Saturday, May 21, 2022

ವೈರಲ್

ನೀರಿನಿಂದ ಹೊರ ತೆಗೆದ ತಕ್ಷಣ ಬಣ್ಣ ಬದಲಿಸುತ್ತೆ ಈ ಮೀನು!

newsics.com ಸಮುದ್ರದ ಒಡಲಿನಲ್ಲಿ ಎಷ್ಟು ಹುಡುಕಿದರೂ ಕೌತುಕಗಳಿಗೆ ಬರಗಾಲವೇ ಇರೋದಿಲ್ಲ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ಬಣ್ಣ ಬದಲಾಯಿಸುವ ಮೀನೊಂದರ ವಿಡಿಯೋ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ಈ ವಿಡಿಯೋದಲ್ಲಿ ಮೀನು ನೀರಿನಲ್ಲಿದ್ದಾಗ ಕಪ್ಪು ಬಣ್ಣದಲ್ಲಿ ಇರುತ್ತದೆ. ನೀರಿನಿಂದ ಹೊರ ತೆಗೆದ ತಕ್ಷಣ ಕಪ್ಪಗಿದ್ದ ಮೀನಿನ ಬಣ್ಣವು ನೀರಿನ ಬಣ್ಣದಂತೆ ಪಾರದರ್ಶಕವಾಗಿದೆ. ಈ...

ಬಿಕಿನಿ ಧರಿಸಿ ಫೋಸ್​ ಕೊಟ್ಟ ಕಿರಿಕ್​ ಚೆಲುವೆ ಸಂಯುಕ್ತಾ ಹೆಗ್ಡೆ

newsics.com ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಭಾರೀ ಫೇಮಸ್ ಆಗಿದ್ದ ಸಂಯುಕ್ತಾ ಹೆಗ್ಡೆ, ಇತ್ತೀಚೆಗೆ ತಮಿಳು ಸಿನಿಮಾದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸಿನಿಮಾಕ್ಕಿಂತ ದುಬೈ ಪ್ರವಾಸದಲ್ಲಿರುವ ಈಕೆ ಬಿಕಿನಿ ಉಡುಗೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸ್ವಿಮ್ಮಿಂಗ್ ಪೂಲ್ ಒಂದರ ಮುಂದೆ ತೆಗಿಸಿರುವ ಫೋಟೋ ಮತ್ತು ವೀಡಿಯೋವನ್ನು ಆಕೆ ಪೋಸ್ಟ್ ಮಾಡಿದ್ದೂ, ಅದಕ್ಕೆ 'ನಾನು ತಾಪಮಾನಕ್ಕೆ ಬಿಸಿಯನ್ನು ಹೆಚ್ಚಿಸುತ್ತಿದ್ದೆನಾ?...

ಮೂರು ಹುಲಿಮರಿಗಳನ್ನು ಸಾಕುತ್ತಿದೆ ಈ ಲ್ಯಾಬ್ರಡಾರ್!

newsics.com ತಾಯಿಯಿಂದ ಬೇರ್ಪಟ್ಟಿರುವ ಮೂರು ಹುಲಿ ಮರಿಗಳನ್ನು ಲ್ಯಾಬ್ರಡಾರ್‌ ನಾಯಿಯೊಂದು ಪ್ರೀತಿಯಿಂದ ಸಲಹುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಚೀನಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಹುಲಿ ಮರಿಗಳು ಮತ್ತು ಸಾಕು ತಾಯಿಯ ನಡುವಿನ ಬಾಂಧವ್ಯ ನೋಡುಗರನ್ನು ಬೆರಗುಗೊಳಿಸಿದೆ. ಹುಲಿ ಮರಿಗಳು ನಾಯಿಯ ಸುತ್ತ ಆಟವಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಹುಟ್ಟಿದ ಕೂಡಲೇ...

‘ ಇದು ನನ್ನ ಬೆಡ್.. ಏಳು’ ಮರಿಯಾನೆಯ ತುಂಟಾಟದ ವೀಡಿಯೊ ವೈರಲ್

newsics.com ಪುಟಾಣಿ ಆನೆ ಮರಿಯು ತನ್ನ ಆವರಣದಲ್ಲಿರುವ ಬೇಲಿಯನ್ನು ತೆಗೆದು ಹೊರಬಂದ ಬಳಿಕ ಆನೆ ಓಡಾಡುತ್ತಿರುವ ಸ್ಥಳದಲ್ಲಿ ಒಬ್ಬ ವ್ಯಕ್ತಿ ಬೆಡ್ ಮೇಲೆ ಮಲಗಿರುವುದನ್ನು ನೋಡಿ ಆ ವ್ಯಕ್ತಿಯೊಂದಿಗೆ ಪುಟಾಣಿ ಆನೆಯು ಆಟವಾಡುತ್ತಿರುವ ದೃಶ್ಯದ ವೀಡಿಯೊ ವೈರಲ್ ಆಗಿದೆ. ಮಲಗಿರುವ ವ್ಯಕ್ತಿಯನ್ನು ಬೆಡ್ ನಿಂದ ಎಬ್ಬಿಸಲು ಪ್ರಯತ್ನ ಪಡುವ ದೃಶ್ಯವು ಅವರಿಬ್ಬರ ನಡುವಿನ ಸ್ನೇಹಕ್ಕೂ ಸಾಕ್ಷಿಯಾಗಿದೆ. ಈ...

ಹರಿದು ಹೋದ ಕೊಳಕು ಶೂಗೆ 1.44 ಲಕ್ಷ ರೂಪಾಯಿ ನಿಗದಿ ಮಾಡಿದ ಪ್ರತಿಷ್ಠಿತ ಬ್ರ್ಯಾಂಡ್​..!

newsics.com ಪ್ರಸಿದ್ಧ ಐಷಾರಾಮಿ ಬ್ರ್ಯಾಂಡ್​ಗಳಲ್ಲಿ ಒಂದಾದ ಬಾಲೆನ್ಸಿಯಾಗ, ಸಂಪೂರ್ಣವಾಗಿ ಹಾಳಾದಂತೆ ತೋರುತ್ತಿರುವ ಶೂಗಳಿಗೆ ದುಬಾರಿ ದರ ನಿಗದಿ ಮಾಡುವ ಮೂಲಕ ಸುದ್ದಿಯಲ್ಲಿದೆ. ಅತ್ಯಂತ ಕೊಳಕು ಹಾಗೂ ಬಳಕೆಗೆ ಯೋಗ್ಯವೇ ಇಲ್ಲವೇನೋ ಎಂಬಂತಿರುವ ಈ ಶೂಗಳು 38 ಸಾವಿರ ರೂಪಾಯಿಗಳಿಂದ 1.44 ಲಕ್ಷ ರೂಪಾಯಿ ಮೌಲ್ಯದಲ್ಲಿ ಲಭ್ಯವಿದೆ. ಅತೀ ಹೆಚ್ಚು ಕೊಳಕು ಹಾಗೂ ಹಾನಿಗೊಳಗಾದಂತೆ ಕಾಣುತ್ತಿರುವ ಶೂಗೆ ಅತೀ...

ನೀರಿನಲ್ಲಿ ಮೊಲದ ಈಜಾಟ; ವಿಡಿಯೋ ವೈರಲ್

newsics.com ಮೊಲವೊಂದು ನೀರಿಗಿಳಿದು ಈಜುವ 30 ಸೆಕೆಂಡುಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು, ಈ ವೀಡಿಯೊ ಎಲ್ಲರ ಮನ ಗೆದ್ದಿದೆ. ಮೊಲದ ಖುಷಿಯ ಕ್ಷಣವನ್ನು ನೋಡುಗರು ಮನಸಾರೆ ಆಸ್ವಾದಿಸಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ. ಈಗಾಗಲೇ ಈ ವೀಡಿಯೋವನ್ನು ಹಲವಾರು ಜನರು ಶೇರ್ ಮಾಡಿದ್ದು, ಮಿಲಿಯನ್ ಜನರು...

ಸಮುದ್ರದಾಳದಲ್ಲಿ ಪತ್ತೆಯಾಯ್ತು ಅತ್ಯಂತ ವಿಚಿತ್ರ ಮೀನು..!

newsics.com ಉಬ್ಬಿದ ಹಳದಿ ಕಣ್ಣುಗಳನ್ನು ಹೊಂದಿರುವ ವಿಚಿತ್ರವಾದ ಮೀನನ್ನು ರಷ್ಯಾದಲ್ಲಿ 1100 ಮೀಟರ್​ ಆಳದಲ್ಲಿ ಪತ್ತೆ ಮಾಡಲಾಗಿದೆ. ಆಳ ಸಮುದ್ರದ ಮೀನುಗಾರ ರೋಮನ್​ ಫೆಡೋರ್ಟ್ಸೋವ್​​ ಎಂಬವರು ಈ ವಿಚಿತ್ರ ಮೀನಿನ ಚಿತ್ರವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವುಗಳು ನಿಜವಾಗಿಯೂ ಅಪರೂಪದ ಜಾತಿಯ ಮೀನುಗಳೇ ಅಥವಾ ಮಾಲಿನ್ಯದಿಂದಾಗಿ ಅಸಹಜವಾಗಿ ಜನಿಸಿದ ಜೀವಿಯೇ ಎಂದು ಅವರು ಶೀರ್ಷಿಕೆ ನೀಡಿದ್ದಾರೆ. https://newsics.com/news/india/sc-puts-sedition-law-on-hold-till-review-complete-says-no-new-case-to-be-filed-for-now/109189/

ವಿವಾಹದ ದಿನದಂದು ಶೆರ್ವಾನಿ ಧರಿಸಿದ ವರ : ವಧು ಕುಟುಂಬಸ್ಥರಿಂದ ಕಲ್ಲು ತೂರಾಟ..!

newsics.com ಬುಡುಕಟ್ಟು ಸಮುದಾಯಕ್ಕೆ ಸೇರಿದ್ದ ವರನೊಬ್ಬ ತನ್ನ ಮದುವೆಯಲ್ಲಿ ಶೆರ್ವಾನಿ ಧರಿಸಿದ್ದ ಕಾರಣಕ್ಕೆ ಆತನ ಹಾಗೂ ವಧುವಿನ ಕುಟುಂಬಸ್ಥರ ನಡುವೆ ವಾಗ್ವಾದ ಉಂಟಾದ ಘಟನೆಯು ಮಧ್ಯ ಪ್ರದೇಶದ ಧಾರ್​ ಜಿಲ್ಲೆಯಲ್ಲಿ ಸಂಭವಿಸಿದೆ. ವಧು ಹಾಗೂ ವರನ ಕುಟುಂಬಸ್ಥರ ನಡುವೆ ಉಂಟಾದ ವಿವಾದವು ಬಳಿಕ ಪರಸ್ಪರ ಕಲ್ಲೆಸೆತ ಮಾಡಿಕೊಂಡು ಹಿಂಸಾಚಾರದವರೆಗೆ ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಧುವಿನ...

ಪವಿತ್ರ ವೃಕ್ಷದ ಪಕ್ಕದಲ್ಲಿ ಬೆತ್ತಲೆಯಾಗಿ ಪೋಸ್​ ನೀಡಿದಾಕೆಗೆ 6 ವರ್ಷ ಜೈಲು ಶಿಕ್ಷೆ

newsics.com ರಷ್ಯಾದ ಸೋಶಿಯಲ್​ ಮೀಡಿಯಾ ಇನ್​​ಫ್ಲ್ಯೂಯೆನ್ಸರ್​​​ ಮಹಿಳೆಯೊಬ್ಬರು ಬಾಲಿ ದೇವಸ್ಥಾನದಲ್ಲಿ 700 ವರ್ಷಗಳಷ್ಟು ಹಳೆಯದಾದ ಪವಿತ್ರ ವೃಕ್ಷದ ಪಕ್ಕದಲ್ಲಿ ಬೆತ್ತಲೆಯಾಗಿ ಪೋಸ್​ ನೀಡಿದ ಪರಿಣಾಮ ಆರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ಎದುರಿಸುತ್ತಿದ್ದಾರೆ. ಅಲೀನಾ ಘಜ್ಲೀವಾ ಇದೀಗ ತಮ್ಮ ಖಾತೆಗಳಿಂದ ಬೆತ್ತಲೆ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. ಮಾತ್ರವಲ್ಲದೇ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಘಟನೆಯಿಂದ ನಾನು ಮುಜುಗರ...

ಪೊಲೀಸ್​ ಠಾಣೆ ಮೆಟ್ಟಿಲೇರಿದ ನಿಂಬೆ ಹಣ್ಣಿನ ಗಲಾಟೆ..!

newsics.com ನಿಂಬೆ ಹಣ್ಣಿನ ವಿಚಾರಕ್ಕೆ ಶುರುವಾದ ಗಲಾಟೆಯು ಪೊಲೀಸ್​ ಸ್ಟೇಷನ್​ ಮೆಟ್ಟಿಲೇರುವವರೆಗೆ ಮುಂದುವರಿದ ಘಟನೆಯು ಗುಜರಾತ್​ನ ಪಟಾನ್​ ಎಂಬಲ್ಲಿ ನಡೆದಿದೆ. ಹಂಸಾಬೆನ್​​ ಎಂಬವರ ಮನೆಯಲ್ಲಿ ಬೆಳೆದಿದ್ದ ನಿಂಬೆ ಹಣ್ಣುಗಳನ್ನು ಅನಿತಾಬೆನ್​ ಎಂಬವರು ಕೇಳದೆಯೇ ಕೊಂಡೊಯ್ದಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಕಲಹ ಏರ್ಪಟ್ಟಿದೆ. ಇಬ್ಬರ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಹಂಸಾಬೆನ್​ನಲ್ಲಿದ್ದ ಚಿನ್ನದ ಸರದ ಪದಕ ಕಳೆದು ಹೋಗಿದೆ....

ಒಂದೇ ಬೈಕ್ ನಲ್ಲಿ ಐವರು ಪ್ರಯಾಣ ;ವಿಡಿಯೋ ವೈರಲ್

newsics.com ಮಂಗಳೂರು: ಎಂಜಿ ರಸ್ತೆಯಲ್ಲಿ ಟಿವಿಎಸ್ ಕಡೆಯಿಂದ ಲಾಲ್ ಬಾಗ್ ಕಡೆಗೆ ಒಂದೇ ಬೈಕ್ ನಲ್ಲಿ ಐವರು ಪ್ರಯಾಣಿಸುತ್ತಿದ್ದ ವಿಡಿಯೋವನ್ನು ಶಾಸಕ ವೇದವ್ಯಾಸ್ ಕಾಮತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಂಬಂಧಪಟ್ಟ ವಾಹನ ಮಾಲೀಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಐವರನ್ನು ಕುಳ್ಳಿರಿಸಿಕೊಂಡಿದ್ದರೂ ಬೈಕ್ ಸವಾರ ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವುದು...

ಕೊಲೆ ಪ್ರಕರಣದ ಸಾಕ್ಷ್ಯಗಳನ್ನು ಎಗರಿಸಿ ಪರಾರಿಯಾದ ಕೋತಿ..!

newsics.com 2016ರ ಕೊಲೆ ಪ್ರಕರಣದ ಸಾಕ್ಷ್ಯಗಳನ್ನು ಒದಗಿಸಿ ಎಂದು ನ್ಯಾಯಾಲಯವು ಕೇಳಿದ ಪ್ರಶ್ನೆಗೆ ರಾಜಸ್ಥಾನ ಪೊಲೀಸರು ಕೊಲೆ ಪ್ರಕರಣದ ಸಾಕ್ಷ್ಯಗಳನ್ನು ಕೋತಿಯೊಂದು ಎಗರಿಸಿಕೊಂಡು ಓಡಿ ಹೋಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಓರ್ವ ಕಾನ್​ಸ್ಟೇಬಲ್​ ಕೂಡ ಕಾರಣ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ. ಈ ಕಾನ್​ಸ್ಟೇಬಲ್​ನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಅವರು ನಿವೃತ್ತಿ ಹೊಂದಿ ಕಾಲಾಂತರದಲ್ಲಿ ನಿಧನರಾಗಿದ್ದಾರೆ ಎಂದು...

ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆ ಲಭ್ಯ: ಪೂನಾವಾಲ

newsics.com ಪುಣೆ: ಕೋವಿಡ್‌ ನಿರೋಧಕ ಲಸಿಕೆಯಾಗಿರುವ ಕೊವೊವ್ಯಾಕ್ಸ್‌ 12 -17 ವರ್ಷದ ಎಲ್ಲರಿಗೂ ಲಭ್ಯವಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲ ಅವರು ಸ್ಪಷ್ಟಪಡಿಸಿದ್ದಾರೆ. ಮಕ್ಕಳಿಗೆ ಇನ್ನೊಂದು ಲಸಿಕೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದು, ಅದರಂತೆ ಇದನ್ನು ಉತ್ಪಾದಿಸಲಾಗಿದೆ. ಶೇ. 90ರಷ್ಟು ಸಾಮರ್ಥ್ಯದ ಈ ಲಸಿಕೆಯನ್ನು ಯೂರೋಪ್‌ನಲ್ಲೂ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯನ್ನು ದೋಷಿ ಎಂದು ಆದೇಶ ನೀಡಿದ ಜರ್ಮನಿ ಕೋರ್ಟ್

newsics.com ಪಶ್ಚಿಮ ಜರ್ಮನಿಯ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯನ್ನು ದೋಷಿ ಎಂದು ತೀರ್ಪು ನೀಡಿದೆ. ಆಕೆಯ ಸಂಗಾತಿಯು ಬಳಕೆ ಮಾಡುತ್ತಿದ್ದ ಕಾಂಡೋಮ್​ಗಳನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ತೀರ್ಪನ್ನು ಪ್ರಕಟಿಸುವ ವೇಳೆಯಲ್ಲಿ ಜರ್ಮನ್​ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣವು ಜರ್ಮನ್​ ಕಾನೂನು ಇತಿಹಾಸದ ಪುಟಗಳಲ್ಲಿ ಸೇರುತ್ತದೆ ಎಂದಿದ್ದಾರೆ. https://newsics.com/entertainment/actress-amrita-ramamurthy-come-back-tv-serial/108361/

ತಂದೆಯ ಬ್ಲೇಜರ್ ಧರಿಸಿ ಅಕ್ಕನ ಜೊತೆ ತಂಗಿ ಡ್ಯಾನ್ಸ್ ; ವೀಡಿಯೋ ವೈರಲ್

newsics.com ತನ್ನ ತಂದೆಯ ಅನುಪಸ್ಥಿತಿಯನ್ನು ಸರಿದೂಗಿಸಲು, ಮಹಿಳೆಯೊಬ್ಬಳು ತನ್ನ ಮದುವೆಯಲ್ಲಿ ತಂದೆಯ ಬ್ಲೇಜರ್ ಧರಿಸಿದ ತನ್ನ ಸಹೋದರಿಯೊಂದಿಗೆ ಡ್ಯಾನ್ಸ್ ಮಾಡಿದ್ದಾಳೆ. ಅವಳು ತನ್ನ ಮದುವೆ ದಿನದಂದು ತಂದೆಯೊಂದಿಗೆ ಡ್ಯಾನ್ಸ್ ಮಾಡಲು ಬಯಸಿದ್ದಳು. ಆದರೆ ದುರಾದೃಷ್ಟವಶಾತ್ ಅವರು ಮಹಿಳೆಯ ಮದುವೆಗೆ ಮುಂಚಿತವಾಗಿಯೇ ನಿಧನರಾಗಿದ್ದಾರೆ. ಈ ವಿಡಿಯೋವನ್ನು ಎರಡು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಇಲ್ಲಿಯವರೆಗೆ...

ಸ್ನೇಹಿತನೊಂದಿಗೆ ನಟಿ ಮಂದಿರಾ ಬೇಡಿ ಫೊಟೋ ವೈರಲ್

newsics.com ನಟಿ ಮಂದಿರಾ ಬೇಡಿ ಇತ್ತೀಚೆಗೆ ತನ್ನ ಹುಟ್ಟುಹಬ್ಬದಂದು ಪೂಲ್ ನಲ್ಲಿ ಸ್ನೇಹಿತನೊಂದಿಗೆ ಜೊತೆಯಾಗಿರುವ ಕೆಲವೊಂದು ಫೋಟೋಗಳನ್ನು ಇನ್ ಸ್ಟಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದರು. ಫೊಟೋ ಪೋಸ್ಟ್ ಮಾಡಿದ ತಕ್ಷಣ, ಅದು ಅತಿ ಹೆಚ್ಚು ಟ್ರೋಲ್ ಕೂಡ ಆಗಿದ್ದು, ಆ ಫೊಟೋಗಳು ಭಾರಿ ವೈರಲ್ ಆಗಿದೆ. https://newsics.com/news/karnataka/9000-teachers-absent-for-sslc-assessment-result-may-the-possibility-of-publishing-at-15/108318/

