ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ
ತೊಡಗಿಕೊಂಡಿದ್ದ ನಟಿ ರಮ್ಯಾ ಬಹಳ ವರ್ಷಗಳ ಬಿಡುವಿನ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚಿನ ಲೋಕಸಭಾ
ಚುನಾವಣೆಯವರೆಗೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ವಿಭಾಗದ ಮುಖ್ಯಸ್ಥೆಯಾಗಿದ್ದ ರಮ್ಯಾ ಇದೀಗ ಆ ಸ್ಥಾನದಲ್ಲೂ
ಇಲ್ಲ. ಇದಾದ ಬಳಿಕ ಇವರು ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. ಒಂದು ಹಂತದಲ್ಲಿ ರಮ್ಯಾ ಮದುವೆ ಸಿದ್ಧತೆಯಲ್ಲಿದ್ದಾರೆ ಎಂಬ
ಸುದ್ದಿಯೂ ಹಬ್ಬಿತ್ತು. ಆದರೆ, ಇದೀಗ ರಮ್ಯಾ ಸಿನಿಲೋಕಕ್ಕೆ ಮತ್ತೆ ಮರಳುವ ಸುದ್ದಿ ಬಂದಿದೆ.
`ದಿಲ್ ಕಾ ರಾಜಾ’ ಚಿತ್ರದ ಮೂಲಕ ರಮ್ಯಾ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ರಮ್ಯಾ ಕೊನೆಯದಾಗಿ
ಅಭಿನಯಿಸಿರುವ ಚಿತ್ರ ನಾಗರಹಾವು. ಇದಾದ ಬಳಿಕ ಇವರು ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಕೊಂಡು
ದೆಹಲಿಯಲ್ಲೇ ಉಳಿದು ಬಿಟ್ಟಿದ್ದರು. ಜೊತೆಗೆ, ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಪೋಸ್ಟ್‍ಗಳ ಮೂಲಕ ಇವರು ವಿವಾದಕ್ಕೂ
ಗುರಿಯಾಗಿದ್ದರು.
ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ ಕೊಡುತ್ತಿದ್ದಾರೆ ಮಾಜಿ ಸಂಸದೆ ರಮ್ಯಾ
Follow Us