ಬೆಂಗಳೂರು: ದಬಾಂಗ್ -3 ಚಿತ್ರದಲ್ಲಿ ವಿಲನ್ ಪಾತ್ರದ್ದ ಕನ್ನಡದ ಸುದೀಪ್ ಮನೆಯ ಮುಂದೆ ಇದ್ದಕ್ಕಿದ್ದಂತೆ ಬಿಎಂಡಬ್ಲ್ಯು-ಎಂ5 ಕಾರು ಬಂದು ನಿಂತಿತ್ತು. ಅದನ್ನು ಕೊಡುಗೆಯಾಗಿ ನೀಡಿದ್ದು ಬೇರಾರು ಅಲ್ಲ, ದಬಾಂಗ್ ಸ್ಟಾರ್ ಸಲ್ಮಾನ್ ಖಾನ್! ಈ ಕುರಿತ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಸುದೀಪ್, ನೀವು ಒಳ್ಳೆಯದು ಮಾಡಿದರೆ ನಿಮಗೆ ಒಳ್ಳೆಯದೇ ಆಗುತ್ತದೆ ಎಂಬುದು ಸತ್ಯ. ನಮ್ಮ ಕುಟುಂಬ ಸದಸ್ಯರ ಮೇಲೆ ನೀವು ತೋರಿಸಿರುವ ಪ್ರೀತಿಗೆ