ಮುಂಬೈ: ನಟಿ ದೀಪಿಕಾ ಪಡುಕೋಣೆ ತಮ್ಮ ಮಹತ್ವಾಂಕ್ಷೆಯ ಚಿತ್ರ ಚಪಕ್ ನ ಪ್ರಮೋಷನ್ ನಲ್ಲಿ ನಿರತರಾಗಿದ್ದಾರೆ. ಆದರೆ ಚಿತ್ರದ ಬಗ್ಗೆ ಪ್ರಶ್ನೆ ಕೇಳುವ ಬದಲು ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಪ್ರಶ್ನಿಸಲಾಗುತ್ತಿದೆಯಂತೆ. ಪತ್ರಕರ್ತರೊಬ್ಬರು ನೀವು ಗರ್ಭಿಣಿಯಾಗಿದ್ದೀರಿ ಎಂಬ ವದಂತಿ ಹರಿದಾಡುತ್ತಿದೆಯಲ್ಲ ಎಂದು ಕೇಳಿದಾಗ ನಗುತ್ತಲೆ ಅದಕ್ಕೆ ಉತ್ತರ ನೀಡಿದ್ದಾರೆ. ಹೌದು ನಾನು ಗರ್ಭಿಣಿಯಾಗಿದ್ದರೆ 9 ತಿಂಗಳಲ್ಲಿ ನಿಮಗೆ ತಿಳಿಯುತ್ತದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.