newsics.com
ಮುದ್ದು ಮಗಳು ಸಮನ್ವಿ ಸಾವಿನಿಂದ ಕಂಗೆಟ್ಟಿದ್ದ ತಾಯಿ, ಕಿರುತೆರೆ ನಟಿ ಅಮೃತಾ ಬಾಳಲ್ಲಿ ಈಗ ಹೊಸ ಲವಲವಿಕೆ ಶುರುವಾಗಿದೆ. ಈಗ ಅಮೃತಾ ರೂಪೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ಅಮೃತಾ ಈಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಮೂಲಕ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಸಾಕಷ್ಟು ಸಿನಿಮಾ, ಕಿರುತೆರೆಯ ಸೀರಿಯಲ್ ಮತ್ತು ಶೋ ಮೂಲಕ ಗುರುತಿಸಿಕೊಂಡಿದ್ದ ಅಮೃತಾ ರೂಪೇಶ್ ಬದುಕಲ್ಲಿ ಭಾರೀ ಕಷ್ಟದ ಬಳಿಕ ಸಂತಸ ಮನೆ ಮಾಡಿದೆ.
ಅಮೃತಾ ರೂಪೇಶ್ (ಜುಲೈ.2)ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೋಟೆಲ್ ಮುಂದೆ ರಮ್ಯಾ ಹೈ ಡ್ರಾಮಾ: ನಟ ನರೇಶ್ ಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನ