ನವದೆಹಲಿ; ಹಿಂದಿಯ ’ಬದಾಯಿ ಹೋ’ ಚಿತ್ರದ ಪೋಷಕರ ಪಾತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿರಿಯ ನಟಿ ಸುರೇಖಾ ಜಿ ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಗಾಲಿ ಕುರ್ಚಿಯಲ್ಲಿ ಆಗಮಿಸಿ ಪ್ರಶಸ್ತಿ ಸ್ವೀಕರಿಸಿದರು.
ಅವರಿಗೆ ಸಭಾಂಗದಲ್ಲಿ ಕಿಕ್ಕಿರಿದಿದ್ದ ಜನರು ಎದ್ದುನಿಂತು ಭಾರಿ ಕರತಾಡನ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಇದೊಂದು ಅನಿರೀಕ್ಷಿತ ಅಚ್ಚರಿಯಾಗಿದ್ದು, ಸಂತಸ ತಂದಿದೆ ಎಂದಿದ್ದಾರೆ.