Newsics.Com
ಬೆಂಗಳೂರು: ತೆಲುಗಿನ ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ನಾರಾಯಣ ಹೃದಯಾಲಯ ತಜ್ಞರು ತಿಳಿಸಿದ್ದಾರೆ.
ಹೆಲ್ತ್ ಬುಲೆಟಿನ್ ಪ್ರಕಾರ , ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿದೆ. ಹೃದಯದ ರಕ್ತನಾಳುಗಳು ಬ್ಲಾಕ್ ಆಗಿರುವುದರಿಂದ ಅವುಗಳನ್ನು ಸರಿಪಡಿಸಲು ವೈದ್ಯರು ಸತತ ಪ್ರಯತ್ನ ನಡೆಸಿರುವುದಾಗಿ ತಿಳಿಸಿದೆ.
ಇಂಟ್ರಾ ಅಯೋರ್ಟಿಕ್ ಪಂಪ್, ವ್ಯಾಸೋಆಕ್ಟಿವ್ ನೆರವಿನಿಂದಲೂ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ.