♦ ಅನಿತಾ ಬನಾರಿ
newsics.com@gmail.com
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟು ಕಿರಿಕ್ ಹುಡುಗಿ ಎಂದೇ ಜನಪ್ರಿಯತೆ ಪಡೆದಿರುವ ಸಂಯುಕ್ತಾ ಹೆಗ್ಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಅವರು ಇತ್ತೀಚೆಗೆ ಮಾಡಿರುವ ಫೋಟೋಶೂಟ್ ಕಾರಣ.
ಸದಾ ಕಾಲ ಹಾಟ್ ಅವತಾರದ ಮೂಲಕ ಪಡ್ಡೆ ಹೈಕ್ಕಳ ಮನ ಕದ್ದಿರುವ ಸಂಯುಕ್ತಾ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಅವತಾರದಲ್ಲಿ ಕಾಣಿಸಿಕೊಂಡಿದ್ದು ಸಿನಿ ಪ್ರಿಯರು ಈ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್ ಆಗಿರುವ ಸಂಯುಕ್ತಾ ತುಂಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ಹಬ್ಬದ ಸಲುವಾಗಿ ಸಾಂಪ್ರದಾಯಿಕ ಫೋಟೋ ಹಾಕಿರುವ ಆಕೆ ಸೀರೆಗೆ ಸರಿದೂಗುವಂತಹ ಬೈ ತಲೆ ಬೊಟ್ಟು, ಜುಮ್ಕಿ, ವಿಭಿನ್ನ ಶೈಲಿಯ ಸರ, ಚಿನ್ನದ ಬಣ್ಣದ ಬಳೆ ಧರಿಸಿ ಮಿಂಚಿದ್ದಾರೆ. ಈ ಚೆಲುವೆಯ ಅಂದಕ್ಕೆ ಸೌಂದರ್ಯಪ್ರಿಯರು ಮಾರುಹೋಗಿದ್ದಾರೆ.
ಕಿರಿಕ್ ಪಾರ್ಟಿಯ ಆರ್ಯ ಆಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಸಂಯುಕ್ತಾ ಹೆಗ್ಡೆ ಮೊದಲ ಸಿನಿಮಾದಲ್ಲಿಯೇ ಮನೆಮಾತಾದ ಚೆಲುವೆ.
ಮುಂದೆ ಕಿರಿಕ್ ಪಾರ್ಟಿ ತೆಲುಗು ಸಿನಿಮಾದಲ್ಲಿಯೂ ನಟಿಸಿ ಅಲ್ಲೂ ಸೈ ಎನಿಸಿಕೊಂಡಿರುವ ಸಂಯುಕ್ತಾ ಕಾಲೇಜುಕುಮಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ, ತುರ್ತು ನಿರ್ಗಮನ ಸಿನಿಮಾದಲ್ಲಿ ಅಭಿನಯಿಸಿರುವ ಸಂಯುಕ್ತಾ ವಾಚ್ ಮ್ಯಾನ್, ಕೋಮಲಿ, ಪಪ್ಪಿ ಎನ್ನುವ ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.