ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣವಾಗಿರುವ ಇನ್ ಸ್ಟಾಗ್ರಾಂನಲ್ಲಿಯೂ ಆ್ಯಕ್ಟಿವ್ ಆಗಿರುವ ಸುದೀಪ್ ಬರೋಬ್ಬರಿ 14 ಲಕ್ಷ ಮಂದಿ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇಂತಿಪ್ಪ ಅಭಿನಯ ಚಕ್ರವರ್ತಿ ಫಾಲೋ ಮಾಡುತ್ತಿರುವುದು ಕೇವಲ ಐದು ಜನರನ್ನು ಮಾತ್ರ. ಅದರಲ್ಲಿ ಕನ್ನಡದ ಜನಪ್ರಿಯ ನಟಿ ಇರುವುದು ವಿಶೇಷ.
ಅನಿತಾ ಬನಾರಿ
newsics.com@gmail.com
ಅಭಿನಯ ಚಕ್ರವರ್ತಿ ಬಿರುದಾಂಕಿತ ಕಿಚ್ಚ ಸುದೀಪ್ ಅವರ ಬಗ್ಗೆ ಗೊತ್ತಿಲ್ಲದವರಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ದೊಡಗಡವರ ತನಕ ಕಿಚ್ಚ ಸುದೀಪ್ ಎಲ್ಲರ ಫೇವರಿಟ್. ನಟನೆಯ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗಿರುವ ಕಿಚ್ಚ ಬಹುಮುಖ ವ್ಯಕ್ತಿತ್ವ ಹೌದು. ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ನಿರೂಪಕ ಹಾಗೂ ಗಾಯಕರಾಗಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೇ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಿದ್ದಾರೆ.
ಪ್ರೇಮದ ಕಾದಂಬರಿ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಕಿಚ್ಚ ಸುದೀಪ್ ತಾಯವ್ವ ಸಿನಿಮಾದ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದರು. ನಂತರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಕಿಚ್ಚ ಬರೋಬ್ಬರಿ ನಲುವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ಮೆರೆದಾಡಿದ ಪ್ರತಿಭೆ. ಪರಭಾಷೆಯ ಸಿನಿರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುದೀಪ್ ನಿರೂಪಕರಾಗಿ ಕಿರುತೆರೆಯಲ್ಲಿಯೂ ಫೇಮಸ್ಸು.
ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣವಾಗಿರುವ ಇನ್ ಸ್ಟಾಗ್ರಾಂನಲ್ಲಿಯೂ ಆ್ಯಕ್ಟಿವ್ ಆಗಿರುವ ಸುದೀಪ್ ಬರೋಬ್ಬರಿ 14 ಲಕ್ಷ ಮಂದಿ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇಂತಿಪ್ಪ ಅಭಿನಯ ಚಕ್ರವರ್ತಿ ಫಾಲೋ ಮಾಡುತ್ತಿರುವುದು ಕೇವಲ ಐದು ಜನರನ್ನು ಮಾತ್ರ. ಅದರಲ್ಲಿ ಕನ್ನಡದ ಜನಪ್ರಿಯ ನಟಿ ಇರುವುದು ವಿಶೇಷ.
ಅಂದ ಹಾಗೆ ಸುದೀಪ್ ಫಾಲೋ ಮಾಡುತ್ತಿರುವ ಆ ನಟಿ ಬೇರಾರೂ ಅಲ್ಲ, ಕನ್ನಡ ಸಿನಿರಂಗದ ಮೋಹಕ ತಾರೆ, ಪದ್ಮಾವತಿಯಾಗಿ ಚಂದನವನದಲ್ಲಿ ಮೋಡಿ ಮಾಡಿದ ದಿವ್ಯಸ್ಪಂದನ ಅಲಿಯಾಸ್ ರಮ್ಯಾ. ಒಂದು ಕಾಲದಲ್ಲಿ ಕನ್ನಡ ಸಿನಿರಂಗದ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ ರಮ್ಯಾ ಅವರನ್ನೇ ನಮ್ಮ ಕಿಚ್ಚ ಸುದೀಪ್ ಫಾಲೋ ಮಾಡುತ್ತಿರುವುದು.
ರಂಗ ಎಸ್ ಎಸ್ ಎಲ್ ಸಿ, ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ, ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ಜತೆಯಾಗಿ ಅಭಿನಯಿಸಿ ಸಿನಿಪ್ರಿಯರನ್ನು ರಂಜಿಸಿರುವ ರಮ್ಯಾ ಹಾಗೂ ಸುದೀಪ್ ತೆರೆಯ ಹೊರತಾಗಿ ಇಂದಿಗೂ ಅತ್ಯುತ್ತಮ ಸ್ನೇಹಿತರೂ ಹೌದು. ಅದೇ ಕಾರಣದಿಂದ ಕಿಚ್ಚ ಸುದೀಪ್ ಮೋಹಕ ತಾರೆಯನ್ನು ಫಾಲೋ ಮಾಡುತ್ತಿರಬಹುದು.