Saturday, July 31, 2021

ವಿದೇಶ

ಇರಾಕ್’ನಲ್ಲಿ ಉಗ್ರರ ದಾಳಿ: ಹಲವರ ಸಾವು

newsics.com ಬಾಗ್ದಾದ್(ಇರಾಕ್): ಉತ್ತರ ಇರಾಕ್ ನಲ್ಲಿ ಶುಕ್ರವಾರ ಶವಸಂಸ್ಕಾರದ ಮೆರವಣಿಗೆ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಹಲವರು ಅಸುನೀಗಿದ್ದಾರೆ. ಇರಾಕ್ ಸೇನೆ ಈ‌ ಮಾಹಿತಿ ನೀಡಿದ್ದು, ಸಲಾಹುದ್ದೀನ್ ಪ್ರಾಂತ್ಯದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಜನರು ಮೃತಪಟ್ಟಿದ್ದು, ಅಂಕಿ-ಅಂಶಗಳು ಲಭ್ಯವಿಲ್ಲ ಎಂದು ತಿಳಿಸಿದೆ. ದಾಳಿ ವೇಳೆ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಪೊಲೀಸರು, ಸಾರ್ವಜನಿಕರು ಸೇರಿದ್ದಾರೆ...

ಚಿಕನ್’ಪಾಕ್ಸ್ ರೀತಿಯಲ್ಲಿ ಕೊರೋನಾ ಡೆಲ್ಟಾ ರೂಪಾಂತರ ವೇಗವಾಗಿ ಹರಡಬಲ್ಲದು – ವರದಿ

newsics.com ವಾಷಿಂಗ್ಟನ್: ಕೊರೋನಾ ಡೆಲ್ಟಾ ರೂಪಾಂತರವು ಚಿಕನ್'ಪಾಕ್ಸ್ ರೀತಿಯಲ್ಲಿ ವೇಗವಾಗಿ ಹರಡುತ್ತದೆ ಎಂದು ಅಮೆರಿಕದ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆ ಉಲ್ಲೇಖಿಸಿ ಯುಎಸ್‌ ಮಾಧ್ಯಮಗಳು ವರದಿ ಮಾಡಿವೆ. ಸಂಪೂರ್ಣವಾಗಿ ಲಸಿಕೆ ಡೋಸ್ ಪಡೆದುಕೊಂಡಿರುವ ವ್ಯಕ್ತಿಗಳು ಕೂಡ ಲಸಿಕೆ ಪಡೆದುಕೊಳ್ಳದ ಜನರಷ್ಟೇ ಪ್ರಮಾಣದಲ್ಲಿ ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ ಎಂದು ವರದಿ ತಿಳಿಸಿದೆ. ಮರ್ಸ್, ಎಸ್ಎಆರ್‌ಎಸ್‌, ಎಬೋಲಾ, ನೆಗಡಿ,...

ಲಸಿಕೆ ಹಾಕಿಸಿಕೊಂಡರೆ 100 ಡಾಲರ್ ಘೋಷಿಸಿದ ಜೋ ಬೈಡನ್

newsics.com. ವಾಷಿಂಗ್ಟನ್: ಕೋವಿಡ್ ಲಸಿಕೆ ಪಡೆದ ಜನತೆಗೆ 100 ಡಾಲರ್ (ಸುಮಾರು 7,400ರೂ) ನೀಡುವಂತೆ ರಾಜ್ಯಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೊರೋನಾ ನಿಯಂತ್ರಣಕ್ಕೆ ಲಸಿಕಾಅಭಿಯಾನವನ್ನು ಹೆಚ್ಚಿಸಲು ಬೈಡನ್ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ. ಹೊಸದಾಗಿ ಲಸಿಕೆ ಪಡೆಯುವವರಿಗಷ್ಟೇ ಪ್ರೋತ್ಸಾಹ ಧನ ನೀಡುವುದರಿಂದ, ಈಗಾಗಲೇ ಲಸಿಕೆ ಪಡೆದವರಿಗೆ ಅನ್ಯಾಯವಾಗಲಿದೆ ಎಂಬುದು ನನ್ನ...

ಇಲ್ಲಿ ಪ್ರತೀ ಕುಟುಂಬದಿಂದ ಒಬ್ಬ ಸದಸ್ಯ ಸೈನಿಕನಾಗುವುದು ಕಡ್ಡಾಯ

newsics.com ಚೀನಾ: ಭಾರತದೊಂದಿಗಿನ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್ ಎಸಿ) ಸೈನಿಕರ ನಿಯೋಜನೆಗಾಗಿ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ (PLA) ಟಿಬೆಟಿಯನ್ನರನ್ನು ನೇಮಿಸಿಕೊಳ್ಳುತ್ತಿದೆ. ಇದಕ್ಕಾಗಿ ಪ್ರತೀ ಕುಟುಂಬದಿಂದ ಒಬ್ಬ ಸದಸ್ಯನನ್ನು ಆರ್ಮಿಗೆ ಕಳುಹಿಸಬೇಕೆಂದು ಕಡ್ಡಾಯಗೊಳಿಸಿದೆ. ಚೀನಾ ವಿಶೇಷವಾಗಿ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿ ತಮ್ಮ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ವರದಿಯಾಗಿದೆ. ಜತೆಗೆ ಎಲ್...

