ಮಲೆಯಾಳಂ ಚಿತ್ರರಂಗ ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಮಾಮಕಂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ, ಮಮ್ಮ್ಮುಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 17ನೇ ಶತಮಾನದ ಕೊನೆಯ ಭಾಗದ ಘಟನೆ ಚಿತ್ರದ ಕಥಾ ವಸ್ತು. ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಧೀರ ಹೋರಾಟ ನಡೆಸಿದ ವಲ್ಲುವನಾಡಿನ ಯೋಧರ ಕಥೆ. ಅಂದು ಬಲಿಷ್ಠರಾಗಿದ್ದ ಸಾಮೂದಿರಿ ಅರಸರ ವಿರುದ್ದ ವಲ್ಲುವನಾಡಿನ ಯೋಧರು ಅದರಲ್ಲೂ ಚೇವರ್ ಪಡೆ ಎಂದು ಹೆಸರು ಪಡೆದಿದ್ದ ಆತ್ಮಾಹುತಿ ದಳದ ಸಾಹಸದ ಕಥೆ ಇದು. ಪರಿಣಾಮಕಾರಿ ಸಂಭಾಷಣೆ ಮತ್ತು ಯುದ್ದದ ದೃಶ್ಯಗಳು ಚಿತ್ರದ ಹೈಲೈಟ್ಸ್.