newsics.com
ಚಂದನವನದ ಗೊಂಬೆ ಖ್ಯಾತಿಯ ಹಿರಿಯ ನಟಿ ಶ್ರುತಿ ಸದ್ಯಕ್ಕೆ ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.
ಆದರೆ ಇದೆಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ, ಶ್ರುತಿ ಕೃಷಿಯತ್ತ ಹೊರಳಿದ್ದಾರೆ. ಹೊಲಕ್ಕಿಳಿದು ಉಳುಮೆ ಮಾಡಲು ಆರಂಭಿಸಿದ್ದಾರೆ. ತಾನು ಕೃಷಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
ಅವರು ಉಳುಮೆ ಮಾಡುತ್ತಿರುವ ವೀಡಿಯೋ ಭಾರೀ ವೈರಲ್ ಆಗಿದೆ. ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ಶ್ರುತಿಗೆ ಮಗಳು ಗೌರಿ ಮತ್ತು ತಾಯಂದಿರು ಕೂಡ ಸಾಥ್ ನೀಡಿದ್ದಾರೆ.
ನಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆಯಾಗಿದೆ. ಭಗವಂತನಿಗೆ ಕೋಟಿ ನಮನಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಟಿಯ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ಬರುತ್ತಿದ್ದು, ಹಲವರು ಶ್ರುತಿಯ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಇದು ಎಲ್ಲರಿಗೂ ಸ್ಪೂರ್ತಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ನಟಿ ಶೃತಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂನಲ್ಲೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡದ ‘ಶೃತಿ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಆದಾದ ಬಳಿಕ ತಮ್ಮ ಮೂಲ ಹೆಸರು ಗಿರಿಜಾ ಬದಲು ಶ್ರುತಿ ಎಂದೇ ಪರಿಚಿತರಾದರು.
https://www.instagram.com/tv/Cd7H38AIxEr/?utm_source=ig_web_copy_link