Saturday, November 27, 2021

ಕ್ಯಾಟ್ ವಾಕ್ ಸುಂದರಿಗೆ ಸಿಎಂ ಬಿಎಸ್ ವೈ ಶುಭ ಹಾರೈಕೆ

Follow Us

ಬೆಂಗಳೂರು: ಮಿಸ್ ಯೂನಿವರ್ಸ್ ಕಿರೀಟಿ ಮುಡಿಗೇರಿಸಿಕೊಳ್ಳಿ ಎಂದು ತಮ್ಮನ್ನು ಭೇಟಿಯಾದ ಕ್ಯಾಟ್ ವಾಕ್ ಸುಂದರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಹಾರೈಸಿದರು.
ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಉಡುಪಿಯ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಕ್ಯಾಟ್ ವಾಕ್ ಸುಂದರಿ. ಅಡ್ಲೀನ್ ಕ್ಯಾಸ್ಟಲಿನೋ ಮಿಸ್ ಯೂನಿವರ್ಸ್ 2020ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಫೆಬ್ರವರಿ 22ರಂದು ಲಿವಾ ಫ್ಲೂಯಿಡ್ ಷ್ಯಾಷನ್​ ಮಾಲೀಕತ್ವದ ಮಿಸ್​ ದಿವಾ 2020ಯ 8ನೇ ಆವೃತ್ತಿಯ ಸ್ಪರ್ಧೆ ಮುಂಬೈನ ಅಂಧೇರಿ ವೆಸ್ಟ್​ನಲ್ಲಿರುವ ಯಶ್​ ರಾಜ್ ಸ್ಟುಡಿಯೋದಲ್ಲಿ ನಡೆದಿತ್ತು. ಆಯ್ದ 20 ಸ್ಪರ್ಧಿಗಳು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಭಾಗವಹಿಸಿದ್ದರು. ಲೀವಾ ಮಿಸ್ ದಿವಾದ ಮಿಸ್​ ಯೂನಿವರ್ಸ್ ಇಂಡಿಯಾ 2020ರ ಕಿರೀಟವನ್ನು ಉಡುಪಿಯ ಅಡ್ಲೀನ್ ಕ್ಯಾಸ್ಟಲಿನೊ ಮುಡಿಗೇರಿಸಿಕೊಂಡಿದ್ದರು.

ಮತ್ತಷ್ಟು ಸುದ್ದಿಗಳು

Latest News

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ....

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...
- Advertisement -
error: Content is protected !!