‘ಇಕ್ಕಟ್’ ಸಿನಿಮಾ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡಿರುವ ಭೂಮಿ ಶೆಟ್ಟಿ ಮುಂದೆ ವಾಸಂತಿ ಎನ್ನುವ ಕಲಾತ್ಮಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ವಾಸಂತಿಯಲ್ಲಿ ಗೇರು ಫ್ಯಾಕ್ಟರಿಗೆ ಹೋಗುವ ಹೆಣ್ಣು ಮಗಳಾಗಿ ಭೂಮಿ ಶೆಟ್ಟಿ ನಟಿಸಿದ್ದಾರೆ.
ಅನಿತಾ ಬನಾರಿ
newsics.com@gmail.com
ಕಿನ್ನರಿ ಧಾರಾವಾಹಿಯ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಭೂಮಿ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದ ಚೆಲುವೆ. ಕಿನ್ನರಿ ಧಾರಾವಾಹಿಯ ನಂತರ ತೆಲುಗು ಧಾರಾವಾಹಿ ‘ನಿನ್ನೇ ಪೆಳ್ಳಡಾತಾ’ದಲ್ಲಿ ನಾಯಕಿಯಾಗಿ ನಟಿಸಿದರು. ಕನ್ನಡ ಕಿರುತೆರೆಯ ಜನಪದ ರಿಯಾಲಿಟಿ ಶೋ ಬಿಗ್ ಬಾಸ್ನ ಸೀಸನ್ 8ರ ಸ್ಪರ್ಧಿಯಾಗಿದ್ದ ಭೂಮಿ ಶೆಟ್ಟಿ ತಮ್ಮ ಮಾತು, ನಡವಳಿಕೆ ಮೂಲಕ ಜನರ ಮನ ಸೆಳೆದರು.
ರಿಯಾಲಿಟಿ ಶೋ ಬಳಿಕ ನಿರೂಪಕಿಯಾಗಿ ಬಡ್ತಿ ಪಡೆದ ಭೂಮಿ ಶೆಟ್ಟಿ ಅಲ್ಲೂ ಸೈ ಎನಿಸಿಕೊಂಡರು. ಆ ಸಮಯದಲ್ಲಿ ಹಿರಿತೆರೆ ಆಕೆಯನ್ನು ಕೈಬೀಸಿ ಕರೆಯಿತು. ಬಂದ ಅವಕಾಶ ಬೇಡ ಎನ್ನದೇ ಭೂಮಿ ಮುನ್ನಡೆದರು.
ಇಕ್ಕಟ್ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡಿರುವ ಭೂಮಿ ಶೆಟ್ಟಿ ಮುಂದೆ ವಾಸಂತಿ ಎನ್ನುವ ಕಲಾತ್ಮಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ವಾಸಂತಿಯಲ್ಲಿ ಗೇರು ಫ್ಯಾಕ್ಟರಿಗೆ ಹೋಗುವ ಹೆಣ್ಣು ಮಗಳಾಗಿ ಭೂಮಿ ನಟಿಸಿದ್ದಾರೆ. ನಂತರ ವನಜ ಎನ್ನುವ ವೆಬ್ ಸೀರಿಸ್ನಲ್ಲಿ ಕಾಣಿಸಿಕೊಂಡಿರುವ ಭೂಮಿ ಶೆಟ್ಟಿ ಹೋಟೆಲ್ ವನಜ, ಮಾಂಸಾಹಾರಿ ಇದರ ಓನರ್ ಆಗಿ ಕಮಾಲ್ ಮಾಡಿದ್ದಾರೆ.
ಸದ್ಯ ಸಂದೇಶ್ ಶೆಟ್ಟಿ ನಿರ್ದೇಶನದ ‘ಇನಾಮ್ದಾರ್’ನಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಭೂಮಿ ಶೆಟ್ಟಿ. ಪ್ರಸ್ತುತ ಸಿನಿಮಾದಲ್ಲಿ ಟ್ರೈಬಲ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸಂದೇಶ್ ಅವರು ನನಗೆ ಕಥೆ ಹೇಳಿದರು. ಕಥೆ ಕೇಳಿದ ಕೂಡಲೇ ನಟಿಸಬೇಕು ಎಂದು ಅನ್ನಿಸಿತು. ನಾನು ಪಾತ್ರಕ್ಕಾಗಿ ನಿರ್ದೇಶಕ ಸಂದೇಶ್ ಅವರು ನನಗೆ ಕಥೆ ಹೇಳಿದ ತಕ್ಷಣ ಈ ಪಾತ್ರದಲ್ಲಿ ಅಭಿನಯಿಸಬೇಕೆಂದು ಆಸೆಯಾಯಿತು. ನಾನು ಈ ಪಾತ್ರಕ್ಕಾಗಿ ವಿಶೇಷ ತಯಾರಿ ಕೂಡಾ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ಭೂಮಿ ಶೆಟ್ಟಿ.
ಒಟ್ಟಿನಲ್ಲಿ ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಭೂಮಿ ಇದೀಗ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.