ನವದೆಹಲಿ: ಹಿಂದಿ ಸಿನಿಮಾ ‘ಲವ್ ಯಾತ್ರಿ’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸಲ್ಮಾನ್ ಖಾನ್ಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದೆ.
2018ರಲ್ಲಿ ಬಿಡುಗಡೆಗೊಂಡ ‘ಲವ್ ರಾತ್ರಿ –ಎ ಜರ್ನಿ ಆಫ್ ಲವ್‘ ಚಿತ್ರದಲ್ಲಿ ಹಿಂದೂ ಉತ್ಸವ ನವರಾತ್ರಿ
ಹಾಗೂ ಗರ್ಬಾ ನೃತ್ಯಕ್ಕೆ ಅವಮಾನ ಮಾಡಲಾಗಿದೆ ಎಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.
ವಿವಾದಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು
ಕೈಬಿಡಲಾಗಿದೆ ಎಂದು ಸಲ್ಮಾನ್ ಪರ ವಕೀಲ ನಿಜಾಮ್ ಪಾಶಾ ತಿಳಿಸಿದ್ದಾರೆ.