ಮುಂಬೈ: ಬಾಲಿವುಡ್ ನ ಲವ್ ಬರ್ಡ್ಸ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 2020ರ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರಂತೆ. ಈ ಕುರಿತು ಚಿತ್ರ ವಿಮರ್ಶಕ ರಾಜೀವ್ ಮಸಂದ್ ನಿಯತಕಾಲಿಕೆಯೊಂದರ ಲೇಖನದಲ್ಲಿ ಪ್ರಕಟಿಸಿದ್ದಾರೆ.
ಆಲಿಯಾ ಮತ್ತು ರಣಬೀರ್ ಕಪೂರ್ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದು, ಇದಕ್ಕೆ ಇಬ್ಬರ ಮನೆಯವರ ಒಪ್ಪಿಗೆಯೂ ಇದೆ ಎನ್ನಲಾಗಿದೆ.