ದೆಹಲಿ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ಸ್ನೇಹಿತೆ ಕಾಮ್ಯಾ ಅರೋರಾ ಜತೆ ಮಾಲ್ಡೀವ್ಸ್ ನಲ್ಲಿ ರಜೆಯ ಮಜ ಅನುಭವಿಸುತ್ತಿದ್ದಾರೆ.
ವಿಷಯ ಇಷ್ಟೇ ಅಲ್ಲ, ಪಿಂಕ್ ಬಣ್ಣದ ಬಿಕಿನಿ ತೊಟ್ಟು ಕಡಲ ಕಿನಾರೆಯಲ್ಲಿ ಮಿಂದೇಳುತ್ತಿರುವ ಫೋಟೋಗಳನ್ನೂ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದು, ಹುಡುಗರ ನಿದ್ದೆಗೆಡಿಸಿದ್ದಾರೆ. ನಟಿ ಸಾರಾ ಅವರ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌಸ್ಬೋಟ್ನಲ್ಲಿ ಕುಳಿತು ಕ್ಯಾಮರಾಗೆ ಪೋಸ್ ನೀಡಿರುವುದು, ಸ್ನೇಹಿತೆಯೊಟ್ಟಿಗೆ ಭೋಜನ ಸವಿಯುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಇನ್ನು, ಕೂಲಿ ನಂಬರ್ 1 ಚಿತ್ರದಲ್ಲಿ ವರುಣ್ ಧವನ್ಗೆ ನಾಯಕಿಯಾಗಿ ನಟಿಸುತ್ತಿರುವ ಸಾರಾ, ಇಮ್ತಿಯಾಕ್ ಅಲಿ ನಿರ್ದೇಶನ ಲವ್ ಅಜ್ ಕಲ್ 2 ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ನಟಿ ಸಾರಾ ಬಿಕಿನಿ ಫೋಟೋ ಸಖತ್ ವೈರಲ್
Follow Us