newsics.com
ಬಿಗ್‌ಬಾಸ್ ಮನೆಯಲ್ಲಿ ಆರ್ಯವರ್ಧನ್ ಗಡ್ಡ, ಮೀಸೆ ಮತ್ತು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆದು ಬೋಳಾಗಿ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ಅವರ ಗುರುತೇ ಸಿಗದ ಮಟ್ಟಕ್ಕೆ ಬದಲಾಗಿದ್ದಾರೆ.
ಬಿಗ್‌ಬಾಸ್ ಮನೆಗೆ ಬಂದ ಮರುದಿನವೇ ಅವರ ಅವರ ಲುಕ್ ಬದಲಾಗಿದೆ. ಆರ್ಯವರ್ಧನ್ ಅವರಿಗೆ ಉಳಿದ ಸ್ಪರ್ಧಿಗಳು ಒಂದೊಂದು ಹೆಸರು ಹೇಳುವ ಮೂಲಕ ಆರ್ಯವರ್ಧನ್ ಕಾಲೆಳೆಯುತ್ತಿದ್ದಾರೆ. ಆರ್ಯವರ್ಧನ್ ಹೊಸ ಸ್ಟೈಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂದು ಹೊಸ ಲುಕ್ ಮೂಲಕ ಸುದ್ದಿ ಮಾಡಿರುವ ಆರ್ಯವರ್ಧನ್ ಗೂರುಜಿ ನಿನ್ನೆ ಆಸ್ತಿ ವಿಚಾರವಾಗಿ ಸುದ್ದಿಯಾಗಿದ್ದರು. ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ. ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ’ ಎಂದು ಆರ್ಯವರ್ಧನ್ ಹೇಳಿದರು. ಅಂದಹಾಗೆ ಆರ್ಯವರ್ಧನ್ ಆಸ್ತಿ ಕೇಳಿ ಬಿಗ್‌ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದರು.