ಮುಂಬೈ: ಕೊರೋನಾದ ಕಾರಣ ಸಿನೆಮಾ ಚಿತ್ರೀಕರಣ ಹೆಚ್ಚಾಗಿ ನಡೆಯುತ್ತಿಲ್ಲ. ನಟ ನಟಿಯರು ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಮಲ ಪಾಲ್ ಕೂಡ ಇವರಲ್ಲಿ ಸೇರಿದ್ದಾರೆ. ತೆಲುಗು , ತಮಿಳು ಮತ್ತು ಮಲೆಯಾಂ ಸಿನೆಮಾದಲ್ಲಿ ಅಮಲ ಪಾಲ್ ಹೆಸರು ಗಳಿಸಿದ್ದಾರೆ.
ಇದೀಗ ಮನೆಯಲ್ಲಿರುವ ಅಮಲ ಪಾಲ್ ಸಾಮಾಜಿಕ ಜಾಲ ತಾಣಗಳ ಮೂಲಕ ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ಚಿತ್ರ ಶೇರ್ ಮಾಡಿರುವ ಅಮಲ ಪಾಲ್, ನನ್ನೊಳಗೆ ಕಳೆದುಹೋಗಿರುವ ಚಿಕ್ಕ ಹುಡುಗಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಚಿಕ್ಕ ಮಗುವಿಗಾಗಿ ಪ್ರೇಮ ಪತ್ರ ಬರೆಯಲು ಹೊರಟಿದ್ದೇನೆ ಎಂದಿದ್ದಾರೆ ಪಾಲ್
ಅಂತೂ ಇಂತೂ ಕೊರೋನಾದ ಹೆಸರಿನಲ್ಲಿ ಮನೆಯಲ್ಲಿ ಕುಳಿತಿರುವ ತಾರೆಯರು, ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ.