ಚೆನ್ನೈ: ಇಂದು ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ 69ನೇ ಜನ್ಮದಿನ. ತಲೈವಾ ಜನ್ಮದಿನಕ್ಕೆ ದೇಶದ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
ಮಾಜಿ ಕ್ರಿಕೆಟಿಕ ಸಚಿನ್ ತೆಂಡೂಲ್ಕರ್ ರಜನಿಕಾಂತ್
ಅವರಿಗೆ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿ ಶುಭಕೋರಿದ್ದಾರೆ. “ ನೀವು ನಿಮ್ಮ ಸ್ಟೈಲ್‌ನಿಂದ ಆನ್‌ಸ್ಕ್ರೀನ್‌ನಲ್ಲಿ ಹಾಗೂ ಮಾನವೀಯ
ಮೌಲ್ಯಗಳಿಂದಾಗಿ ಆಫ್‌ಸ್ಕ್ರೀನ್‌ನಲ್ಲಿ ನೀವು ಎಲ್ಲ ’ದರ್ಬಾರ್’
ನಲ್ಲೂ ’ತಲೈವಾ’ ಆಗಿದ್ದೀರಿ”
ಎಂದು ಶ್ಲಾಘಿಸಿದ್ದಾರೆ.
ರಜಿನಿಕಾಂತ್ ಅಭಿನಯದ ’ದರ್ಬಾರ್’ ಚಿತ್ರ ೨೦೨೦ರ ಜನವರಿಯಲ್ಲಿ ತೆರೆಗೆ ಬರಲಿದೆ.