ಈದ್ಗಾ ನಿರ್ಮಾಣಕ್ಕೆ ಸ್ವಂತ ಭೂಮಿ ನೀಡಿದ ಹಿಂದೂ ಸಹೋದರಿಯರು

newsics.com ಸರೋಜ್​ ರಸ್ತೋಗಿ ಹಾಗೂ ಅನಿತಾ ರಸ್ತೋಗಿ ಎಂಬ ಇಬ್ಬರು ಸಹೋದರಿಯರು ಉತ್ತರಾಖಂಡ್​ನಲ್ಲಿ ಈದ್ಗಾ ನಿರ್ಮಾಣಕ್ಕೆ ತಮ್ಮ 20,400 ಚದರ ಅಡಿ ಭೂಮಿಯನ್ನು ದಾನ ಮಾಡಿದ್ದಾರೆ. ತಂದೆಯ ಆಸೆಯಂತೆ ಈದ್ಗಾಗೆ ನಮ್ಮ ಭೂಮಿ ದಾನ ಮಾಡಿದ್ದೇವೆ ಎಂದು ಹಿಂದೂ ಸಹೋದರಿಯರು ಹೇಳಿದ್ದಾರೆ. ಕೋಮುವಾದವು ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಈ ಇಬ್ಬರು ಸಹೋದರಿಯರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಕಾಶಿಪುರ...

ಹಾರಾಡುತ್ತಿದ್ದ ವಿಮಾನದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ

newsics.com ಪಾಮ್​ ಪ್ಯಾಟರ್ಸನ್​ ಹಾಗೂ ಜೆರೆಮಿ ಸಾಲ್ಡಾ ಎಂಬವರು ಲಾಸ್​ ವೇಗಾಸ್​​ಗೆ ತೆರಳುತ್ತಿದ್ದ ಸೌತ್​ವೆಸ್ಟ್​ ಏರ್​ಲೈನ್ಸ್​ ವಿಮಾನದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಗರಕ್ಕೆ ಅವರ ಮೂಲ ವಿಮಾನವು ರದ್ದುಗೊಂಡ ಬಳಿಕ ಈ ಬೆಳವಣಿಗೆ ನಡೆದಿದೆ. ವಿಮಾನವನ್ನು ಹತ್ತುವಾಗ ಇವರಿಬ್ಬರು ಮದುವೆ ಡ್ರೆಸ್​ನಲ್ಲಿ ಇದ್ದಿದ್ದನ್ನು ಗಮನಿಸಿದ ಪೈಲಟ್​ ವಧುವಿನ ಬಳಿ ಈ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ...

47 ಮಕ್ಕಳ ತಂದೆಗೆ ಬೇಕಂತೆ ಜೀವನ ಸಂಗಾತಿ..!

newsics.com ಪ್ರಪಂಚದಾದ್ಯಂತ 47 ಮಕ್ಕಳನ್ನು ಹೊಂದಿರುವ ಕ್ಯಾಲಿಫೋರ್ನಿಯಾದ 30 ವರ್ಷದ ವ್ಯಕ್ತಿಯೊಬ್ಬ ತನ್ನ ಜೊತೆ ಯಾರೂ ಡೇಟಿಂಗ್​ ಮಾಡುತ್ತಿಲ್ಲವೆಂದು ಕೊರಗುತ್ತಿದ್ದಾನೆ. 47 ಮಂದಿ ಮಕ್ಕಳಿದ್ದರೂ ಈತನಿಗೇಕೆ ಈ ಕೊರಗು ಬಂತು ಎಂದು ನೀವು ಎಂದಿಕೊಂಡಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಕ್ಯಾಲಿರ್ಫೋನಿಯಾದ ಕೈಲ್ ಕಾರ್ಡಿ ವೀರ್ಯಾಣು ದಾನ ಮಾಡುವವನಾಗಿದ್ದು ಈವರೆಗೆ 47 ಮಕ್ಕಳಿಗೆ ಜೈವಿಕ ತಂದೆಯಾಗಿದ್ದಾನೆ. ಇನ್ನೂ...

ಜರ್ಮನಿಯಲ್ಲಿ ಪ್ರಧಾನಿ ಮೋದಿ ಎದುರು ದೇಶಭಕ್ತಿ ಗೀತೆ ಹಾಡಿ ಗಮನ ಸೆಳೆದ ಬಾಲಕ

newsics.com ಜರ್ಮನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯ ಎದುರು ಭಾರತೀಯ ಮೂಲದ ಬಾಲಕನೊಬ್ಬ ದೇಶಭಕ್ತಿ ಗೀತೆಯನ್ನು ಹಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಧಾನಿ ಮೋದಿ ಮೂರು ದಿನಗಳ ಮೂರು ದೇಶಗಳ ಯುರೋಪ್ ಪ್ರವಾಸದಲ್ಲಿದ್ದಾರೆ. ಈ ಪ್ರದೇಶವು ಹೆಚ್ಚು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯುರೋಪ್​ಗೆ ನಾನು ಭೇಟಿ ನೀಡಿದ್ದೇನೆ. ನಮ್ಮ ಯುರೋಪಿಯನ್​ ಪಾಲುದಾರರೊಂದಿಗೆ ಸಹಕಾರದ ಮನೋಭಾವವನ್ನು ಬಲಪಡಿಸಲು...

