
ಬೆಂಗಳೂರು: ನಟ ಧ್ರುವ ಸರ್ಜಾ ಭಾನುವಾರ ಪ್ರೇರಣಾ ಜತೆ ಸಪ್ತಪದಿ ತುಳಿದರು. ಈ ಮೂಲಕ 15 ವರ್ಷಗಳ ಪ್ರೀತಿ ಮದುವೆ ಮೂಲಕ ಫಲಿಸಿದೆ.
ಬೆಂಗಳೂರಿನ ಜೆ.ಪಿ.ನಗರದ ಸಂಸ್ಕೃತಿ ಬೃಂದಾವನ ಕನ್ಷೆನ್ಸನ್ ಹಾಲ್ ನಲ್ಲಿ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಮದುವೆ ಅದ್ಧೂರಿಯಾಗಿ ನೆರವೇರಿತು.
ಭಾನುವಾರ ಬೆಳಗ್ಗೆ 7.15 ರಿಂದ 7.45 ರವರೆಗೆ ಇದ್ದ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಹಸೆಮಣೆ ಏರಿದರು.
ಮುಹೂರ್ತ ಸಮಾರಂಭಕ್ಕೆ ಕ್ರೀಮ್ ಮತ್ತು ಕೇಸರಿ ಬಣ್ಣದ ರೇಶ್ಮೆ ಸೀರೆಯಲ್ಲಿ ವಧು ಪ್ರೇರಣಾ ಶಂಕರ್ ಮಿಂಚಿದರೆ, ವರ ಧ್ರುವ ಸರ್ಜಾ ಬಿಳಿ ಬಣ್ಣದ ರೇಷ್ಮೆ ಪಂಚೆ-ಶರ್ಟ್ ಧರಿಸಿದ್ದರು.