ಬೆಂಗಳೂರು: ನಟ ಜೆ.ಕೆ.ಶ್ರೀನಿವಾಸಮೂರ್ತಿ ಅವರಿಗೆ 2018ನೇ ಸಾಲಿನ ಡಾ.ರಾಜಕುಮಾರ್ ಪ್ರಶಸ್ತಿ, ಪಿ.ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ವರ್ಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಆಯ್ಕೆಯಾಗಿದೆ.
ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2018ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿದರು.
ಪ್ರಶಸ್ತಿ ಪಟ್ಟಿ:
ಡಾ.ವಿಷ್ಣುವರ್ಧನ್ ಪ್ರಶಸ್ತಿ-ಬಿ.ಎಸ್.ಬಸವರಾಜು
ಅತ್ಯುತ್ತಮ ನಟಿ-ಮೇಘನಾರಾಜ್(ಇರುವುದೆಲ್ಲವ ಬಿಟ್ಟು)
ಅತ್ಯುತ್ತಮ ಪೋಷಕ ನಟ-ಬಾಲಾಜಿ ಮನೋಹರ್(ಚೂರಿಕಟ್ಟೆ)
ಅತ್ಯುತ್ತಮ ಪೋಷಕ ನಟಿ-ವೀಣಾ ಸುಂದರ್(ಆಕರಾಳ ರಾತ್ರಿ)
ಅತ್ಯುತ್ತಮ ಕಥೆ- ಹರೀಶ್ ಎಸ್(ನಾಯಿಗೆರೆ)
ಅತ್ಯುತ್ತಮ ಚಿತ್ರಕಥೆ- ಪಿ.ಶೇಷಾದ್ರಿ(ಮೂಕಜ್ಜಿಯ ಕನಸು)
ಅತ್ಯುತ್ತಮ ಸಂಭಾಷಣೆ-ಶಿರೀಷಾ ಜೋಷಿ(ಸಾವಿತ್ರಿಬಾಯಿ ಪುಲೆ)
ಅತ್ಯುತ್ತಮ ಛಾಯಾಗ್ರಹಣ- ನವೀನ್ ಕುಮಾರ್ .ಐ(ಅಮ್ಮಚ್ಚಿಯೆಂಬ ನೆನಪು)
ಅತ್ಯುತ್ತಮ ಸಂಗೀತ ನಿರ್ದೇಶನ- ರವಿಬಸ್ರೂರ್(ಕೆಜಿಎಫ್)
ಅತ್ಯುತ್ತಮ ಸಂಕಲನ- ಸುರೇಶ್ ಆರ್ಮುಗಂ( ತ್ರಾಟಕ)
ಅತ್ಯುತ್ತಮ ಬಾಲನಟ- ಮಾಸ್ಟರ್ ಆರೆನ್( ರಾಮನ ಸವಾರಿ)
ಅತ್ಯುತ್ತಮ ಬಾಲನಟಿ- ಬೇಬಿ ಸಿಂಚನಾ( ಅಂದವಾದ).
ಅತ್ಯುತ್ತಮ ಕಲಾ ನಿರ್ದೇಶನ- ಶಿವಕುಮಾರ್ ಜೆ(ಕೆಜಿಎಫ್)
ಅತ್ಯುತ್ ಗೀತರಚನೆ- ಬರಗೂರು ರಾಮಚಂದ್ರಪ್ಪ(ಬಯಲಾಟದ ಭೀಮಣ್ಣ)
ಅತ್ಯುತ್ತಮ ಹಿನ್ನೆಲೆ ಗಾಯಕ- ಸಿದ್ದಾರ್ಥ ಬೆಳ್ಮುಣ್ಣು(ಸಂತಕವಿ ಕನಕದಾಸರ ರಾಮಧಾನ್ಯ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಕಲಾವತಿ ದಯಾನಂದ(ದೇಯಿ ಬೈದೇತಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ- ಅನಂತರಾಯಪ್ಪ(ಸಮಾನತೆಯ ಕಡೆಗೆ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ- ವಿ.ಥಾಮಸ್(ಅಬ್ಬೆ ತುಮಕೂರು ಸಿದ್ದಪುರುಷ ವಿಶ್ವಾರಾಧ್ಯರು)
ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿ-“ಆ ಕರಾಳ ರಾತ್ರಿ”
ಎರಡನೆ ಅತ್ಯುತ್ತಮ ಚಿತ್ರ-ರಾಮನ ಸವಾರಿ.
ಮೂರನೆ ಅತ್ಯುತ್ತಮ ಚಿತ್ರ-ಒಂದಲ್ಲಾ ಎರಡಲ್ಲಾ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ-ಸಂತಕವಿ ಕನಕದಾಸರ ರಾಮಧಾನ್ಯ
ಅತ್ಯುತ್ತಮ ಮನರಂಜನಾಚಿತ್ರ-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.
ಅತ್ಯುತ್ತಮ ಮಕ್ಕಳ ಚಿತ್ರ-ಹೂವುಬಳ್ಳಿ
ನಿರ್ದೇಶಕರ ಪ್ರಥಮ ನಿರ್ದೆಶನದ ಅತ್ಯುತ್ತಮ ಚಿತ್ರ-ಬೆಳಕಿನಕನ್ನಡಿ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ-ದೇಯಿ ಬೈದೇತಿ(ತುಳು)