ಒಲಿಂಪಿಕ್ಸ್’ನಲ್ಲಿ ಕಯಾಕ್’ಗೆ ಕಾಂಡೋಮ್ ತೊಡಿಸಿ ಪದಕ ಗೆದ್ದ ಕ್ರೀಡಾಪಟು

newsics.com ಜಪಾನ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ಸ್ಪರ್ಧಿಯೊಬ್ಬರು ಹಾನಿಯಾದ ಕಯಾಕ್ ಗೆ ಕಾಂಡೋಮ್ ತೊಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಕೆನೋಯ್ ಮತ್ತು ಕಯಾಕ್ ಕ್ರೀಡಾಪಟು ಜೆಸಿಕಾ ಫಾಕ್ಸ್‌ ಹಾನಿಯಾದ ಕಯಾಕ್'ನ ತುದಿಯನ್ನು ಸರಿಪಡಿಸಲು ಕಾಂಡೋಮ್ ಅನ್ನು ಹಾಕಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಜೆಸಿಕಾ ಹಂಚಿಕೊಂಡಿದ್ದು, ಆಪತ್ಕಾಲದಲ್ಲಿ ಜಾಣ್ಮೆಯಿಂದ ಸಮಸ್ಯೆ ಪರಿಹರಿಸಿ ಪದಕ...

ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್’ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು

newsics.com ಟೋಕಿಯೋ: ಭಾರತದ‌ ಭರವಸೆಯ ಬ್ಯಾಡ್ಮಿಂಟನ್ ಪಟು ಪಿ.ವಿ ಸಿಂಧು ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ ಸಿಂಗಲ್ಸ್​​ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ. ಇಂದಿನ ಪಂದ್ಯದಲ್ಲಿ ಎದುರಾಳಿ ವಿರುದ್ಧ 21-13, 22-20 ಗೇಮ್​ಗಳ ಅಂತರದಿಂದ ಸಿಂಧು ಗೆಲುವು ದಾಖಲಿಸಿ...

ಭಾರತ ಕ್ರಿಕೆಟ್ ತಂಡದ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು

newsics.com ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಮತ್ತೆ ಇಬ್ಬರು ಆಟಗಾರರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.  ಚಾಹಲ್ ಮತ್ತು ಕೆ . ಗೌತಂ ಕೊರೋನಾ ಸೋಂಕಿಗೆ ತುತ್ತಾಗಿರುವುದ ದೃಢಪಟ್ಟಿದೆ. ಇಬ್ಬರು ಆಟಗಾರರು ಕೊರೋನಾ ಸೋಂಕಿಗೆ ತುತ್ತಾಗಿದ್ದ  ಕೃನಾಲ್ ಪಾಂಡ್ಯ ಜತೆ ನಿಕಟ ಸಂಪರ್ಕದಲ್ಲಿ ಇದ್ದರು ಎಂದು ವರದಿಯಾಗಿದೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಆಟಗಾರರು ಶ್ರೀಲಂಕಾದಲ್ಲಿ ಕಡ್ಡಾಯವಾಗಿ ಕ್ವಾರಂಟೈನ್...

ಹಂದಿ ಸಾಕಾಣಿಕೆಯ ಕೋಟ್ಯಾಧಿಪತಿಗೆ 18 ವರ್ಷ ಜೈಲು ಶಿಕ್ಷೆ

newsics.com ಬೀಜಿಂಗ್ : ಚೀನಾ ಆಡಳಿತ ವಿರುದ್ದ ಟೀಕಿಸುತ್ತಿದ್ದ ಹಾಗೂ ವೃತ್ತಿಯಲ್ಲಿ ಹಂದಿ ಸಾಕಾಣಿಕೆಯಲ್ಲಿ ತೊಡಗಿದ್ದ ಚೀನಾದ ಕೋಟ್ಯಾಧಿಪತಿ  ಉದ್ಯಮಿಗೆ ಅಲ್ಲಿನ ನ್ಯಾಯಾಲಯ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಉದ್ಯಮಿ ಸನ್ ದಾವೋಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಗಲಭೆಗೆ ಜನರನ್ನು ಗುಂಪು ಸೇರಿಸಿದ್ದು ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ...

