ತಿರುವನಂತಪುರಂ: ಖ್ಯಾತ ನಟ ಮೋಹನ್ ಲಾಲ್ ಮುಖ್ಯ ಪಾತ್ರ ವಹಿಸಿರುವ ಬಹು ನಿರೀಕ್ಷೆಯ ಮರಾಕರ್ ಅರಬಿಕಡಲಿಂದೇ ಸಿಂಹಂ ಚಿತ್ರದ ಪೋಸ್ಟ್ ರ್ ಬಿಡುಗಡೆಯಾಗಿದೆ. ಪ್ರಿಯದರ್ಶನ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಸುನಿಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದಲ್ಲಿ ಆಡಳಿತ ನಡೆಸಿದ್ದ ಸಾಮೂದಿರಿ ಅರಸರು ಅತ್ಯಂತ ಶಕ್ತಿಶಾಲಿ ನೌಕಾಪಡೆ ಹೊಂದಿದ್ದರು. ಕುಂಜ್ಞಾಲಿ ಮರಾಕರ್ ಇದರ ದಂಡನಾಯಕರಾಗಿದ್ದರು. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಚಿತ್ರ ನಿರ್ಮಿಸಲಾಗಿದೆ. ಮಾರ್ಚ್ 26 ರಂದು ಈ ಚಿತ್ರ ತೆರೆ ಕಾಣಲಿದೆ