ಮುಂಬೈ: ನಟ ಸಲ್ಮಾನ್ ಖಾನ್ ಮುಂಬೈನ ತಮ್ಮ ಸಹೋದರ ಸೊಹೈಲ್ ಖಾನ್ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಿದರು. ಸಲ್ಮಾನ್ ಖಾನ್ ಅವರ ಆಪ್ತ ಬಳಗದ ಎಲ್ಲ ಸದಸ್ಯರು ಇದರಲ್ಲಿ ಭಾಗವಹಿಸಿದರು. ಸೋನಾಕ್ಷಿ ಸಿನ್ಹಾ, ಸಂಗೀತ ಬಿಜಲಾನಿ, ವಿದ್ಯಾ ಬಾಲನ್ ಹೀಗೆ ಎಲ್ಲ ಸೆಲೆಬ್ರಿಟಿಗಳು ಇದ್ದರು. ಈ ಮಧ್ಯೆ ಅಚ್ಚರಿ ಕೂಡ ನಡೆಯಿತು. ರಾತ್ರಿ ಎರಡು ಗಂಟೆ ಹೊತ್ತಿಗೆ ಎಂಟ್ರಿ ಕೊಟ್ಟ ಶಾರೂಖ್ ಖಾನ್, ಸಲ್ಮಾನ್ ಖಾನ್ ಗೆ ಶುಭ ಹಾರೈಸಿದರು.