ಮ್ಯಾಟ್ರಿಮೋನಿಯಲ್ಲಿ ಬಂದ ಸಂಬಂಧಕ್ಕೆ ಕೆಲಸದ ಆಫರ್​ ನೀಡಿದ ಯುವತಿ

newsics.com ಮಹಿಳೆಯೊಬ್ಬರು ತನ್ನ ತಂದೆ ಕಳುಹಿಸಿದ ಮ್ಯಾಟ್ರಿಮೋನಿಯಲ್​​ ಮ್ಯಾಚ್​​ಗೆ ಬೆಂಗಳೂರು ಮೂಲದ ಸ್ಟಾರ್ಟ್​ಅಪ್​ನಲ್ಲಿ ಕೆಲಸ ನೀಡಿದ್ದು ತಂದೆಯೊಂದಿಗೆ ಸಂಭಾಷಣೆ ನಡೆಸಿದ ಚಾಟ್​ನ ಸ್ಕ್ರೀನ್​​ ಶಾಟ್​ನ್ನು ಶೇರ್​ ಮಾಡಿದ್ದಾರೆ. ಈ ಸ್ಕ್ರೀನ್​ಶಾಟ್​ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ನೀನು ಮ್ಯಾಟ್ರಿಮೋನಿಯಲ್ ಸೈಟ್​ಗಳಿಂದ ಜನರನ್ನು ಹುದ್ದೆಗೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಅವರ ತಂದೆಗೆ ಏನು ಹೇಳಲಿ ಎಂದು ತಂದೆ...

ನಾಡ ಒಳಿತಿಗಾಗಿ ಈ ದೇಗುಲದಲ್ಲಿ ನಡೆಯುತ್ತೆ ಭಕ್ತರ ನಡುವೆ ಕಾದಾಟ..!

newsics.com ನಾಡಿನ ಒಳಿತಿಗಾಗಿ ಭಕ್ತರು ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಗೋಲು ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂತಹದ್ದೊಂದು ವಿಶಿಷ್ಠ ಆಚರಣೆ ನಡೆಯುತ್ತದೆ. ಉಳ್ಳಾಕುಲು ದೈವದ ನೇಮೋತ್ಸವದಲ್ಲಿ ಈ ರೀತಿಯ ವಿಶಿಷ್ಟ ಆಚರಣೆ ನಡೆಯುತ್ತದೆ. ಬಳ್ಳಾಲರು ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿಚಾರಕ್ಕೆ ಉಂಟಾದ ಸಂಘರ್ಷಕ್ಕೆ ದೇವರ...

58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಬಿಜೆಡಿ ಶಾಸಕ..!

newsics.com ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿನಂತೆ ಒಡಿಶಾದ ಫುಲ್ಭಾನಿಯ ಶಾಸಕ ಅಂಗದ ಕನ್ಹರ್​​ ತಮ್ಮ 58ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆಯನ್ನು ಬರೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಒಡಿಶಾದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ 10ನೇ ತರಗತಿ ಪರೀಕ್ಷೆಯಲ್ಲಿ ಬಿಜೆಡಿ ಶಾಸಕ ಅಂಗದ ಕನ್ಹರ್​​ ಪಟಿಭಾರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಎದುರಿಸಿದ್ದಾರೆ. 1978ರಲ್ಲಿ ಓದು ಮೊಟಕುಗೊಳಿಸಿದ್ದ ಅಂಗದ...

ಸಮಯಕ್ಕೆ ಸರಿಯಾಗಿ ಮಂಟಪಕ್ಕೆ ಬಾರದ ವರ:ಸಂಬಂಧಿ ಜೊತೆ ವಧುವಿನ ವಿವಾಹ

newsics.com ಪಾನಮತ್ತನಾಗಿದ್ದ ವರ ಸರಿಯಾದ ಸಮಯಕ್ಕೆ ಕಲ್ಯಾಣ ಮಂಟಪಕ್ಕೆ ಬಾರದ ಹಿನ್ನೆಲೆಯಲ್ಲಿ ವಧುವಿನ ತಂದೆಯು ತನ್ನ ಸಂಬಂಧಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದಂತಹ ಘಟನೆಯೊಂದು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಸಂಭವಿಸಿದೆ. ಏಪ್ರಿಲ್​ 22ರಂದು ಈ ಮದುವೆಯು ಬುಲ್ದಾನಾ ಜಿಲ್ಲೆಯ ಮುಲ್ಕಪುರ ಪಾಂಗ್ರಾ ಗ್ರಾಮದಲ್ಲಿ ನಿಶ್ಚಯಗೊಂಡಿತ್ತು. ಸಂಜೆ 4 ಗಂಟೆ ಸುಮಾರಿಗೆ ಮುಹೂರ್ತ ಕೂಡ ನಿಗದಿಯಾಗಿತ್ತು. ರಾತ್ರಿ 8...

ಕಬಾಬ್​ ಮಾರಾಟಗಾರನ ಫೋಟೋ ಕ್ಲಿಕ್ಕಿಸಿ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಭಾರತೀಯ​​!

