ಲಾಕ್ ಡೌನ್ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಹೇರ್ ಕಟ್ ಮಾಡಿಸುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಅವರ ಸಹೋದರನೇ ಕಟ್ಟಿಂಗ್ ಮಾಡಿದ್ದಾರೆ!
ಮುಂಬೈನ ತಮ್ಮ ಮನೆಯಲ್ಲಿ ಟ್ರಿಮ್ಮರ್ ಮೂಲಕ ತಮ್ಮ ರಾಜು ಖೇರ್ ಕ್ಷೌರ ಮಾಡುವ ಮಾಡುತ್ತಿರುವ ವಿಡಿಯೋವನ್ನ ಅನುಪಮ್ ಖೇರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಸಖತ್ ವೈರಲ್ ಆಗಿದ್ದು, 4.16 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಬಾತ್ ರೂಮ್ ನಲ್ಲಿ ಕನ್ನಡಿ ಮುಂದೆ ನಿಂತು ಟ್ರಿಮ್ ಮಾಡಿಸಿಕೊಳ್ಳುವ ವಿಡಿಯೋ ಸಾಕಷ್ಟು ತಮಾಷೆಯಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಟ್ರಿಮ್ಮಿಂಗ್ ಮುಗಿದ ತಕ್ಷಣ ರಾಜು ಅವರು ಮುಗಿಯಿತು ಎನ್ನುತ್ತಾರೆ. ಇದನ್ನ ಕೇಳಿದ ಅನುಪಮ್, ಜಲ್ದಿ ಹೋಗಯ, ಜಲ್ದಿ ಹೋಗಯ ಎಂದು ನಗುತ್ತಾರೆ. ಇಬ್ಬರ ಮ್ಯಾನರಿಸಂ ನಗೆ ತರಿಸುವಂತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ನಾವು ಬೊಕ್ಕ ತಲೆಯವರಲ್ಲ (ವಿ ಆರ್ ನಾಟ್ ಬಾಲ್ಡ್), ನಮ್ಮ ಕೂದಲಿಗಿಂತ ನಾವು ಎತ್ತರದಲ್ಲಿ ಇರುವವರು (ವಿ ಆರ್ ಜಸ್ಟ್ ಟಾಲರ್ ದೆನ್ ಅವರ್ ಹೇರ್) ಎಂದು ಬರೆದುಕೊಂಡು, ಬ್ರದರ್ಸ್, ಜಲ್ದಿ ಹೋಗಯ ಎಂಬುದನ್ನು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.
https://www.instagram.com/p/CBQ61Fpg22I/?utm_source=ig_embed