ಬೆಂಗಳೂರು: ಕುಡಿದ ಮತ್ತಿನಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕಿ ವಂದನಾ ಹೊಡೆದಾಡಿಕೊಂಡಿದ್ದಾರೆ.
ಪಬ್ವೊಂದರಲ್ಲಿ ಈ ಹೊಡೆದಾಟ ನಡೆದಿದ್ದು, ಹೊಡೆದಾಟಕ್ಕೆ ಸಂಬಂಧಿಸಿದಂತೆ ಕೆಲ ವಿಡಿಯೋ ತುಣುಕುಗಳೂ ಪೊಲೀಸರಿಗೆ ಸಿಕ್ಕಿವೆ.
ಸಂಜನಾ ಪಾನಮತ್ತಳಾಗಿ ನನ್ನ ಮೇಲೆ ವಿಸ್ಕಿ ಬಾಟಲಿಯಿಂದ ಹಲ್ಲೆ ನಡೆಸಿ, ಬೈದಿದ್ದಾರೆ, ಮದ್ಯವನ್ನು ನನ್ನ ಮುಖದ ಮೇಲೆ ಎರಚಿದ್ದಾರೆಂದು ನಿರ್ಮಾಪಕಿ ವಂದನಾ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪವನ್ನು ಅಲ್ಲಗಳೆದಿದ್ದ ಸಂಜನಾ, ಅಂತಹ ಘಟನೆ ನಡೆದಿಲ್ಲ. ನಮ್ಮಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಅಷ್ಟೇ ಎಂದಿದ್ದರು. ವಿಡಿಯೋ ತುಣುಕು ಸಿಕ್ಕಿದೆ ಎಂಬುದನ್ನು ತಿಳಿದ ಬಳಿಕ ‘ವಂದನಾ ಅವರೇ ನನ್ನ ಮೇಲೆ ಹಲ್ಲೆ ಮಾಡಿದರು. ಇದರಿಂದ ನನ್ನ ಎದೆ ಹಾಗೂ ಕೈ ಭಾಗಕ್ಕೆ ಏಟು ಬಿದ್ದಿದೆ ಎಂದು ಸಂಜನಾ ದೂರಿದರು.
ಇವರಿಬ್ಬರ ಕಿತ್ತಾಟದ ಪ್ರಕರಣ ಕಬ್ಬನ್ಪಾರ್ಕ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರನ್ನೂ ಕರೆಸಿ ಮಾತಾಡುವುದಾಗಿ ಬೆಂಗಳೂರು ಕೇಂದ್ರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
