ನವದೆಹಲಿ: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ಪುತ್ರಿ ಆರಾಧ್ಯ ತನ್ನ ಶಾಲಾ ವಾರ್ಷಿಕ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಆಕೆಯ ತಾತ, ಬಾಲಿವುಡ್ ಬಿಗ್ ಬಿ ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, ‘ಇದು ಬಹಳ ಹೆಮ್ಮೆಯ ಕ್ಷಣ’ ಎಂದಿದ್ದಾರೆ. ಶಾಲಾ ಪ್ರದರ್ಶನವೊಂರದಲ್ಲಿ ಆರಾಧ್ಯ, ‘ನಾನು ಕನ್ಯೆ, ನಾನು ಕನಸು. ನಾನು ಹೊಸ ಯುಗದ ಕನಸು. ನಾವು ಹೊಸ ಜಗತ್ತನ್ನು ಸೃಷ್ಟಿಸುತ್ತೇನೆ. ಅದು ಸುರಕ್ಷತೆ, ಪ್ರೀತಿಯಿಂದ ತುಂಬಿರುತ್ತದೆ’ ಎಂಬ ಮಾತುಗಳನ್ನಾಡಿದ್ದಳು.