ಐವರನ್ನು ಕೊಂದ ಆರೋಪಿಗೆ 207 ವರ್ಷ ಜೈಲು ಶಿಕ್ಷೆ

newsics.com ವಾಷಿಂಗ್ಟನ್: ಪ್ರೇಯಸಿ ಸೇರಿದಂತೆ ಐವರನ್ನು ಕೊಂದ ಆರೋಪಿಗೆ ಅಮೆರಿಕದ ನ್ಯಾಯಾಲಯವೊಂದು 207 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕ್ರಿಸ್ಟೋಪರ್ ಸ್ಟಾಕ್ಸ್ ಎಂಬಾತ ಕಳೆದ ವರ್ಷ ತನ್ನ ಪ್ರೇಯಸಿ, ಆಕೆಯ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಹತ್ಯೆ ಮಾಡಿದ್ದ. ಇದೀಗ ಆರೋಪ ಸಾಬೀತಾಗಿದ್ದು, ನ್ಯಾಯಾಲಯ 207 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಯಾಕಾಗಿ ಈ ಹತ್ಯೆ ಮಾಡಲಾಗಿದೆ  ಎಂಬ...

ಬಾಂಗ್ಲಾದಲ್ಲಿ ಭಾರೀ ಮಳೆ: ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳು ಜಲಾವೃತ

newsics.com ಢಾಕಾ: ಬಾಂಗ್ಲಾದೇಶದಲ್ಲಿ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳು ಜಲಾವೃತಗೊಂಡಿವೆ. ಬುಧವಾರ ಒಂದೇ ದಿನ ಕಾಕ್ಸ್ ಬಜಾರ್‌ ಜಿಲ್ಲೆಯಲ್ಲಿ 30 ಸೆಂ. ಮೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮಗು ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ವರದಿಗಳ ಪ್ರಕಾರ ಸುಮಾರು 2,500 ಆಶ್ರಯಗಳು ಹಾನಿಗೀಡಾಗಿವೆ...

ಮೇರಿಕೋಮ್’ಗೆ ಸೋಲು: ಒಲಿಂಪಿಕ್ಸ್’ನಿಂದ ಹೊರಬಂದ ಬಾಕ್ಸಿಂಗ್ ಚಾಂಪಿಯನ್

newsics.com ಟೋಕಿಯೋ: ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಮೇರಿಕೋಮ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೋಲನ್ನು ಅನುಭವಿಸಿದ್ದಾರೆ. ಬಾಕ್ಸಿಂಗ್ ನ 16ನೇ ಸುತ್ತಿನ ಪಂದ್ಯದಲ್ಲಿ 3-2 ಅಂತರದಿಂದ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್ ನಿಂದ ಹೊರಬಂದಿದ್ದಾರೆ. ಪಂದ್ಯದಲ್ಲಿ ಕೊಲಂಬಿಯಾ ಬಾಕ್ಸರ್​​​ ಇಂಗ್ರಿಟ್ ವೇಲೆನ್ಸಿಯಾ ಗೆಲುವು ದಾಖಲಿಸಿದ್ದಾರೆ. ಫ್ರೀ ಕ್ವಾರ್ಟರ್ ಪಂದ್ಯದಲ್ಲಿ ಸೋಲು ಕಾಣುವ...

ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ

newsics.com ಬಾಗ್ದಾದ್: ಇರಾಕ್ ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ. ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಅತ್ಯಂತ ಬಿಗಿ ಭದ್ರತೆಯ ಪ್ರದೇಶದಲ್ಲಿರುವ ರಾಯಭಾರಿ ಕಚೇರಿ ಆವರಣದಲ್ಲಿ ಎರಡು ರಾಕೆಟ್ ಗಳು ಅಪ್ಪಳಿಸಿವೆ ಎಂದು ವರದಿಯಾಗಿದೆ. ರಾಕೆಟ್ ದಾಳಿಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇರಾಕ್ ನಲ್ಲಿ ಅಮೆರಿಕದ 2500 ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ....

ಅಲಸ್ಕಾದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 8.2 ದಾಖಲು

newsics.com ವಾಷಿಂಗ್ಟನ್: ಅಲಸ್ಕಾ ಬಳಿ ಭೀಕರ ಭೂಕಂಪ ಸಂಭವಿಸಿದೆ. ಅಲಸ್ಕಾದಿಂದ 91 ಕಿಲೋ ಮೀಟರ್ ಪೂರ್ವಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ  8.2 ದಾಖಲಾಗಿದೆ. ಇದು ಗಂಭೀರ ಹಂತದ ಭೂಕಂಪವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ. https://newsics.com/news/world/olympics-hockey-india-entered-quarter-final/78943/

ಒಲಿಂಪಿಕ್ಸ್ ಹಾಕಿ: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಭಾರತ ತಂಡ

newsics.co ಟೋಕಿಯೋ: ಜಪಾನ್ ನಲ್ಲಿ ನಡೆಯುತ್ತಿರುವ  ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾರತದ ಪುರುಷರ ಹಾಕಿ ತಂಡ ಕ್ವಾರ್ಟರ್  ಫೈನಲ್ಸ್ ಪ್ರವೇಶ ಮಾಡಿದೆ. ಅರ್ಜೆಂಟೀನಾ ವನ್ನು 3-1 ಅಂತರದಿಂದ ಸೋಲಿಸಿದ ಭಾರತ ಹಾಕಿ ತಂಡ ಈ  ಸಾಧನೆ ಮೆರೆದಿದೆ. ಎ ಗುಂಪಿನಲ್ಲಿರುವ ಭಾರತ ಇದುವರೆಗೆ 3 ಪಂದ್ಯದಲ್ಲಿ ಜಯ ಗಳಿಸಿದೆ. ಒಂದರಲ್ಲಿ ಸೋತಿದೆ. ಆಸ್ಟ್ರೇಲಿಯಾ ಈ ಗುಂಪಿನ ಅಗ್ರಸ್ಥಾನಿಯಾಗಿದೆ. ಭಾರತ ಎರಡನೆ...

