newsics.com
ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್‌ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್‌ನಲ್ಲಿದ್ದಾರೆ.
ಈ ನಟಿ ತಮ್ಮ ಗೆಳತಿಯರ ಜೊತೆಗೆ ಥೈಲ್ಯಾಂಡ್ ಪ್ರವಾಸದಲ್ಲಿದ್ದು, ಸಖತ್ ಹಾಟ್ ಆಗಿರೋ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯರ ಸಖತ್ ಆಗಿರೋ ಫೋಟೋಗಳು ವೈರಲ್ ಆಗುತ್ತಿವೆ.
ಸದಾ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸುವ ಈ ಚೆಲುವೆ, ಆವಾಗವಾಗ ತಮ್ಮ ಸ್ನೇಹಿತರ ಜತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ನಟಿ, ತಮ್ಮ ಮುದ್ದಾದ ಫೋಟೊಗಳ ಮೂಲಕವೇ ಜನರ ಜತೆ ಸದಾ ಕನೆಕ್ಟ್ ಆಗಿರುತ್ತಾರೆ.
ಕಮಲಿ’ ಧಾರಾವಾಹಿಯ ಮೂಲಕ ಚಿರಪರಿಚಿತರಾದ ಅಮೂಲ್ಯ ಗೌಡ, ನಂತರ ‘ಪುನರ್ ವಿವಾಹ’ ಮತ್ತು ‘ಆರಮನೆ’ ಧಾರಾವಾಹಿಗಳನ್ನು ಮಾಡಿದರು.
ಧಾರಾವಾಹಿಯಲ್ಲಿ ನೆಗೆಟಿವ್ ಲೀಡ್ ನಲ್ಲಿ ವಿಶೇಷ ಮನ್ನಣೆ ಪಡೆದರು.
ಕಾರ್ತಿಕ್ ದೀಪಂ ಧಾರಾವಾಹಿಯಲ್ಲಿ ಜ್ವಾಲಾ (ಶೌರ್ಯ) ಆಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ ಅಮೂಲ್ಯ ಗೌಡ.