newsics.com
ಮುಂಬೈ: ಕ್ರೀಡಾ ಕ್ಷೇತ್ರಕ್ಕೆ ವಿದಾಯ ಘೋಷಿಸಿರುವ ಖ್ಯಾತ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಶುಭ ಕೊರಿದ್ದಾರೆ.
ನಿಮ್ಮ ಎರಡನೆ ಇನ್ನಿಂಗ್ಸ್ ಉತ್ತಮವಾಗಿರಲಿ ಎಂದು ಅಜರುದ್ದೀನ್ ಹಾರೈಸಿದ್ದಾರೆ. ಕ್ರೀಡಾ ವಿಶ್ಲೇಷಕರಾಗಿ ನೀವು ಶೀಘ್ರ ಕಾಣಿಸಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಮೊಹಮ್ಮದ್ ಅಜರುದ್ದೀನ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ
ಮೊಹಮ್ಮದ್ ಅಜರುದ್ದೀನ್ ಮತ್ತು ಸಾನಿಯಾ ಮಿರ್ಜಾ ಇಬ್ಬರೂ ಹೈದರಾಬಾದ್ ಪ್ರತಿಭೆಗಳಾಗಿದ್ದಾರೆ.