newsics.com
ಮುಂಬೈ; 2018ರ ಬಳಿಕ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ನಟನೆಗೆ ಮರಳಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಐಶ್ವರ್ಯಾ ರೈ ಅಭಿನಯದ ಪೊನ್ನಿಯಿನ್ ಸೆಲ್ವನ್ ಚಿತ್ರ ತಯಾರಾಗುತ್ತಿದ್ದು, ಹೊಸ ಪೋಸ್ಟರ್ ಅನ್ನು ಸಿನಿಮಾದ ನಿರ್ಮಾಪಕರು ಹಂಚಿಕೊಂಡಿದ್ದು, ಚಿತ್ರವನ್ನ ಮಣಿರತ್ನಂ ನಿರ್ದೇಶಿಸುತ್ತಿದ್ದಾರೆ.
ಕೆಂಪು ಸೀರೆಯುಟ್ಟು, ಆಭರಣ ಧರಿಸಿ ನಂದಿನಿ ಪಾತ್ರದಲ್ಲಿ ಕಂಗೊಳಿಸುತ್ತಿರುವ ಐಶ್ವರ್ಯಾ ರೈ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
Vengeance has a beautiful face! Meet Nandini, the Queen of Pazhuvoor! 🔥#AishwaryaRaiBachchan 👑#PS1 releasing in theatres on 30th September in Tamil, Hindi, Telugu, Malayalam and Kannada. #PS1🗡️ #PonniyinSelvan #ManiRatnam @arrahman @LycaProductions @MadrasTalkies_ pic.twitter.com/6iDTaRHEyI
— PONNIYIN SELVAN ⚔️ (@son_of_cauvery) July 6, 2022
ಪ್ರತೀಕಾರಕ್ಕೆ ಸುಂದರವಾದ ಮುಖವಿದೆ! ಪಜುವೂರಿನ ರಾಣಿ ನಂದಿನಿಯನ್ನು ಭೇಟಿ ಮಾಡಿ. ಪೊನ್ನಿಯಿನ್ ಸೆಲ್ವನ್ ಭಾಗ 1 ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಪೋಸ್ಟರ್ ನಲ್ಲಿ ಹೇಳಲಾಗಿದೆ.
ಚಿತ್ರವು ಕಲ್ಕಿ ಕೃಷ್ಣಮೂರ್ತಿಯವರ ಐತಿಹಾಸಿಕ ಕಾದಂಬರಿ ಪೊನ್ನಿಯಿನ್ ಸೆಲ್ವನ್ (ಪೊನ್ನಿಯ ಮಗ) ಕಥೆ ಆಧರಿಸಿದೆ.
ಐಶ್ವರ್ಯಾ ರೈ ಬಚ್ಚನ್ ಕೊನೆಯದಾಗಿ 2018 ರ ಫನ್ನಿ ಖಾನ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ವಿಶ್ವ ಸುಂದರಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಪೋಸ್ಟರ್ ನಿಂದೇ ಸುದ್ದಿ ಮಾಡುತ್ತಿದ್ದಾರೆ.