Tuesday, April 13, 2021

ಹುಮಾ ಖುರೇಷಿಗೆ ಶಾಕ್ ನೀಡಿದ ಕರೆಂಟ್ ಬಿಲ್

ಮುಂಬೈ: ವಿದ್ಯುತ್ ಬಿಲ್ ಕೇವಲ ಜನಸಾಮಾನ್ಯರಿಗಷ್ಟೆ ಅಲ್ಲ, ಸೆಲೆಬ್ರಿಟಿಗಳಿಗೂ ಶಾಕ್ ನೀಡಿದೆ, ಖ್ಯಾತ ನಟಿ ಹುಮಾ ಖುರೇಷಿ  ಕರೆಂಟ್ ಬಿಲ್ ಬಗ್ಗೆ ಗೊಣಗಾಡಿದ್ದಾರೆ. ಕಳೆದ  ಬಾರಿ 6000 ರೂಪಾಯಿ ಕಟ್ಟಿದ್ದೆ. ಇದೀಗ 50,000 ರೂಪಾಯಿ ಬಿಲ್ ಬಂದಿದೆ ಎಂದು ಕೋಪದಿಂದ ಹೇಳಿದ್ದಾರೆ. ಇದರಲ್ಲಿ ನಮ್ಮ ತಪ್ಪೇನಿಲ್ಲ. ಮನೆಯಲ್ಲಿದ್ದು ಕೊಂಡು ಕರೆಂಟ್ ಜಾಸ್ತಿ ಬಳಸಿದ್ದೀರಿ. ಅದಕ್ಕೆ ಹಣ ಪಾವತಿಸಿ ಎಂದು ವಿದ್ಯುತ್ ಇಲಾಖೆ ಹೇಳಿದೆಯಂತೆ. ಲಾಕ್ ಡೌನ್ ನಿಂದಾಗಿ ಮೂರು ತಿಂಗಳ ಕಾಲ ದೇಶದ ಮಹಾನಗರಗಳಲ್ಲಿ ಮೀಟರ್ ರೀಡಿಂಗ್ ನಡೆದಿರಲಿಲ್ಲ. ಮುಂಬೈನಲ್ಲಿ ವಾಸಿಸುತ್ತಿರುವ ಹುಮಾ ಖುರೇಷಿಗೆ ಕೂಡ ಇದರ ಬಿಸಿ ತಟ್ಟಿದೆ. ಇದೀಗ ಮೂರು ತಿಂಗಳ ಒಟ್ಟು ಹಣ ಪಾವತಿಸುವಂತೆ ಸೂಚಿಸಲಾಗಿದೆ

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!