ಒಲಿಂಪಿಕ್ಸ್ ನಲ್ಲಿ ಪಿ ವಿ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶ

newsics.com ಟೋಕಿಯೋ: ಜಪಾನ್  ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಡೆನ್ಮಾರ್ಕ್ ನ ಬ್ಲಿಚ್ ಫೆಲ್ಡ್ ಅವರನ್ನು ಸೋಲಿಸಿ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸಿಂಧು ಮೇಲೆ ಭಾರತ ಭಾರೀ ನಿರೀಕ್ಷೆ ಇಟ್ಟು ಕೊಂಡಿದೆ. https://newsics.com/news/india/corona-recovery-rate-incresed-to-97-38-percent/78931/

ತಾಲಿಬಾನ್ ಗಳು ಉಗ್ರರಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಣ್ಣನೆ

newsics.com ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಉಗ್ರರಿಗೆ ಸರ್ಟಿಫಿಕೇಟ್ ನೀಡಿದ್ದಾರೆ. ಅವರ ಪ್ರಕಾರ ತಾಲಿಬಾನ್ ಗಳು ಎಲ್ಲರಂತೆ ನಾಗರಿಕರು. ಅವರನ್ನು ಉಗ್ರರಿಗೆ ಹೋಲಿಸುವುದು ಸರಿಯಲ್ಲ. ಇದು ಇಮ್ರಾನ್ ಖಾನ್ ಅವರ  ವಾದ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಈ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪ್ಘಾನ್ ಸೇನೆಯ ವಿರುದ್ಧ ಹೋರಾಟ ನಡೆಸಲು ತಾಲಿ ಬಾನ್ ಉಗ್ರರಿಗೆ ಪಾಕಿಸ್ತಾನ...

ಖ್ಯಾತ ಹಾಸ್ಯ ನಟನಿಗೆ ಹಿಂಸೆ ನೀಡಿ ಹತ್ಯೆಗೈದ ತಾಲಿಬಾನ್ ಉಗ್ರರು

newsics.com ಕಂದಹಾರ್: ಅಫ್ಘಾನಿಸ್ತಾನದ ಖ್ಯಾತ ಹಾಸ್ಯ ನಟನೋರ್ವವನ್ನುನ ತಾಲಿಬಾನ್ ಉಗ್ರರು ಅಪಹರಿಸಿ ಹಿಂಸಿಸಿ ಹತ್ಯೆ ಮಾಡಿದ್ದಾರೆ. ನಜರ್ ಮೊಹಮ್ಮದ್ ಅಲಿಯಾಸ್ ಖಾಶಾ ಜ್ವಾನ್ ಎನ್ನುವ ಹಾಸ್ಯನಟನನ್ನು ಅಪಹರಿಸಿ, ಕತ್ತು ಸೀಳಿ ,ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 2ದಿನದ ಹಿಂದೆ ಕಂದಹಾರ್ ಬಳಿ ಖಾಶ್ ಮೃತದೇಹ ದೊರಕಿತ್ತು. ಕಳೆದವಾರ ಅಪರಿಚಿತರು ಮನೆಗೆ ನುಗ್ಗಿ ಖಾಶಾರನ್ನು ಅಪಹರಿಸಿದ್ದರು. ಹೀಗಾಗಿ ಕುಟುಂಬ ಪೊಲೀಸರಿಗೆ...

ಐತಿಹಾಸಿಕ ಸಮಾಧಿಗಳನ್ನು ಪತ್ತೆಹಚ್ಚಲು ಕುರಿಗಳ ನೇಮಕ !