newsics.com ಭಾರತೀಯ ಫೋಟೋಗ್ರಾಫರ್​ ದೇವದತ್ತ ಚಕ್ರವರ್ತಿ 2022ನೇ ಸಾಲಿನ ಪಿಂಕ್​ ಲೇಡಿ ಫೋಟೋಗ್ರಾಫರ್​​ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಕೆಬಾಬಿಯಾನಾ ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀನಗರದಲ್ಲಿ ಕ್ಲಿಕ್ಕಿಸಲಾದ ಛಾಯಾಚಿತ್ರದಲ್ಲಿ ಜನನಿಬಿಡ ಬೀದಿಯಲ್ಲಿ ರಾತ್ರಿಯ ವೇಳೆಯಲ್ಲಿ ಕಬಾಬ್​ ಮಾರಾಟಗಾರನನ್ನು ಕಾಣಬಹುದಾಗಿದೆ. ಈ ಫೋಟೋ ಸೌಮ್ಯ ಹಾಗೂ ಶಕ್ತಿಯುತವಾಗಿದೆ. ನಮ್ಮ ಆತ್ಮವನ್ನು ಪೋಷಿಸುತ್ತದೆ ಎಂದು ಪ್ರಶಸ್ತಿಯ ಸಂಸ್ಥಾಪಕಿ ಕ್ಯಾರೋಲಿನ್​ ಕೆನ್ಯಾನ್​ ಹೇಳಿದ್ದಾರೆ. https://newsics.com/news/viral/tiff-over-not-serving-laddoos-to-baaratis-reach-police-station-in-chhattisgarh/107454/  

ಲಡ್ಡುಗಾಗಿ ಮದುವೆ ಮಂಟಪದಲ್ಲಿಯೇ ಹೊಡೆದಾಟ: ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು!

newsics.com ಮುಂಗೇಲಿ ( ಛತ್ತೀಸಗಢ) : ಲಡ್ಡು ವಿಚಾರಕ್ಕಾಗಿ ನಡೆದ ಗಲಾಟೆಯಿಂದಾಗಿ ಮದುವೆ ಮಂಟಪದಲ್ಲಿ ದೊಡ್ಡ ಮಟ್ಟದ ಹೊಡೆದಾಟವೇ ನಡೆದ ವಿಚಿತ್ರ ಘಟನೆಯೊಂದು ಛತ್ತೀಸಗಢದ ಮುಂಗೇಲಿ ಜಿಲ್ಲೆಯ ಚಾರ್ಭಾ ಎಂಬಲ್ಲಿ ಸಂಭವಿಸಿದೆ. ಗಲಾಟೆಯು ವಿಪರೀತ ಮಟ್ಟಕ್ಕೆ ತಲುಪಿದ ಪರಿಣಾಮ ಎರಡೂ ಕಡೆಯವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಬೆಮತಾರಾ ಗ್ರಾಮದ ಸೂರಜ್​ ಸಾಹು ಎಂಬಾತನ ವಿವಾಹ ಚಾರ್ಭಾ ಗ್ರಾಮದ...

ಕ್ಯಾಮರಾವನ್ನೇ ನುಂಗಿದ ಶಾರ್ಕ್​..! ಸೆರೆಯಾಯ್ತು ಭಯಾನಕ ದೃಶ್ಯ

newsics.com ಸಮುದ್ರದಲ್ಲಿ ವಾಸಿಸುವ ಜಲಚರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಚಲನಚಿತ್ರ ನಿರ್ಮಾಪಕ ಹಾಗೂ ಸಂರಕ್ಷಣಾವಾದಿ ಜಿಮ್ಮಿ ಡಾ ಕಿಡ್​​ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾರ್ಕ್​ನ ಬಾಯಿಯೊಳಗಿನ ದೃಶ್ಯವನ್ನೆಲ್ಲೆ ಸೆರೆ ಹಿಡಿದಿದ್ದಾರೆ. ಸಾಕ್ಷ್ಯಚಿತ್ರಕ್ಕಾಗಿ ನೀರಿನ ಅಡಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದ ವೇಳೆಯಲ್ಲಿ ಅವರ ಇನ್​ಸ್ಟಾ-360 ಕ್ಯಾಮರಾ ಶಾರ್ಕ್​ನ ಬಾಯಿಯೊಳಗೆ ಹೋಗಿತ್ತು. ಕ್ಯಾಮರಾ ಆನ್​...

ಮನಸ್ಸಿಗೆ ಮುದ ನೀಡುತ್ತೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟ ಮರಿಯಾನೆಯ ಈ ಮುದ್ದಾದ ವಿಡಿಯೋ

newsics.com ಸೋಶಿಯಲ್​ ಮೀಡಿಯಾದಲ್ಲಿ ಮುದ್ದು ಮುದ್ದು ಎನ್ನಿಸುವ ಪ್ರಾಣಿಗಳ ವಿಡಿಯೋಗಳಿಗೆ ಯಾವುದೇ ಬರವಿಲ್ಲ. ಇದೇ ಸಾಲಿಗೆ ಸೇರಿದ ಮರಿ ಆನೆಯ ವಿಡಿಯೋವೊಂದು ಇದೀಗ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಪುಟ್ಟ ಆನೆಯೊಂದು ಅಂಬೆಗಾಲಿಡಲು ಪ್ರಯತ್ನಿಸುತ್ತಿದೆ. ಹೆಜ್ಜೆ ಇಡಲು ಯತ್ನಿಸುತ್ತಿದ್ದ ಮರಿಯಾನೆಯು ಎಡವಿ ಬೀಳುತ್ತದೆ. ಆದರೆ ಅಲ್ಲಿಗೆ ಛಲ ಬಿಡದ ಆನೆ ಮರಿಯು ಮತ್ತೆ...

