ಬೆಂಗಳೂರು: ಜನಜೀವನಕ್ಕೆ ಮಗ್ಗುಲುಮುಳ್ಳಾಗಿ ಕಾಡುತ್ತಿರುವ ವೈರಿ ಕೊರೋನಾ ಎಲ್ಲರಿಗೂ ಒಂದಿಲ್ಲೊಂದು ಬದುಕಿನ ಪಾಠ ಕಲಿಸಿದೆ. ಇದಕ್ಕೆ ಕಿರು-ಹಿರಿತೆರೆ ಸ್ಟಾರ್’ಗಳೂ ಹೊರತಲ್ಲ. ಕಿರುತೆರೆ ನಟ ಅಶೋಕ್ ಕೊರೋನಾ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆದರೆ, ಕಿರುತೆರೆಯ ಪುಟ್ಟ ಗೌರಿ ಕೊರೋನಾ ವಾರಿಯರ್ ಆಗುವ ಮೂಲಕ ಗಮನ ಸೆಳೆದಿದ್ದಾರೆ.
ನಗರದಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಕೊರೋನಾ ಚೈನ್ಲಿಂಕ್ ಬ್ರೇಕ್ ಮಾಡುವ ಉದ್ದೇಶದಿಂದ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ.
ಆದರೆ ಕೊರೋನಾದಿಂದ ಸಾಕಷ್ಟು ಪೊಲೀಸರು ಸಮಸ್ಯೆಗೀಡಾಗಿದ್ದರಿಂದ ಈ ಭಾರಿ ಲಾಕ್ ಡೌನ್ ವೇಳೆ ನಗರ ಪೊಲೀಸ್ ಇಲಾಖೆ ಭದ್ರತೆಗೆ ಪೊಲೀಸರ ಕೊರತೆ ಎದುರಿಸುವ ಸ್ಥಿತಿಯಲ್ಲಿತ್ತು. ಹೀಗಾಗಿ ಭದ್ರತೆ, ವಾಹನ ತಪಾಸಣೆ ಸೇರಿದಂತೆ ವಿವಿಧ ಕೆಲಸಕ್ಕಾಗಿ ನಾಗರೀಕರನ್ನು ಸಿವಿಲ್ ಪೊಲೀಸ್ ವಾರ್ಡನ್ ಕೆಲಸಕ್ಕೆ ಆಹ್ವಾನಿಸಿತ್ತು.
ಪೊಲೀಸರ ಈ ಅಹ್ವಾನ ಮನ್ನಿಸಿ ಅಂದಾಜು 10 ಸಾವಿರ ಜನರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕಿರುತೆರೆ ನಟಿ ಹಾಗೂ ಪುಟ್ಟಗೌರಿ ಖ್ಯಾತಿಯ ರಂಜನಿ ಕೂಡ ಒಬ್ಬರು.
ಸದ್ಯ, ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿರುವ ರಂಜನಿಗೆ ಲಾಕ್ ಡೌನ್ ನಿಂದ ಶೂಟಿಂಗ್ ಗೂ ಬ್ರೇಕ್ ಸಿಕ್ಕಿತ್ತು. ಹೀಗಾಗಿ ಮನೆಯಲ್ಲಿ ಸುಮ್ಮನೇ ಕುಳಿತು ಸಮಯ ವೇಸ್ಟ್ ಮಾಡೋದು ಬೇಡ ಎಂಬ ಕಾರಣಕ್ಕೆ ರಂಜನಿ ತಮ್ಮ ಮನೆ ಸಮೀಪದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಲಿಮಿಟ್ಸ್ ನಲ್ಲಿ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡಿದ್ದಾರೆ. ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊರೋನಾ ವಾರಿಯರ್ ಆದ ‘ಪುಟ್ಟ ಗೌರಿ’
Follow Us