ಧಾರಾವಾಹಿ ಹಾಗೂ ಸಿನಿಮಾ ಮೂಲಕ ಮನಸೆಳೆದ ನಟಿ ಮಯೂರಿ ಇಂದು ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ತಮ್ಮ ಸ್ನೇಹಿತ ಅರುಣ ಜತೆ ಮಯೂರಿ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.
ಬೆಂಗಳೂರಿನ ಜೆಪಿನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾನೆ ೩ ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮಯೂರಿ ವಿವಾಹವಾಗಿದ್ದಾರೆ.
ಇದು ಪ್ರೇಮವಿವಾಹವಾಗಿದ್ದು, ಕಳೆದ 10 ವರ್ಷದಿಂದ ನಟಿ ಮಯೂರಿ ಅರುಣರನ್ನು ಪ್ರೀತಿಸುತ್ತಿದ್ದರಂತೆ. ಇದೀಗ ಎರಡು ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದಾರೆ. ಮಯೂರಿ ಮದುವೆಗೆ ನಟ ಜೆಕೆ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ.
ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಮಯೂರಿ ಹೆಂಡ್ತಿ ಅಂತಾನೇ ಫೇಮಸ್ ಆಗಿದ್ದರು. ಆ ಬಳಿಕ ಕೃಷ್ಣಲೀಲಾ ಚಿತ್ರದ ಮೂಲಕ ಪೂರ್ಣಪ್ರಮಾಣದ ಹಿರೋಯಿನ್ ಆಗಿದ್ದ ಮಯೂರಿ ಇಷ್ಟಕಾಮ್ಯ, ರುಸ್ತುಂ ಸೇರಿ ಹಲವು ಚಿತ್ರದಲ್ಲಿ ನಟಿಸಿದ್ದಾರೆ.