ಈ ತದ್ರೂಪಿ ಅವಳಿ ಸಹೋದರಿಯರ ಮಕ್ಕಳಿಗೆ ಆತನೇ ತಂದೆ..!

newsics.com ವಿಶ್ವದ ಅತ್ಯಂತ ತದ್ರೂಪಿ ಅವಳಿಗಳು ಎಂಬ ಖ್ಯಾತಿಯನ್ನು ಪಡೆದಿರುವ ಅನ್ನಾ ಹಾಗೂ ಲೂಸಿ ಡಿಂಕ್​ ಕೆಲವು ವರ್ಷಗಳ ಹಿಂದೆ ತಾವಿಬ್ಬರು ಒಬ್ಬನನ್ನೇ ಪ್ರೀತಿಸುತ್ತಿರುವುದಾಗಿ ಹೇಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದರು. ನಾವಿಬ್ಬರು ಅವನನ್ನೇ ಮದುವೆಯಾಗುತ್ತೇವೆ ಎಂದೂ ಹೇಳಿದ್ದರು. 2012ರಿಂದ ಬೆನ್​ ಬೈರ್ನೆ ಜೊತೆಯಲ್ಲಿ ಡೇಟಿಂಗ್​ ಮಾಡುತ್ತಿರುವ ಇವರಿಬ್ಬರೂ ಇದೀಗ ಈತನಿಂದ ಮಗುವನ್ನು ಪಡೆಯಲು ಇಚ್ಛಿಸಿದ್ದಾರೆ...

ಬಿಹು ಉತ್ಸವದಲ್ಲಿ ಡೋಲಕ್ ನುಡಿಸಿದ ಮೋದಿ

newsics.com ನವದೆಹಲಿ: ಪ್ರಧಾನಿ ಮೋದಿ ಬಿಹು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಶನಿವಾರ ಅಸ್ಸಾಂಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ತಮ್ಮ ಸಂಪುಟ ಸಹೋದ್ಯೋಗಿ ಸರ್ಬಾನಂದ್ ಸೋನ್ವಾಲ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಬಿಹು ಉತ್ಸವದಲ್ಲಿ ಪಾಲ್ಗೊಂಡರು. ಅಸ್ಸಾಂ ಸಂಸ್ಕೃತಿ ಬಿಂಬಿಸುವ ದಿರಿಸು ಧರಿಸಿದ್ದ ಮೋದಿ, ಡೋಲಕ್ ನುಡಿಸಿ ಖುಷಿಪಟ್ಟರು. ಈ ಕುರಿತು ಟ್ವಿಟರ್‌ನಲ್ಲಿ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಡೋಲಕ್ ನುಡಿಸಿದ ಫೋಟೋ...
- Advertisement -

Latest News

ಐಪಿಎಲ್: ರಾಜಸ್ಥಾನ್ ವಿರುದ್ಧ ಸೋತ ಧೋನಿ ಪಡೆ

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳಿಂದ ಸೋಲುಂಡಿದೆ. ಧೋನಿ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್...
- Advertisement -

ಆತ್ಮವಿಶ್ವಾಸದ ಕೊರತೆಯೋ, ಅಹಂಕಾರವೋ…

ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ. ಅಸಹಾಯಕತೆಗೆ ಬೀಳುತ್ತಿದ್ದೇವೆ. ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ. ಧ್ವನಿಬಿಂಬ 20 ♦ ಬಿ. ಕೆ. ಸುಮತಿ ಹಿರಿಯ ಉದ್ಘೋಷಕರು,...

ಸಂರಕ್ಷಣೆಯ ಮಹತ್ವದ ಅವಶ್ಯಕತೆ- ಅರಿವು

ನಮ್ಮಲ್ಲಿ ಅನೇಕರು "ವಾರಕ್ಕೊಮ್ಮೆಯಾದರೂ ಕಾಡಿಗೆ ಹೋಗಿಬರದಿದ್ದರೆ ಸಮಾಧಾನವಿರುವುದಿಲ್ಲ", "ಕಾಡಿನಲ್ಲಿರುವ ಆನಂದ ನಾಡಿನಲ್ಲೆಲ್ಲಿ!", "ಆಯ್ಯೋ! ಆ ಹಕ್ಕಿಯನ್ನು ನೋಡಿ ಎಷ್ಟು ದಿನವಾಯಿತು!" ಎಂದೆಲ್ಲ ಹೇಳುತ್ತಾ ಅವರ ವನ್ಯಪ್ರೇಮವನ್ನು ಜಾಹೀರು ಮಾಡುತ್ತಿರುತ್ತಾರೆ. ಆದರೆ, ನಾವು ಕಾಡಿಗೆ...

‘ಸಂತೂರ್ ಸಂತ’ ಪಂಡಿತ್ ಶಿವಕುಮಾರ್ ಶರ್ಮ

ಮಹಾನ್ ಸಂಗೀತಜ್ಞ, ಸಂತೂರ್ ಸಂತ ಖ್ಯಾತಿಯ ಪಂಡಿತ್ ಶಿವಕುಮಾರ್ ಶರ್ಮ ಇಂದು(ಮೇ 10) ಈ ಲೋಕವನ್ನಗಲಿದ್ದಾರೆ. ಈ ಮಹಾನ್ ಚೇತನಕ್ಕೊಂದು ನುಡಿನಮನ. • ತಿರು ಶ್ರೀಧರ newsics.com@gmail.com ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು...

ಅಮ್ಮಂದಿರ‌ ದಿನವೂ… ವಿಶ್ವ ಕತ್ತೆಗಳ‌ ದಿನವೂ…

ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ. ಅಮ್ಮನೂ ಹಾಗೇ ಅಲ್ಲವಾ ? ಧ್ವನಿಬಿಂಬ...
error: Content is protected !!