newsics.com ಐರ್ಲೆಂಡ್: ಐತಿಹಾಸಿಕ ಸಮಾಧಿಗಳನ್ನು ಪತ್ತೆಹಚ್ಚಲು ಐರ್ಲೇಂಡ್ ದೇಶದಲ್ಲಿ ಕುರಿಗಳನ್ನು ನೇಮಿಸಲಾಗಿದೆ. ಸ್ಮಶಾನಗಳಲ್ಲಿ ಅತಿಯಾದ ಹುಲ್ಲುಬೆಳೆದು ಹಳೆಯ ಸಮಾಧಿಗಳು ಮುಚ್ಚಿಹೋಗಿದ್ದವು. ಹೀಗಾಗಿ ಕುರಿಗಳನ್ನು ಬಿಟ್ಟಾಗ ಅವು ಹುಲ್ಲುಗಳನ್ನು ತಿಂದು ಸಮಾಧಿಗಳು ಕಾಣುವಂತೆ ಮಾಡುತ್ತಿವೆ. ಈ ಕಾರಣಕ್ಕಾಗಿಯೇ ಅನೇಕ ತಜ್ಞರು ಕುರಿಗಳನ್ನು ಉಪಯುಕ್ತ ಪುರಾತತ್ತ್ವ ಶಾಸ್ತ್ರದ ಸಾಧನವೆಂದು ಪರಿಗಣಿಸಿದ್ದಾರೆ. ಸ್ಮಶಾನವೊಂದರಲ್ಲಿ 1857ರಲ್ಲಿ ಸಾವನ್ನಪ್ಪಿದ ಬಾಲಕಿಯ ಸಮಾಧಿಯು ಹುಲ್ಲು ಬೆಳೆದು ಕಣ್ಮರೆಯಾಗಿತ್ತು....

ಕೆಂಪು ಪಟ್ಟಿಯಲ್ಲಿರುವ ದೇಶಗಳಿಗೆ ಭೇಟಿ ನೀಡಿದರೆ ಮೂರು ವರ್ಷ ನಿಷೇಧ: ಸೌದಿ ಅರೇಬಿಯಾ ಎಚ್ಚರಿಕೆ

newsics.com ರಿಯಾದ್: ಮಾರಕ ಕೊರೋನಾ ತಡೆಗಟ್ಟುವ ಸಂಬಂಧ ಸಿದ್ದಪಡಿಸಲಾಗಿರುವ ಕೆಂಪು ಪಟ್ಟಿಯಲ್ಲಿನ ದೇಶಗಳಿಗೆ ಭೇಟಿ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ಕಾನೂನು ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ಪಾವತಿಸಬೇಕಾಗುತ್ತದೆ. ಮೂರು ವರ್ಷ ಪ್ರಯಾಣಕ್ಕೆ ನಿಷೇಧ ಕೂಡ ಹೇರಲಾಗುವುದು ಎಂದು ಸೌದಿ ಆಡಳಿತ ಎಚ್ಚರಿಕೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ  ಸೌದಿ ಅರೇಬಿಯಾ...

ಭಯೋತ್ಪಾದಕರಿಂದ ಗುಂಡಿನ ದಾಳಿ: 14 ನಾಗರಿಕರ ಹತ್ಯೆ

newsics.com ನೈಜರ್: ಪಶ್ಚಿಮ ನೈಜರ್ ನಲ್ಲಿ ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ 14 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇವರಲ್ಲಿ 9 ಮಂದಿ  ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ಗಲಭೆಗ್ರಸ್ತ ಮಾಲಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ. ಬಂಡುಕೋರರ ಹಾವಳಿಯಿಂದ ತತ್ತರಿಸಿರುವ...

ರಸ್ತೆಮಧ್ಯೆ ಕೋತಿಗಳ ಹಿಂಡಿನ ಕಿತ್ತಾಟ: ಸಂಚಾರ ಸ್ಥಗಿತ

newsics.com ಥೈಲ್ಯಾಂಡ್: ಥೈಲ್ಯಾಂಡ್ ನ ರಸ್ತೆಯೊಂದರಲ್ಲಿ ನೂರಾರು ಕೋತಿಗಳು ಜಗಳವಾಡುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥೈಲ್ಯಾಂಡ್ ನ ಲಾಪ್ ಬುರಿ ಎಂಬ ನಗರದ ಮಧ್ಯೆ ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ಕೋತಿಗಳು ಕಿತ್ತಾಟ ನಡೆಸಿವೆ. ಇದರಿಂದ ಸಂಚಾರಕ್ಕೆ ಸಾಧ್ಯವಾಗದೆ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಆಹಾರಕ್ಕಾಗಿ ಕೋತಿಗಳು ಹೀಗೆ ಕಿತ್ತಾಡುತ್ತವೆ. ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಪ್ರವಾಸಿಗರು...

