- ನಿತ್ಯಾ ರಾಮ್ ಬದಲಿಗೆ ಛಾಯಾಸಿಂಗ್
ಬೆಂಗಳೂರು: ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ನಂದಿನಿ ಧಾರಾವಾಹಿಯಿಂದ ಹೊರಬರುತ್ತಿದ್ದಾರೆ. ನಿತ್ಯಾ, ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಧಾರಾವಾಹಿಯಿಂದ ನಿರ್ಗಮಿಸುತ್ತಿದ್ದಾರೆ. ವಿದೇಶದಲ್ಲಿ ಉದ್ಯಮಿಯಾಗಿರುವ ಹುಡುಗನನ್ನು ನಿತ್ಯಾ ವಿವಾಹವಾಗುತ್ತಿದ್ದು, ವಿದೇಶಕ್ಕೆ ತೆರಳಲಿದ್ದಾರೆ. ಜನಪ್ರಿಯ ಧಾರಾವಾಹಿ ಎನಿಸಿರುವ ನಂದಿನಿಯ ನಾಯಕಿ ಪಾತ್ರಧಾರಿಯಾಗಿ ಸ್ಯಾಂಡಲ್ ವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿರುವ ನಟಿ ಚಿಟ್ಟೆ ಸಿನಿಮಾ ಖ್ಯಾತಿಯ ಛಾಯಾಸಿಂಗ್ ಕಾಣಿಸಿಕೊಳ್ಳಲಿದ್ದಾರೆ.