ಬೆಂಗಳೂರು : ಕೆಜಿಎಫ್ ಚಿತ್ರದ ಮೂಲಕ ದೇಶದ ಗಮನ ಸೆಳೆದಿರುವ ಯಶ್ ಅಭಿಮಾನಿಗಳ ಸಂಖ್ಯೆ ಈಗ ಏರುತ್ತಲಿದೆ.
ಕರ್ನಾಟಕದಾಚೆಗೂ ಯಶ್ ಕೀರ್ತಿ ಪಸರಿಸುತ್ತಿದೆ. ಅಭಿಮಾನಿ ಬಳಗವೂ ವಿಸ್ತಾರಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೇರಳದ
ಅಭಿಮಾನಿಗಳು ಯಶ್ ಅವರ ಮನೆಗೆ ಬಂದು ತಮ್ಮ ಅಭಿಮಾನ ಮೆರೆದಿದ್ದಾರೆ. ಜೊತೆಗೆ, ಫೋಟೋ, ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.
ಈ ಸಂಭ್ರಮದ ಕ್ಷಣಗಳನ್ನು ರಾಖಿಭಾಯ್ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಭಿಮಾನಿಗಳು ಯಶ್ ಮನೆಗೆ ಬಂದು ಮಾತನಾಡಿಸಿದ್ದರು. ಕೇರಳದ
ಅಭಿಮಾನಿಗಳ ಪ್ರೀತಿಗೆ ಕರಗಿ ನೀರಾದ ಯಶ್ ಕೆಜಿಎಫ್ ಚಿತ್ರದ ಡೈಲಾಗ್ ಹೊಡೆದು ಖುಷಿ ಪಟ್ಟರು. ಈ ಅಭಿಮಾನಿಗಳು ಯಶ್
ಅವರಿಗೆ ರಾಖಿಭಾಯ್ ಫೋಟೋ ಮತ್ತು ಯಶ್ ಹೆಸರಿರುವ ಟೀ ಶರ್ಟ್ ನೀಡಿ ಸಂಭ್ರಮಿಸಿದ್ದಾರೆ.
ಕೇರಳದಲ್ಲೂ ಯಶ್ ಅಬ್ಬರ : ಅಭಿಮಾನಿಗಳ ಪ್ರೀತಿಗೆ ಕರಗಿದ ರಾಕಿಭಾಯ್
Follow Us