ಮುಳುಗಿದ ಹಡಗು:57 ಮಂದಿ ವಲಸಿಗರು ಸಾವು

newsics.com ಲಿಬಿಯಾ: ತಾಂತ್ರಿಕ ಸಮಸ್ಯೆಯಿಂದ ಸಮುದ್ರ ಮಧ್ಯೆ ನಿಂತಿದ್ದ ಹಡಗು ಮುಳುಗಿ 57 ಮಂದಿ ಆಫ್ರಿಕನ್ ವಲಸಿಗರು ಸಾವನ್ನಪ್ಪಿದ ಘಟನೆ ನಡೆದಿದೆ. ಪಶ್ಚಿಮ ಕರಾವಳಿಯ ಖುಮ್ಸ್ ನಗರದಿಂದ ಹೊರಟಿದ್ದ ಹಡಗು ಸೋಮವಾರ ಲಿಬಿಯಾ ಕರಾವಳಿಯಲ್ಲಿ ಮುಳುಗಿದೆ ಎಂದು ವರದಿ ತಿಳಿಸಿದೆ. ಹಡಗಿನಲ್ಲಿ ಮಕ್ಕಳು ಸೇರಿದಂತೆ 75 ಜನರಿದ್ದು, 18 ವಲಸಿಗರನ್ನು ರಕ್ಷಿಸಲಾಗಿದೆ. ಹವಾಮಾನ ವೈಪರಿತ್ಯದಿಂದ ಸಮುದ್ರ ಮಧ್ಯೆ ನಿಂತಿದ್ದ ಹಡಗು...

ಕೃನಾಲ್ ಪಾಂಡ್ಯಗೆ ಕೊರೋನಾ: ಇಂದಿನ ಟಿ 20 ಪಂದ್ಯ ರದ್ದು

mewsics.com ಕೊಲಂಬೋ: ಭಾರತ ಶ್ರೀಲಂಕಾ ನಡುವೆ ಇಂದು 2ನೇ ದಿನ ಟಿ20 ಪಂದ್ಯಾವಳಿ ನಡೆಯಬೇಕಿತ್ತು. ಆದರೆ ಕೃನಾಲ್ ಪಾಂಡ್ಯಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ, ಇಂದಿನ 2ನೇ ದಿನದ ಟಿ20 ಪಂದ್ಯವನ್ನು ರದ್ದುಪಡಿಸಲಾಗಿದೆ. ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದಿನ  ಪಂದ್ಯ ಆರಂಭವಾಗಬೇಕಿತ್ತು. ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಜತೆಗಿದ್ದ ಆಟಗಾರರನ್ನು ಕ್ವಾರಂಟೈನ್ ಮಾಡಲಾಗಿದ್ದು, ಎರಡೂ...

ಟಿಕ್ ಟಾಕ್ ಮಾಡುತ್ತಿದ್ದ ವೇಳೆ 160 ಅಡಿ ಎತ್ತರದಿಂದ ಬಿದ್ದು ಸಾವು

newsics.com ಬೀಜಿಂಗ್: ಕ್ರೇನ್ ನಲ್ಲಿ ಕುಳಿತುಕೊಂಡು 160 ಅಡಿ ಎತ್ತರದಲ್ಲಿ ಟಿಕ್ ಟಾಕ್ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ವೃತ್ತಿಯಲ್ಲಿ ಕ್ರೇನ್ ಆಪರೇಟರ್ ಆಗಿರುವ ಕ್ಸಿಯೋ ಕ್ವಿಮೇ ಟಿಕ್ ಟಾಕ್ ತಾರೆಯಾಗಿ ಗುರುತಿಸಿಕೊಂಡಿದ್ದರು. ಜನಪ್ರಿಯತೆ ಗಳಿಸಿದ್ದರು. ಎಂದಿನಂತೆ ಟಿಕ್ ಟಾಕ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮೃತಪಟ್ಟ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ....

ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದ ಲಂಡನ್ ಹೈಕೋರ್ಟ್

newsics.com ನವದೆಹಲಿ: ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ವಂಚಿಸಿದ ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಲಂಡನ್ ಹೈಕೋರ್ಟ್​​ ಸೋಮವಾರ (ಜು.26) ಅಧಿಕೃತವಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಭಾರತೀಯ ಬ್ಯಾಂಕ್'ಗಳಿಗೆ ಗೆಲುವು ಸಿಕ್ಕಂತಾಗಿದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸಹಭಾಗಿತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟಗಳಿಗೆ ಈಗ ಕಿಂಗ್​ಫಿಶರ್​ ಏರ್​ಲೈನ್ಸ್​ಗೆ ನೀಡಿದ ಸಾಲದಿಂದ ಹಣ ವಸೂಲು ಮಾಡಲು ಅನುಕೂಲವಾಗಿದೆ. ಇನ್ನು...

ಮರಳು, ಧೂಳಿನ ಬಿರುಗಾಳಿ: 20 ವಾಹನಗಳ ನಡುವೆ ಅಪಘಾತ, ಏಳು ಮಂದಿ ಸಾವು

newsics.com ಯೂಟಾ( ಯುಎಸ್) : ಮರಳು, ಧೂಳಿನ ಬಿರುಗಾಳಿ ಬೀಸಿದ ಪರಿಣಾಮ 20 ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಯುಎಸ್​ನ ಯೂಟಾ(Utah) ರಾಜ್ಯದಲ್ಲಿ ಘಟನೆ ನಡೆದಿದೆ. ಯೂಟಾದ ಕಾನೋಶ್​ ಹೆದ್ದಾರಿಯಲ್ಲಿ ಬೀಸಿದ ಧೂಳು, ಮರಳಿನ ಬಿರುಗಾಳಿಯಿಂದ ವಾಹನ ಚಾಲಕರ ಕಣ್ಣು ಬಿಡದಂತಾಗಿ ಅಪಘಾತ ನಡೆದಿದೆ ಎಂದು ವರದಿ ತಿಳಿಸಿದೆ.   https://newsics.com/news/karnataka/government-workers-dearness-allowance-hiked/78571/

