Monday, October 3, 2022

ಶಿವಾಜಿನಗರದ ಮಿಲಿಟರಿ‌ ಹೋಟೆಲ್‌ನಲ್ಲಿ ದೊನ್ನೆ ಬಿರಿಯಾನಿ ಸವಿದ ನಟ ಆಶಿಷ್ ವಿದ್ಯಾರ್ಥಿ

Follow Us

newsics.com

ಬೆಂಗಳೂರು: ನಟ ಆಶಿಷ್ ವಿದ್ಯಾರ್ಥಿ ಆಹಾರ ಪ್ರಿಯರು. ಸವಿರುಚಿಯ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ.

ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಫೇಮಸ್ ಹೋಟೆಲ್‌ಗೆ ಹೋಗಿ ಊಟ ಸವಿದು ತಮ್ಮ ಯೂಟ್ಯೂಬ್ ಅಭಿಮಾನಿಗಳಿಗೂ ಟೇಸ್ಟ್ ಕುರಿತು‌ ಮಾಹಿತಿ ನೀಡುತ್ತಿದ್ದಾರೆ.

ಕಳೆದ ಬಾರಿ ಮುದ್ದೆ ಊಟ ಮಾಡಿ ಸೂಪರ್ ಎಂದಿದ್ದ ಆಶಿಶ್ ವಿದ್ಯಾರ್ಥಿ ಇದೀಗ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿದ್ದಾರೆ. ಈ ಬಾರಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಪುಟ್ಟ ಮಿಲಿಟರಿ ಹೋಟೆಲ್‌ ಊಟದ ಬಗ್ಗೆ ವಿವರಿಸಿದ್ದಾರೆ.

ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ. ಅನೇಕ ದಿನಗಳ ಬಳಿಕ ಬೆಂಗಳೂರಿನಲ್ಲಿ ಎಕೆ47 ನಟನನ್ನು ನೋಡಿ ಅಭಿಮಾನಿಗಳು ಸಹ ಖುಷ್ ಆಗಿದ್ದಾರೆ.

ನಟ ಆಶಿಷ್ ವಿದ್ಯಾರ್ಥಿ ಎಕೆ 47 ಸಿನಿಮಾ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಆಶಿಷ್ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು. ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಎಂಟು ಚೀತಾಗಳ ರಕ್ಷಣೆಯ ಹೊಣೆ ಹೊತ್ತಿರುವ ಎರಡು ಆನೆಗಳು

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!