Tuesday, April 13, 2021

ರಷ್ಯಾದಲ್ಲಿ ಬಾಹುಬಲಿ ಸಿನೆಮಾ ಸೂಪರ್ ಹಿಟ್

ಮಾಸ್ಕೊ: ಭಾರತದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಎಸ್ ಎಸ್ ರಾಜಾ ಮೌಳಿ ನಿರ್ದೇಶನದ ಬಾಹು ಬಲಿ ಸಿನೆಮಾ ಇದೀಗ ರಷ್ಯಾದಲ್ಲಿ ಸೂಪರ್ ಹಿಟ್ ಆಗಿದೆ. ರಷ್ಯಾದ ಟೆಲಿವಿಷನ್ ಜಾಲಗಳಲ್ಲಿ  ಬಾಹು ಬಲಿ ಚಿತ್ರ ಪ್ರಸಾರವಾಗುತ್ತಿದೆ. ರಷ್ಯನ್ ಭಾಷೆಗೆ ಇದನ್ನು ಡಬ್ ಮಾಡಲಾಗಿದೆ. ಹಾಡುಗಳಿಗೆ ಸಬ್ ಟೈಟಲ್ ನೀಡಲಾಗಿದೆ. ಭಾರತದಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಈ ಸಂಬಂಧ ಟ್ವೀಟ್ ಮಾಡಿದ್ದು, ಹರ್ಷ ವ್ಯಕ್ತಪಡಿಸಿದೆ. 2017ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಬಾಹುಬಲಿ-2  ಬಾಕ್ಸ್  ಆಫೀಸ್ ನಲ್ಲಿ ಹಣ ಕೊಳ್ಳೆ ಹೊಡೆದಿತ್ತು.  ಜಾಗತಿಕ ಮಟ್ಟದಲ್ಲಿ  1810 ಕೋಟಿಗಿಂತಲೂ ಹೆಚ್ಚು ಹಣ ಗಳಿಸಿತ್ತು. 2015ರಲ್ಲಿ ಬಾಹುಬಲಿ-1 ಬಿಡುಗಡೆಯಾಗಿತ್ತು. ಇದು 685 ಕೋಟಿ ರೂಪಾಯಿಗಿಂತಲೂ ಹೆಚ್ಚು  ಆದಾಯಗಳಿಸಿತ್ತು. ಮಹಿಷ್ಮತಿ ಎಂಬ ರಾಜ್ಯದಲ್ಲಿ ರಾಜಕುಮಾರರ ನಡುವೆ ಸಿಂಹಾಸನಕ್ಕಾಗಿ ನಡೆದ ಜಗಳ, ಹತ್ಯೆ  ಮತ್ತು ಪಿತೂರಿ ಈ ಚಿತ್ರದ ಮುಖ್ಯ ತಿರುಳಾಗಿದೆ.ಈ ಹಿಂದೆ ರಾಜ್ ಕಪೂರ್  ಅಭಿನಯ ರಷ್ಯಾದ ಜನರ ಮನಸೂರೆಗೊಂಡಿತ್ತು.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!