Wednesday, September 28, 2022

ಚಿರು ಮನೆಯಲ್ಲಿ 80ರ ‘ನಕ್ಷತ್ರ’ ಸಂಗಮ

Follow Us

  • ಒಂದೇ ಫ್ರೇಮ್‍ನಲ್ಲಿ ಸ್ಟಾರ್ ದಂಡು

ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಸ್ಟಾರ್ ನಟರ ದಂಡು ಒಂದೇ ಫ್ರೇಮ್‍ನಲ್ಲಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ಇದು ಸಾಮಾನ್ಯ `ಸ್ನೇಹ ಮಿಲನ’ದಂತೆ ಕಂಡರೂ ಇದು ಬರೀ ಸ್ನೇಹ ಮಿಲನ ಅಲ್ಲ. 80, 90ರ ದಶಕದ ಸ್ಟಾರ್ ಸಮಾಗಮ.
ಹಾಗೆ ನೋಡಿದರೆ ಇದು ಈ ಒಂದು ವರ್ಷದ ಖುಷಿ ಅಲ್ಲ. ಪ್ರತಿವರ್ಷ ಈ ಸ್ಟಾರ್‍ಗಳೆಲ್ಲಾ ಒಂದು ಕಡೆ ಸೇರಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಇಷ್ಟು ವರ್ಷ ಚೆನ್ನೈನಲ್ಲಿ ಸೌತ್ ಫಿಲಂ ಇಂಡಸ್ಟ್ರಿಯ ಈ ದಿಗ್ಗಜರು ಒಟ್ಟಾಗಿ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ, ಈ ವರ್ಷ ಇವರ ಖುಷಿಯ ಲೊಕೇಷನ್ ಹೈದರಾಬಾದ್‍ಗೆ ಶಿಫ್ಟ್ ಆಗಿದೆ. ಮೆಗಾ ಸ್ಟಾರ್ ಚಿರಂಜೀವಿ ತಮ್ಮ ಮನೆಯಲ್ಲೇ ಈ ಮಹಾಸಂಗಮಕ್ಕೆ ವೇದಿಕೆ ಕಲ್ಪಿಸಿದ್ದಾರೆ. ಹಾಗಾದರೆ ತಡ ಯಾಕೆ ಅಂತ ಎಲ್ಲರೂ ಒಂದು ಕಡೆ ಸೇರಿ ಈಗ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.
ಇವರೆಲ್ಲಾ ಒಂದು ಕಾಲದ ಸ್ಟಾರ್ ನಟ-ನಟಿಯರು. ತೆರೆ ಮೇಲೆ ಇವರನ್ನು ಕಂಡ ತಕ್ಷಣ ಹುಚ್ಚೆದ್ದು ಕುಣಿಯುವ ಅಭಿಮಾನಿ ಬಳಗವೇ ಇತ್ತು. ಹಾಗಂತ, ಇವರೆಲ್ಲಾ ಈಗ ಬಣ್ಣದ ಲೋಕದಿಂದ ದೂರವಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಈಗಲೂ ಹಿರಿ ಮತ್ತು ಕಿರುತೆರೆಯಲ್ಲಿ ಇವರೆಲ್ಲರೂ ಸಕ್ರಿಯ. ಒಬ್ಬೊಬ್ಬರದ್ದು ಒಂದೊಂದು ದಾರಿ. ಸುಮಲತಾ ಅಂಬರೀಷ್ ಸಂಸದೆಯಾಗಿ ಬ್ಯುಸಿಯಾದರೆ, ಶೋಭಾ ಭರತನಾಟ್ಯ ಕ್ಷೇತ್ರದಲ್ಲಿ ದೊಡ್ಡ ಸಾಧಕಿ. ರಮ್ಯಾ ಕೃಷ್ಣನ್ ಈಗಲೂ ಬೆಳ್ಳಿ ಪರದೆ, ಕಿರುತೆರೆಯಲ್ಲಿ ಬ್ಯುಸಿ. ರಾಧಿಕಾ ಶರತ್ ಕುಮಾರ್ ಕೂಡ ಅಷ್ಟೇ. ಖುಷ್ಬು, ಅಮಲಾ, ವೆಂಕಟೇಶ್, ಶರತ್ ಕುಮಾರ್, ರೇವತಿ, ಜಯಸುಧಾ, ಅಂಬಿಕಾ… ಒಂದಾ ಎರಡಾ? ಹೇಳುತ್ತಾ ಹೋದರೆ ಪಟ್ಟಿ ದೊಡ್ಡದೇ ಇದೆ. ಇಲ್ಲಿರುವ ಅಷ್ಟೂ ಜನ ಈಗಲೂ ಒಂದಲ್ಲ ಒಂದು ರೀತಿಯಲ್ಲಿ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದವರೇ. ಆದರೆ, ಈ ಎಲ್ಲಾ ಬ್ಯುಸಿ ಶೆಡ್ಯೂಲ್ಡ್ ಗಳನ್ನು ಬದಿಗೊತ್ತಿ ಇವರು ಒಂದು ಅಥವಾ ಎರಡು ದಿನ ಹಾಯಾಗಿ ಇಲ್ಲಿ ಒಟ್ಟಾಗಿ ಗೆಳೆಯರೊಂದಿಗೆ ಕಾಲ ಕಳೆದು ಮಸ್ತ್ ಮಜಾ ಮಾಡ್ತಾರೆ.
ಮೇಲ್ನೋಟಕ್ಕೆ ಇದು ಸಾಮಾನ್ಯದಂತೆ ಕಾಣಬಹುದು. ಆದರೆ, ಇದು ಸಾಮಾನ್ಯ ಸಂಗತಿಯಲ್ಲ. ಬದಲಾದ ಬಣ್ಣದ ಲೋಕದಲ್ಲಿ ನಾನು ಇಂತಹ ಸ್ನೇಹ ಕೂಟವನ್ನು ನಿರೀಕ್ಷಿಸುವುದು ಬಹಳ ಕಷ್ಟ. ಅದಕ್ಕೆ ಕಾರಣ ಬೇರೆ ಬೇರೆ ಇರಬಹುದು. ಆದರೂ ಈ ಫೋಟೋದಲ್ಲಿರುವ ಆಪ್ತತೆ ನೋಡುವಾಗಲೇ ಇವರ ಸ್ನೇಹ ಎಂತಹದ್ದು ಎಂದು ಗೊತ್ತಾಗುತ್ತದೆ. ಇದು ಬರೀ ಫೋಟೋಗೆ ಕೊಟ್ಟ ಪೋಸ್ ಅಲ್ಲ. ಆಂತರ್ಯದ ಖುಷಿಯಿದು. ಪ್ರತಿ ವರ್ಷದ ಸುಂದರ ಕ್ಷಣಗಳಿವು.