ಟೋಕಿಯೋ ಒಲಿಂಪಿಕ್ಸ್: ಚಿನ್ನದ ಪದಕ ಗೆದ್ದ 13 ವರ್ಷದ ‘ಮೊಮಿಜಿ’

newsics.com ಜಪಾನ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಪಾನ್ ನ 13 ವರ್ಷದ ಬಾಲಕಿ ಮೊಮಿಜಿ ನಿಶಿಯಾ (Momiji Nishiya) ಚಿನ್ನದ ಪದಕ ಗೆದ್ದಿದ್ದಾಳೆ. ಈ ಬಾರಿಯ ಒಲಂಪಿಕ್ಸ್‌ನಲ್ಲಿ ಹೊಸದಾಗಿ ಆರಂಭಿಸಲಾದ ಸ್ಕೇಟ್‌ ಬೋರ್ಡಿಂಗ್‌ನಲ್ಲಿ ಮೊಮಿಜಿ 15.26 ಅಂಕ ಗಳಿಸಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಮೊದಲ ಮಹಿಳಾ ಸ್ಕೇಟ್‌ ಬೋರ್ಡಿಂಗ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಬ್ರೆಜಿಲ್‌ನ...

12 ವರ್ಷದ ಬಾಲಕನಿಗೆ ವಿಚಿತ್ರ ಕಾಯಿಲೆ : ಹಳದಿ ಬಣ್ಣಕ್ಕೆ ತಿರುಗಿದ ನಾಲಿಗೆ

newsics.com ಕೆನಡಾ: 12 ವರ್ಷದ ಬಾಲಕನಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು, ನಾಲಿಗೆ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿದೆ. ಕೆನಡಾದ ಬಾಲಕನೋರ್ವ ರಕ್ತಹೀನತೆಯಿಂದ ಎಪ್ಸ್ಟೀನ್ ಬಾರ್ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ರೋಗ ಚಿಕ್ಕಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಬಾಲಕನ ನಾಲಿಗೆ ಹಳದಿಯಾಗಿ, ಗಂಟಲು ನೋವು, ಕಪ್ಪು ಮೂತ್ರ, ಹೊಟ್ಟೆ ನೋವು ಮತ್ತು ಮಸುಕಾದ...

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ : ಚಿನ್ನದ ಪದಕ ಗೆದ್ದ ಭಾರತದ ಪ್ರಿಯಾ ಮಲಿಕ್

newsics.com ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪ್ರಿಯಾ ಮಲಿಕ್  ಚಿನ್ನದ ಪದಕ ಪಡೆದಿದ್ದಾರೆ. 73 ಕೆ. ಜಿ. ವಿಭಾಗದಲ್ಲಿ ಅವರು ಚಿನ್ನದ ಪದಕ ಗಳಿಸಿದ್ದಾರೆ. ಟೋಕಿಯೊದಲ್ಲಿ ನಡೆಯುತ್ತಿರುವ  ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ಪಡೆದ ಮರು ದಿನವೇ ಪ್ರಿಯಾ ಮಲಿಕ್ ಈ  ಸಾಧನೆ ಮೆರೆದಿದ್ದಾರೆ. ಪ್ರಿಯಾ ಮಲಿಕ್ ಸಾಧನೆಗೆ...

ಭಾರತದಲ್ಲಿ ಪ್ರವಾಹದಿಂದ ಹಾನಿ: ತೈವಾನ್ ಅಧ್ಯಕ್ಷರ ಸಂತಾಪ

newsics.com ತೈವಾನ್: ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಹದಿಂದ ವ್ಯಾಪಕ ಹಾನಿ ಸಂಭವಿಸಿರುವುದಕ್ಕೆ ತೈವಾನ್ ಅಧ್ಯಕ್ಷರಾದ  ತ್ಸಾಯ್ಲಿಂಗ್  ವೋನ್ ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅವರು ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರವಾಹದಿಂದ ಹಾನಿ ಸಂಭವಿಸಿರುವುದಕ್ಕೆ ತೀವ್ರ ನೋವಾಗಿದೆ. ಈ ಸಂಕಷ್ಟದ ಸಮಯದಲ್ಲಿ ತೈವಾನ್ ಕೂಡ ಭಾರತದ ಜತೆಗಿದೆ ಎಂದು  ತೈವಾನ್ ಅಧ್ಯಕ್ಷರು ಹೇಳಿದ್ದಾರೆ. ಭಾರತದ ಮಹಾರಾಷ್ಟ್ರ ಮತ್ತು...
- Advertisement -

Latest News

ಗಾಳಿಯ ರಭಸಕ್ಕೆ ಕಾಲೇಜಿನ ಗೇಟ್ ಬಿದ್ದು ಬಾಲಕ ಸಾವು

newsics.com ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಮುಖ್ಯ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಪಟ್ಟಣದ ಇಂದಿರಾನಗರ ನಿವಾಸಿ ಸುಫೀಯಾನ ರಾಜು ಮುಲ್ಲಾ ಮೃತಪಟ್ಟ...
- Advertisement -

 ಪತಂಗರೂಪಿ ಹಾಡಿನಲ್ಲಿ ಅಮರರಾದ ಜಯಂತಿ

♦ ಸುಮಾವೀಣಾ ಉಪನ್ಯಾಸಕಿ, ಬರಹಗಾರರು newsics.com@gmail.com ‘ಹುಚ್ಚುಕೋಡಿ ಮನಸ್ಸು’, ‘ಹದಿನಾರರ ವಯಸ್ಸು’. ‘ಟೀನ್ ಏಜ್ ಟೆಂಡನ್ಸಿ’  ಎಂಬ ಪದಗಳನ್ನು ಹದಿಹರೆಯದವರಿಗೆ ನೀತಿ ಹೇಳುವಲ್ಲಿ ಬಳಸುವುದು ಸಾಮಾನ್ಯ.  “ನಿಲ್ಲು ನಿಲ್ಲೆ ಪತಂಗ ಬೇಡ ಬೇಡ ಬೆಂಕಿಯ ಸಂಗ” ಹದಿಹರೆಯದವರಿಗೆ...

ರಕ್ಷಣಾ ವ್ಯವಸ್ಥೆ ಬಲವರ್ಧನೆಗೆ ಕಾರಣವಾದ ಯುದ್ಧ

 ಇಂದು ಕಾರ್ಗಿಲ್ ವಿಜಯ ದಿವಸ  ಇಂದು (ಜುಲೈ 26) ಕಾರ್ಗಿಲ್ ವಿಜಯ್ ದಿನ. ಕಾರ್ಗಿಲ್ ಯುದ್ಧದಲ್ಲಿ ಭಾರತದ ವೀರಯೋಧರು ವಿಜಯ ತಂದುಕೊಟ್ಟು ದೇಶದ ಕೀರ್ತಿಪತಾಕೆಯನ್ನು ಎತ್ತರಕ್ಕೇರಿಸಿದ ದಿನ. ವಿಜಯವಷ್ಟೇ ಈ ದಿನದ ನೆನಪಾಗಿ ಉಳಿದಿಲ್ಲ....

ಗ್ರಾಮೀಣ ಹೆಮ್ಮಕ್ಕಳ ಸ್ವಾಭಿಮಾನದ ಪ್ರತೀಕ ಜಯಂತಿ

“ಅಭಿನಯ ಶಾರದೆ’ ಜಯಂತಿಗೆ ನುಡಿನಮನ ಗ್ರಾಮೀಣ ಹೆಂಗಳೆಯರಲ್ಲಿ ಸ್ವಾಭಿಮಾನ ಮೂಡಿಸಿದ್ದ ಅತ್ಯಪೂರ್ವ ಹೆಗ್ಗಳಿಕೆ ಜಯಂತಿ ಅವರದ್ದು. ಕಲಾವಿದೆಯೊಬ್ಬರ ಸಾರ್ಥಕತೆ ಎಂದರೆ ಇದೇ ಇರಬಹುದು. ♦ ಸುಮನಾ ಲಕ್ಷ್ಮೀಶ newsics.com@gmail.com ಮಾಧವಿ...ಅತೃಪ್ತ ಕಾಮನೆಗಳ ಹೆಣ್ಣು. ಪತಿಯ ಸಾಂಗತ್ಯ ಸಿಗದೆ ಯುವಕನೊಬ್ಬನ...

ಪಾಲಕರೇ ನಮ್ಮ ಸೂತ್ರಧಾರರು

ಪಾಲಕರು ನಮ್ಮ ಬದುಕನ್ನು ರೂಪಿಸುತ್ತಾರೆ. ಅವರಿಂದಲೇ ಆದರ್ಶಗಳು ನಮ್ಮದಾಗುತ್ತವೆ. ಆದರ್ಶಮಯ ಬದುಕನ್ನು ಕಟ್ಟಿಕೊಡಲು ವಿಫಲವಾಗುವ ತಾಯ್ತಂದೆಯರೂ ಯಾವುದೋ ಒಂದು ರೀತಿಯಲ್ಲಿ ಮಾರ್ಗದರ್ಶಕರಾಗುತ್ತಾರೆ. newsics.com Features Desk ಪ್ರತಿಯೊಬ್ಬರ ಬದುಕಿನಲ್ಲಿ ಇವರ ಪಾತ್ರ ಅನನ್ಯ. ಹುಟ್ಟಿನಿಂದ...
error: Content is protected !!