ಫಿರೋಜಾಬಾದ್; ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಆರೋಪದ ಮೇಲೆ ಬಾಲಿವುಡ್ ನಟಿ ರವೀನಾ ಟಂಡನ್, ನೃತ್ಯ ಸಂಯೋಜಕಿ, ನಿರ್ಮಾಪಕಿ ಫರಾ ಖಾನ್ ಮತ್ತು ಕಮಿಡಿಯನ್ ಭಾರತಿ ಸಿಂಗ್ ವಿರುದ್ಧ ಒಂದೇ ವಾರದಲ್ಲಿ ಮೂರು ಎಫ್ ಐಆರ್ ಗಳು ದಾಖಲಾಗಿವೆ.
ಈ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಸೆಕ್ಷನ್ 295-ಎ ಸೆಕ್ಷನ್ ಅಡಿಯಲ್ಲಿ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ) ಪ್ರಕರಣ ದಾಖಲಿಸಲಾಗಿದೆ. ಇವರು ವಿರುದ್ಧ ಕಂಬೋಜ್ ನಗರ ನಿವಾಸಿಯೋರ್ವರು ದೂರು ದಾಖಲಿಸಿದ್ದರು.