ಮತ್ತಷ್ಟು ಸುದ್ದಿಗಳು

vertical

Latest News

ವಾಟ್ಸಾಪ್ ಗ್ರೂಪ್ ನಲ್ಲಿ ಪರಿಚಯ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

newsics.com ಮಂಗಳೂರು: ವಾಟ್ಸಾಪ್ ಗ್ರೂಪ್ ನಲ್ಲಿ ಪರಿಚಯವಾದ ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ನಿವಾಸಿ...

ದೇಶದಲ್ಲಿ ಪಿಎಫ್ಐ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

newsics.com ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಮೇಲೆ ನಿಷೇಧ ಹೇರಿದೆ. ಐದು ವರ್ಷಕ್ಕೆ ನಿಷೇಧ ಹೇರಲಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಪಿಎಫ್ಐ ಮತ್ತು ಅದರ ಎಲ್ಲ...

ಅಬಕಾರಿ ನೀತಿ ಪ್ರಕರಣ: ಸಿಬಿಐನಿಂದ ದೆಹಲಿ ಡಿಸಿಎಂ ಆಪ್ತ ರಾಜೇಶ್ ನಾಯರ್ ಬಂಧನ

newsics.com ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇದೇ ಮೊದಲಾ ಬಾರಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ವಿಜಯ್ ನಾಯರ್‌ನನ್ನು ಸಿಬಿಐ ಬಂಧಿಸಿದೆ. ಓನ್ಲಿ ಮಚ್ ಲೌಡರ್ ಎಂಟರ್‌ಟೈನ್‌ಮೆಂಟ್ ಮತ್ತು ಈವೆಂಟ್ ಮೀಡಿಯಾ ಕಂಪನಿಯ...
- Advertisement -
error: Content is protected !!