ಮುಂಬೈ : ಪದ್ಮಾವತ್ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಬೇರೆ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುತ್ತಿರುವ ದೀಪಿಕಾ ಪಡುಕೋಣೆ ಈಗ ಮತ್ತೊಂದು ಬಿಗ್ ಪ್ರಾಜೆಕ್ಟ್‍ಗೆ ಇಳಿದಿದ್ದಾರೆ. ಈ ಬಾರಿ ಮಹಾಭಾರತದ ಕತೆಯಾಧರಿಸಿದ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ದೀಪಿಕಾ ದ್ರೌಪದಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಬಹುತೇಕ 2021ರ ದೀಪಾವಳಿ ವೇಳೆಗೆ ಈ ಬಿಗ್ ಬಜೆಟ್ ಚಿತ್ರ ಬೆಳ್ಳಿತೆರೆಗಪ್ಪಳಿಸಲಿದೆ. ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ದೀಪಿಕಾ ಹೊತ್ತುಕೊಂಡಿದ್ದಾರೆ. ಬಾಲಿವುಡ್ಡಿನ ಖ್ಯಾತ ನಿರ್ಮಾಪಕ ಮಧು ಮಂಥೇನ ದ್ರೌಪದಿ ಪಾತ್ರವನ್ನೇ ಪ್ರಮುಖವಾಗಿಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ. ಸದ್ಯ
ಚಪಾಕ್’ ಮತ್ತು `83′ ಚಿತ್ರದ
ಕೆಲಸದಲ್ಲಿ ದೀಪಿಕಾ ನಿರತರಾಗಿದ್ದು, ಈ ಎರಡೂ ಪ್ರಾಜೆಕ್ಟುಗಳು ಮುಗಿದ ಬಳಿಕ ಹೊಸ ಚಿತ್ರದಲ್ಲಿ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ.
`ಪದ್ಮಾವತ್ ದೀಪಿಕಾ ಈಗ `ಪಾಂಚಾಲಿ
Follow Us