ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.
‘ಆರತಿಗೊಬ್ಬ ಕೀರ್ತಿಗೊಬ್ಬ’ ಸೀರಿಯಲ್ನಲ್ಲಿ ಕಥಾನಾಯಕರಿಬ್ಬರ ತಾಯಿಯಾಗಿ ‘ಪುಟ್ಮಲ್ಲಿ’ ಹೆಸರಿನ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಪುಟ್ನಂಜ’ ಸಿನಿಮಾದಲ್ಲಿ ಕಥಾನಾಯಕನ ಅಜ್ಜಿಯಾಗಿ, ಇದೇ ಹೆಸರಿನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದರು.
ರಾಜಕೀಯ ಪ್ರವೇಶದ ಬಳಿಕ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ‘ಅಮ್ಮ ನಿನಗಾಗಿ’, ‘ಮುಸ್ಸಂಜೆ’, ‘ಕಿಚ್ಚು’ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೈಸೂರು ಮಂಜು ನಿರ್ದೇಶನದಡಿ ಮೂಡಿಬರಲಿರುವ ಈ ಧಾರಾವಾಹಿಯಲ್ಲಿ ಅವಳಿ ಮಕ್ಕಳ ತಾಯಿಯ ಪಾತ್ರವನ್ನು ಉಮಾಶ್ರೀ ನಿಭಾಯಿಸುತ್ತಿದ್ದಾರೆ.
ನಟಿ ಉಮಾಶ್ರೀ ಮತ್ತೆ ಕಿರುತೆರೆಗೆ
Follow Us