ಅಗ್ನಿಪಥ' ಯೋಜನೆಗೆ ಬಿಹಾರ ಹಾಗೂ ರಾಜಸ್ಥಾನದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸೇನೆಗೆ 'ಅಗ್ನಿವೀರರ' (ಯೋಧರು) ನೇಮಕಾತಿ ನಡೆಸುವುದಾಗಿ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿತ್ತು. ಆದರೆ, ಉದ್ಯೋಗ ಭದ್ರತೆ ಮತ್ತು ಪಿಂಚಣಿ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಉದ್ಯೋಗಾಕಾಂಕ್ಷಿಗಳು, ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಬಿಹಾರದ ಆರಾ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು...
- Advertisement -

Latest News

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ...
- Advertisement -

ಗಾಯಾ.‌… ಮತ್ತಷ್ಟು…

ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನರಲ್ಲಿ ಪ್ರಯೋಜನಕಾರಿಯಾಗುವಷ್ಟು ಅರಿವು ಇರಲೇ ಇಲ್ಲ. ಪರಿಸರ ಸಂರಕ್ಷಣೆ ಕುರಿತಾಗಿ ಮಾತನಾಡುವವರನ್ನು ಕರುಣೆಯಿಂದ ನೋಡುವಂತಹ ಕಾಲ ಎಂದರೂ ತಪ್ಪಾಗದು! . ಪಕ್ಷಿ ಸಂರಕ್ಷಣೆ- 9 ♦ ಕಲ್ಗುಂಡಿ...

ಪ್ರಧಾನಿ ಭೇಟಿಯಿಂದ ಸಾಂಸ್ಕೃತಿಕ ನಗರಿಗೆ ಚೈತನ್ಯ‌ ಬಂತಾ? ಅಥವಾ…?

ಮೈಸೂರ್ ಪಾಕ್ ಇರಲಿ, ರೇಷ್ಮೆ ಇರಲಿ, ಅರಮನೆಯ ಸೌಂದರ್ಯ ಇರಲಿ, ಕಲೆ-ಸಂಸ್ಕೃತಿ ಸಂಗೀತ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮೈಸೂರು ಸದಾ ಮುಂದೆಯೇ ಇತ್ತು. ಯದುವಂಶ ಅಂದರೆ ಒಡೆಯರ್ ವಂಶದ ದೊರೆಗಳು...

ಗಾಯಾ… ಸತ್ಯವೇ ಮಿಥ್ಯೆಯೇ?

ಚೋದ್ಯದ ಸಂಗತಿ ಎಂದರೆ ಪ್ರಕೃತಿಯಲ್ಲಿ ತನ್ನ ಆವಾಸವನ್ನು ಹಾಳುಗೆಡಹುವ ಜೀವಿ ಹೇಗೆ ಕೇವಲ ಮಾನವನೋ ಅದನ್ನು ಉದ್ಧರಿಸಲು ಯತ್ನಿಸುವ ಜೀವಿಯೂ ಮಾನವ ಮಾತ್ರ! ಇದೇಕೆ ಹೀಗೆ ಎಂದು ಹೇಳಹೊರಟರೆ ಮಾನವನ ಇತಿಹಾಸವನ್ನೇ ಹೇಳಬೇಕಾದೀತು. . ...

ಕಾರ್ಬನ್ ನೆರಳು ನಿವಾರಣೆ ಹೇಗೆ?

ನಾವೆಲ್ಲರೂ ಯೋಚಿಸಿ ಪ್ರಬುದ್ಧರಾಗಬೇಕು. ಪ್ರಬುದ‍್ದ ಜನರಿಂದಲೇ ಪ್ರಬುದ್ಧ ಸರ್ಕಾರ. ಜನಜಾಗೃತಿಯಾಗಬೇಕು. ನಮ್ಮ ಕಸ ಹಾಗೂ ತ್ಯಾಜ್ಯ ನಮ್ಮ ಜವಾಬ್ದಾರಿ ಎಂಬ ಭಾವ ಬೆಳೆಯಬೇಕು. ಹಾಗೆಯೇ ನಮಗೆ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳಿಗೂ ಇವುಗಳ ವಿಲೇವಾರಿಯ...
error: Content is protected !!