ಬೆಂಗಳೂರು: ಸ್ಯಾಂಡಲ್‍ವುಡ್‍ನಿಂದ ಬಹುಭಾಷೆಗೆ ಹಾರಿದ ನಟಿ ರಶ್ಮಿಕಾ ಮಂದಣ್ಣನಿಗೆ ಹೇಳಿಕೊಳ್ಳಲು ಮುಜುಗರವಾಗುವಂತಹ ಬ್ಯಾಡ್ ಹ್ಯಾಬಿಟ್ ಒಂದಿದೆಯಂತೆ. ಈ ವಿಚಾರವನ್ನು ಖುದ್ದು ರಶ್ಮಿಕಾ ಮಂದಣ್ಣನೇ ಅಭಿಮಾನಿಗಳ ಜತೆಯ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಯಾವುದೀ ಹವ್ಯಾಸ ಅಂದ್ರಾ….ಅದು ಮತ್ತೇನೂ ಅಲ್ಲ, ಕದಿಯೋದು. ಹೌದು ಶೂಟಿಂಗ್‍ಗಾಗಿ ಆಗಾಗ ಹೊಟೇಲ್‍ಗಳಲ್ಲಿ ಉಳಿಯೋ ರಶ್ಮಿಕಾ ಅಲ್ಲಿ ಒಳ್ಳೆಯ ಸುವಾಸನೆಯ ಶಾಂಪೂ ಕಂಡ್ರೆ ಕದಿಯದೇ ಬಿಡೋದೆ ಇಲ್ವಂತೆ.
ಈಗಾಗಲೇ ಒಮ್ಮೆ ಸುಂದರವಾಗಿದೆ ಅಂತ ಅನ್ನಿಸಿದ ಪಿಲ್ಲೋ ಕವರ್‍ಅನ್ನು ರಶ್ಮಿಕಾ ಕದ್ದಿದ್ದಾರಂತೆ. ತಮ್ಮ ಇನ್ಸ್ಟಾದಲ್ಲಿ ಅಭಿಮಾನಿಗಳ ಜತೆ ಸಂವಾದದ ವೇಳೆ ರಶ್ಮಿಕಾ ಇದನ್ನು ಯಾವುದೇ ಮುಜುಗರವಿಲ್ಲದೇ ಹೇಳಿಕೊಂಡಿದ್ದಾರೆ. ಆದರೆ ಕದ್ದ ಮೇಲೆ ಅವರಿಗೆ ಅಪರಾಧಿ ಭಾವ ಕಾಡುತ್ತಿದೆಯಂತೆ.
ಇನ್ನು ಸ್ಯಾಂಡಲ್‍ವುಡ್ ಸೇರಿದಂತೆ ಬೇರೆ-ಬೇರೆ ಭಾಷೆಗಳಲ್ಲಿ ನಟಿಸಿದ ರಶ್ಮಿಕಾಗೆ ಬಾಲಿವುಡ್,vಹಾಲಿವುಡ್ ಸೇರಿದಂತೆ ಚಿತ್ರರಂಗದಲ್ಲಿ ದೊಡ್ಡ ಹೆಸರುಗಳಿಸಬೇಕೆಂಬ ಆಸೆಯಿದೆಯಂತೆ. ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಉನ್ನತ ಸಾಧನೆ ಮಾಡೋ ಕನಸಿದೆ ಅಂತಾ ರಶ್ಮಿಕಾ ಅಭಿಮಾನಿಗಳಿಗೆ ಹೇಳಿದ್ದಾರೆ.
ಪ್ರತಿ ಚಿತ್ರದ ಶೂಟಿಂಗ್ ಕೂಡ ನನಗೆ ಪರೀಕ್ಷೆ ಇದ್ದಂತೆ ಭಾಸವಾಗುತ್ತದೆ ಅನ್ನೋ ರಶ್ಮಿಕಾ, ಒತ್ತಡ ನಿವಾರಿಸಲು ಮ್ಯೂಸಿಕ್ ಹಾಕಿಕೊಂಡು ಮನಸೋಇಚ್ಛೆ ಕುಣಿಯುತ್ತಾರಂತೆ. ಅಲ್ಲದೇ ದಕ್ಷಿಣ ಕೊರಿಯಾದ ಬ್ಯಾಂಡ್ ಸಂಗೀತ ಅಂದ್ರೆ ರಶ್ಮಿಕಾಎ ಇಷ್ಟವಂತೆ. ಅಲ್ಲದೇ ಸಿನಿಮಾದಂತೆ ಐಎಸ್ ಕ್ರೀಂಗೂ ರಶ್ಮಿಕಾ ಕರಗಿ ಹೋಗ್ತಾರಂತೆ. ಒಟ್ಟಿನಲ್ಲಿ ಸಿನಿಮಾ ನಟಿಯರು ತಮಗಿರೋ ಬ್ಯಾಡ್ ಹ್ಯಾಬಿಟ್‍ನಿಂದ ಸುದ್ದಿಯಾಗ್ತಿರೋ ಹೊತ್ತಲ್ಲಿ ರಶ್ಮಿಕಾ ಕೂಡ ತಮ್ಮ ಬ್ಯಾಡ್ ಹ್ಯಾಬಿಟ್ ರಿವೀಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ರಶ್ಮಿಕಾಗೂ ಇದೆಯಂತೆ ಬ್ಯಾಡ್ ಹ್ಯಾಬಿಟ್
Follow Us