newsics.com
ಅಮೇರಿಕದ ಬೋಸ್ಟನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಅಮೃತಮತಿ ಸಿನಿಮಾ ಆಯ್ಕೆಯಾಗಿದೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಲನಚಿತ್ರ ಈಗಾಗಲೇ ನೋಯ್ಡಾ, ಅಂಟ್ಲಾಂಟಾ ಹಾಗೂ ಆಸ್ಟ್ರಿಯಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ಅಲ್ಲದೇ ನೋಯ್ಡಾ ಚಲನಚಿತ್ರ ಚಿತ್ರೋತ್ಸವದಲ್ಲಿ ಚಿತ್ರದ ಉತ್ತಮ ನಟನೆಗಾಗಿ ನಟಿ ಹರಿಪ್ರಿಯಾ ಉತ್ತಮನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
13ನೇ ಶತಮಾನದಲ್ಲಿ ಜನ್ನ ಕವಿ ಬರೆದಿರುವ ಯಶೋಧರ ಚರಿತೆಯನ್ನು ಆಧರಿಸಿ ನಿರ್ಮಿಸಲಾದ ಈ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ.
ಬೋಸ್ಟನ್ ಚಿತ್ರೋತ್ಸವಕ್ಕೆ ಕನ್ನಡದ ಅಮೃತಮತಿ ಆಯ್ಕೆ
Follow Us