ಮುಂಬೈ : ಅತಿಲೋಕ ಸುಂದರಿ ಶ್ರೀದೇವಿ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ ಬಳಿಕ ಅವರ ಪುತ್ರಿ ಜಾಹ್ನವಿ
ಕಪೂರ್ ತಾಯಿಯ ಸ್ಥಾನವನ್ನು ತುಂಬುತ್ತಿದ್ದಾರೆ. ಜಾಹ್ನವಿ ಈಗ ಸಿನಿಲೋಕದಲ್ಲಿ ಹೆಸರು ಮಾಡುತ್ತಿದ್ದಾರೆ. ಜೊತೆಗೆ, ಸಮಾಜ
ಸೇವೆಯ ಮೂಲಕವೂ ಎಲ್ಲರ ಮನಗೆದ್ದಿದ್ದಾರೆ.
ಇತ್ತೀಚೆಗೆ ಮ್ಯಾಗಜಿನ್ ಮಾರುತ್ತಿದ್ದ ಬಾಲಕನಿಗೆ ಸಹಾಯ ಮಾಡಲೆಂದೇ ತಮಗೆ ಬೇಡ ಎಂದರೂ ಆತನಿಂದ ಜಾಹ್ನವಿ ಮ್ಯಾಗಜಿನ್
ಕೊಂಡಿದ್ದರು. ಇದಾದ ಬಳಿಕ ಮತ್ತೆ ಇಂತಹದ್ದೇ ಸನ್ನಿವೇಶ ಎದುರಾಗಿತ್ತು. ಹಸಿದು ನಿಂತಿದ್ದ ಬಾಲಕಿಗೆ ಸ್ವತಃ ಜಾಹ್ನವಿಯವರೇ
ಕಾರಿನ ಡೋರ್ ತೆಗೆದು ಬಿಸ್ಕತ್ ನೀಡಿದ್ದರು. ಈ ಫೋಟೋ ಸದ್ಯ ವೈರಲ್ ಆಗುತ್ತಿದೆ. ಎಲ್ಲರೂ ಜಾಹ್ನವಿ ಹೃದಯವೈಶಾಲ್ಯತೆಯನ್ನು
ಕೊಂಡಾಡುತ್ತಿದ್ದಾರೆ.
ಶ್ರೀದೇವಿ ಅವರೂ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾದವರು. ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ತನಗೆ
ಅವಕಾಶ ನೀಡಿದ ನಿರ್ಮಾಪಕರಿಗೆ ಶ್ರೀದೇವಿ ಸದಾ ಸಹಾಯ ಮಾಡುತ್ತಿದ್ದರು. ತಾನೊಬ್ಬಳು ಸ್ಟಾರ್ ಎಂಬ ಹಮ್ಮುಬಿಮ್ಮಿಲ್ಲದೆ
ಇವರು ಎಲ್ಲರೊಂದಿಗೆ ಸಮನಾಗಿ ನಡೆದುಕೊಳ್ಳುತ್ತಿದ್ದರು. ಸದ್ಯ ಪುತ್ರಿ ಜಾಹ್ನವಿ ಕೂಡಾ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ಇದು ಜಾಹ್ನವಿ ಕಪೂರ್ ಇನ್ನೊಂದು ಮುಖ…!
Follow Us