ಮುಂಬೈ: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ಈಗ ಚಿತ್ರವಾಗುತ್ತಿದೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈ ಚಿತ್ರದಲ್ಲಿ ಸೈನಾ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಪರಿಣಿತಿ ಬ್ಯಾಡ್ಮಿಂಟನ್ ಕೋರ್ಟಿನಲ್ಲಿ ಸಖತ್ ಬೆವರಿಳಿಸುತ್ತಿದ್ದಾರೆ. ಬ್ಯಾಡ್ಮಿಂಟನ್ ಪಟ್ಟುಗಳನ್ನೂ ಕಲಿಯುತ್ತಿದ್ದಾರೆ. ಸದ್ಯ ಸಣ್ಣ ಬ್ರೇಕ್ ಬಳಿಕ ಪರಿಣಿತಿ ಮತ್ತೆ ಶೂಟಿಂಗ್ ಸೆಟ್‌ಗೆ ಆಗಮಿಸಿದ್ದು, ಹೊಸ ಹುರುಪಿನಲ್ಲಿದ್ದಾರೆ.
ಹತ್ತು ದಿನಗಳ ಹಿಂದೆ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಪರಿಣಿತಿ ವಿಶ್ರಾಂತಿಯ ಕಾರಣಕ್ಕೆ ಶೂಟಿಂಗ್‌ನಿAದ ದೂರ ಉಳಿದಿದ್ದರು. ಯಾವುದೇ ಕಾರಣಕ್ಕೂ ಒಂದಷ್ಟು ದಿನ ಬ್ಯಾಡ್ಮಿಂಟನ್ ಆಡಬಾರದು ಎಂದು ಕಳೆದ ವಾರ ವೈದ್ಯರು ಸಲಹೆ ನೀಡಿದ್ದರಿಂದ ಪರಿಣಿತಿ ಆಟದಂಗಳದಿAದ ದೂರವಿದ್ದು ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ೧೦ ದಿನಗಳ ವಿಶ್ರಾಂತಿ ಮುಗಿಸಿ ಫುಲ್ ಜೋಶ್‌ನಲ್ಲಿ ಪರಿಣಿತಿ ಮತ್ತೆ ಚಿತ್ರತಂಡವನ್ನು ಸೇರಿದ್ದಾರೆ.
ಬುಧವಾರದಿಂದ ಶೂಟಿಂಗ್ ಶುರುವಾಗಿದೆ. ಈ ಚಿತ್ರಕ್ಕಾಗಿ ಸರಿಸುಮಾರು ೮ ಗಂಟೆಗಳ ಕಾಲ ಪರಿಣಿತಿ ಬ್ಯಾಡ್ಮಿಂಟನ್ ಆಡಬೇಕಾಗಿದೆ. `ನಾನೀಗ ಸಂಪೂರ್ಣ ಗುಣಮುಖಳಾಗಿದ್ದೇನೆ. ಹೀಗಾಗಿ, ಬ್ಯಾಡ್ಮಿಂಟನ್ ಕೋರ್ಟ್ಗೆ ಮತ್ತೆ ಎಂಟ್ರಿ ಕೊಡುತ್ತಿದ್ದೇನೆ’ ಎಂದು ಖುಷಿಯಲ್ಲಿ ವ್ಯಕ್ತಪಡಿಸಿದ್ದಾರೆ ಪರಿಣಿತಿ. ಸೈನಾ ಬಯೋಪಿಕ್ ಅನ್ನು ಅಮೋಲ್ ಗುಪ್ಟೆ ನಿರ್ದೇಶನ ಮಾಡುತ್ತಿದ್ದಾರೆ.
ಬ್ರೇಕ್ ಕೆ ಬಾದ್; `ಸೈನಾ’ ಶೂಟಿಂಗ್‌ಗೆ ಪರಿಣಿತಿ ಚೋಪ್ರಾ
Follow Us