ಕೊಚ್ಚಿ: ಚಿತ್ರನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಲೆಯಾಳಂ ನಟ ದಿಲೀಪ್ ವಿರುದ್ಧದ ಪ್ರಕರಣ ಕೈಬಿಡಲು ಅಲ್ಲಿನ ನ್ಯಾಯಾಲಯ ನಿರಾಕರಿಸಿದೆ.
ಇತ್ತೀಚೆಗೆ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ಅದರಿಂದ ವಿನಾಯ್ತಿ ನೀಡುವಂತೆ ಕೋರಿ ದಿಲೀಪ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.